May 12, 2024

Bhavana Tv

Its Your Channel

ಕೋವಿಡ್ ಸೋಂಕಿನಿ೦ದ ಮೃತಪಟ್ಟ ತಾಲೂಕಿನ ಹಿರಿಯ ಪತ್ರಕರ್ತ ಸಿಂ.ಕಾ.ಸುರೇಶ್ ಅವರ ಪತ್ನಿ ಉಮಾಸುರೇಶ್ ಅವರಿಗೆ ಶ್ರೀ ಪಂಚಭೂತೇಶ್ವರ ಮಠದ ವತಿಯಿಂದ ಆರ್ಥಿಕ ನೆರವು ನೀಡಿ ಸಾಂತ್ವನ

ಮOಡ್ಯ: ಜಿಲ್ಲೆಯ ಕೆ.ಆರ್.ಪೇಟೆ- ತಾಲೂಕಿನ ಬೆಡದಹಳ್ಳಿ ಶ್ರೀ ಪಂಚಭೂತೇಶ್ವರ ಮಠದಲ್ಲಿ ಮಾಸಿಕ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕೋವಿಡ್ ಸೋಂಕಿನಿ೦ದ ಮೃತಪಟ್ಟ ತಾಲೂಕಿನ ಹಿರಿಯ ಪತ್ರಕರ್ತ ಸಿಂ.ಕಾ.ಸುರೇಶ್ ಅವರ ಪತ್ನಿ ಉಮಾಸುರೇಶ್ ಅವರಿಗೆ ಮಠದ ವತಿಯಿಂದ ಆರ್ಥಿಕ ನೆರವು ನೀಡಿ ಸಾಂತ್ವನ ಹೇಳಲಾಯಿತು.ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಪಂಚಭೂತೇಶ್ವರ ಮಠದ ಧರ್ಮಾಧಿಕಾರಿ ಶ್ರೀ ರುದ್ರಮುನಿ ಸ್ವಾಮೀಜೀಯವರು ಮಾತನಾಡಿ ಪತ್ರಕರ್ತರಾಗಿ ಸಮಾಜಮುಖಿ ಭಾವನೆಯನ್ನು ಹೊಂದಿದ್ದ ಸುರೇಶ್ ಅವರ ಕುಟುಂಬದೊAದಿಗೆ ಶ್ರೀ ಪಂಚಭೂತೇಶ್ವರ ಮಠದ ಸದ್ಭಕ್ತರು ಇದ್ದೇವೆ, ನಿಮ್ಮ ಏನೇ ಕಷ್ಟ ಸುಖಗಳಿದ್ದರೂ ಕೈಲಾದ ಸಹಕಾರವನ್ನು ನೀಡುತ್ತೇವೆ, ನೀವು ಧ್ಯೆರ್ಯದಿಂದ ಜೀವನ ನಡೆಸಬೇಕು. ನಿಮಗೆ ಇರುವ ಒಬ್ಬನೇ ಮಗನ ಭವಿಷ್ಯಕ್ಕಾಗಿ ನಿಮಗಿರುವ ನೋವನ್ನು ಮರೆತು ಮಗನ ಭವಿಷ್ಯ ರೂಪಿಸಲು ಮುಂದಾಗಬೇಕು. ಹುಟ್ಟು-ಸಾವು ದೇವರ ಇಚ್ಚೆಯಂತೆ ಆಗುತ್ತದೆ. ಯಾರಿಗೆ ಎಷ್ಟು ಆಯಸ್ಸು ಅಷ್ಟು ದಿನ ದೇವರ ಕೆಲಸ, ಸಮಾಜದ ಕೆಲಸವನ್ನು ಮಾಡಿದರೆ ದೇವರು ನಮ್ಮ ಕುಟುಂಬಕ್ಕೆ ಒಳಿತನ್ನು ಮಾಡುತ್ತಾನೆ. ನಾವು ಬದುಕಿದಷ್ಟು ದಿನವು ಉತ್ತಮ ಸಮಾಜಮುಖಿ ಕೆಲಸ ಮಾಡಲು ಎಲ್ಲರೂ ಮುಂದಾಗಬೇಕು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಷ್ಟ ಇದ್ದೇ ಇರುತ್ತದೆ, ಕಷ್ಟಕ್ಕೆ ಸ್ಪಂಧಿಸಿ ನಾನಿದ್ದೇನೆ ಎಂದು ಸಾಂತ್ವನದ ಮಾತುಗಳನ್ನು ಹೇಳಿದರೆ ಕಷ್ಟದಲ್ಲಿರುವ ವ್ಯಕ್ತಿಗೆ ನೆಮ್ಮದಿ ಜೀವನ ನಡೆಸುವ ಧ್ಯೆರ್ಯ ಬರುತ್ತದೆ. ನಾನು ಏಕಾಂಗಿಯಲ್ಲ ನನ್ನೊಂದಿಗೆ ಸಾಕಷ್ಟು ಜನ ಇದ್ದಾರೆ ಎಂಬ ಉತ್ಸಾಹ ಬರುತ್ತದೆ ಇಂತಹ ಧ್ಯೆರ್ಯವನ್ನು ಶ್ರೀಮತಿ ಉಮಾಸುರೇಶ್ ಅವರಿಗೆ ಶ್ರೀ ಹರಿಹರೇಶ್ವರ ಸ್ವಾಮಿಗಳು ನೀಡಲಿ ಎಂದು ಪ್ರಾರ್ಥಿಸಿದರು. ಕೋರೋನಾ ವಾರಿರ‍್ಸ್ ಆಗಿ ಸುಮಾರು ೬ ತಿಂಗಳು ಕಾಲ ತಾಲೂಕಿನಲ್ಲಿ ಕೆಲಸ ಮಾಡಿದ ಸುರೇಶ್ ಅವರು ಕೋರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಇವರಿಗೆ ತಾಲೂಕು ಆಡಳಿತವು ಸಹ ಕೊರೋನಾ ವಾರರ‍್ಸ್ ಎಂದು ಪ್ರಮಾಣಪತ್ರ ನೀಡಿ ಗೌರವಿಸಿರುತ್ತಾರೆ ಹಾಗಾಗಿ ಸರ್ಕಾರವು ಸೂಕ್ತ ಸಿಂ.ಕಾ.ಸುರೇಶ್ ಅವರ ಕುಟುಂಬಕ್ಕೆ ಕೊರೋನಾ ವಾರಿರ‍್ಸ್ಗಳಿಗೆ ನೀಡುವ ಸೂಕ್ತ ಪರಿಹಾರವನ್ನು ನೀಡಬೇಕು, ಮಾನ್ಯ ಸಚಿವರು ಸಹ ಇದಕ್ಕೆ ಕೈಜೋಡಿಸಬೇಕು ಎಂದು ರುದ್ರಮುನಿ ಶ್ರೀಗಳು ಮನವಿ ಮಾಡಿದರು.

ಸುರೇಶ್ ಅವರ ಆತ್ಮೀಯ ಸ್ನೇಹಿತರಾದ ತಾಲ್ಲೂಕು ಪತ್ರಕರ್ತರ ಸಂಘದ ಅದ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿ ತಮ್ಮ ಮತ್ತು ಸುರೇಶ್ ಅವರ ನಡುವೆ ಇದ್ದ ಬಾಂದವ್ಯ ನೆನೆದು ಭಾವುಕರಾದರು. ಸರ್ಕಾರ ಕೋವಿಡ್‌ನಿಂದ ಮೃತರಾದ ವರದಿಗಾರರ ಕುಟುಂಬಕ್ಕೆ ಕರೋನ ವಾರಿಯರ್ಸ್ಗೆ ನೀಡುವಂತಹ ಆರ್ಥಿಕ ಸೌಲಭ್ಯವನ್ನು ಸಚಿವರಾದ ಕೆ.ಸಿ.ನಾರಾಯಣಗೌಡರು ಸಿಂ.ಕಾ.ಸುರೇಶ್ ಅವರ ಕುಟುಂಬಕ್ಕೆ ದೊರಕಿಸಿಕೊಡಬೇಕು ಎಂದು ಒತ್ತಾಯ ಮಾಡಿದರು. ಕಾರ್ಯಕ್ರಮದಲ್ಲಿ ೨ ನಿಮಿಷ ಮೌನಚರಣೆ ಆಚರಿಸಿ ಸುರೇಶ್ ಅವರಿಗೆ ಸಂತಾಪ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಯುವ ವೇದಿಕೆಯ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ದಾನಿಗಳಾದ ಕಾಂತರಾಜು, ಟ್ರಸ್ಟಿನ ಉಪಾಧ್ಯಕ್ಷ ಚನ್ನೇಗೌಡ, ಅಂಗನವಾಡಿ ಕಾರ್ಯಕರ್ತೆ ಪವಿತ್ರ, ಉಮಾ ಸುರೇಶ್, ಪುತ್ರ ಸುಹಾಸ್, ರಾಜೇಶ್, ಮಹೇಶ್, ನಾಗೇಂದ್ರ, ಮೃತ್ಯುಂಜಯಸ್ವಾಮಿ, ಲೋಕೇಶ್, ಮಾಕವಳ್ಳಿ ಮನು, ದೊಡ್ಡಹಾರನಹಳ್ಳಿ ಮಲ್ಲೇಶ್, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ವರದಿ: ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಕೆ.ಆರ್.ಪೇಟೆ.

error: