May 12, 2024

Bhavana Tv

Its Your Channel

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂರಾರು ಕಾರ್ಯಕರ್ತರು ಉತ್ತರಪ್ರದೇಶದ ಹತ್ರಾಸ್ ಪಟ್ಟಣದ ಮನಿಷಾ ವಾಲ್ಮೀಕಿ ಎಂಬ ದಲಿತ ಯುವತಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಬೃಹತ್ ತಮಟೆ ಚಳುವಳಿ

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಿoದ ಮೆರವಣಿಗರ ಹೊರಟ ಪ್ರತಿಭಟನಾಕಾರರು ತಾಲ್ಲೂಕು ಪಂಚಾಯಿತಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಉತ್ತರ ಪ್ರದೇಶ ಸರ್ಕಾರದ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತೆರಳಿದ ಪ್ರತಿಭಟನಾಕಾರರು ಮಿನಿವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಧಿಕ್ಕಾರದ ಘೋಷಣೆ ಕೂಗಿದರು. ದಲಿತ ಯುವತಿಯ ಮೇಲಿನ ದೌರ್ಜನ್ಯವನ್ನು ಉಗ್ರವಾಗಿ ಖಂಡಿಸಿದರು.

ಸೆಪ್ಟೆoಬರ್ ೧೪ರಂದು ದಲಿತ ಯುವತಿ ಮನಿಷಾ ವಾಲ್ಮೀಕಿ ಎಂಬುವವಳನ್ನು ಅಪಹರಿಸಿ ನಂತರ ಅತ್ಯಾಚಾರ ನಡೆಸಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಇದು ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಹ ಸಂಗತಿಯಾಗಿದೆ. ನಂತರ ಸೆಪ್ಟೆಂಬರ್.೨೯ರoದು ಮೃತರಾದ ಸಂತ್ರಸ್ಥೆ ಮನಿಷಾಳ ಮೃತದೇಹವನ್ನು ಉತ್ತರ ಪ್ರದೇಶ ಪೋಲೀಸರು ಈ ಘಟನೆಯನ್ನು ಮುಚ್ಚಿ ಹಾಕುವ ಸಲುವಾಗಿ ಆಕೆಯ ಪೋಷಕರಿಗೆ ತಿಳಿಸದಂತೆ ಅಂತ್ಯಸoಸ್ಕಾರ ಮಾಡಿದ್ದಾರೆ. ಇಂತಹ ಅನಾಗರೀಕ ಕೃತ್ಯ ಮಾಡಿರುವ ಮೇಲ್ವರ್ಗದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯ ನಂತರ ತಹಸೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಸೋಮನಹಳ್ಳಿ ಅಂದಾನಿ, ಜಿಲ್ಲಾ ಸಂಚಾಲಕ ಮದ್ದೂರು ಶಿವು, ಜಿಲ್ಲಾ ಸಂಘಟನಾ ಸಂಚಾಲಕರಾದ ಡಿ.ಕೆ.ಅಂಕಯ್ಯ, ಬಂಡಿಹೊಳೆ ರಮೇಶ್, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಸ್ತಿ ರಂಗಪ್ಪ, ಪಾಂಡವಪುರ ವಿಭಾಗೀಯ ಸಂಚಾಲಕ ಲಕ್ಷ್ಮೀಪುರ ರಂಗಸ್ವಾಮಿ, ತಾಲ್ಲೂಕು ಸಂಚಾಲಕ ಕತ್ತರಘಟ್ಟ ರಾಜೇಶ್, ವಕೀಲ ಗಂಜಿಗೆರೆ ಲೋಕೇಶ್, ವಿದ್ಯಾರ್ಥಿ ಘಟಕದ ಸಂಚಾಲಕ ಎಲ್.ಆರ್.ಸ್ವಾಮಿ, ತಾಲ್ಲೂಕು ಸಂಘಟನಾ ಸಂಚಾಲಕರಾದ ನಾಗರಘಟ್ಟ ಮಂಜು, ಬಸವನಹಳ್ಳಿ ರಾಜು, ಹೊಸಹೊಳಲು ನಾಗೇಂದ್ರ, ಗಾಂಧೀನಗರ ತಮ್ಮಯ್ಯ, ಊಚನಹಳ್ಳಿ ನಟರಾಜು, ಕೋಟಹಳ್ಳಿ ಶಿವಣ್ಣ, ಕಾರ್ತೀಕ್, ಎಸ್.ಟಿ.ವಿಜಯ, ನಾಗಮಂಗಲ ಮಿಂಚು, ಸಿಂಗಾಪುರ ಯೋಗೇಶ್, ಜಕ್ಕನಹಳ್ಳಿ ರಾಜೇಶ್ ಸೇರಿದಂತೆ ನೂರಾರು ದಲಿತ ಪರ ಹೋರಾಟಗಾರರು ಭಾಗವಹಿಸಿದ್ದರು.

ವರದಿ:ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: