May 13, 2024

Bhavana Tv

Its Your Channel

ಖಾಸಗಿ ಬಸ್ ನಿಲ್ದಾಣದಲ್ಲಿ, ಪುರಸಭೆಯ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ತೆರವುಗೊಳಿಸಿದ ಪುರಸಭೆಯ ಸಿಬ್ಬಂಧಿಗಳು.

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳಿಗ್ಗೆ ಘರ್ಜಿಸಿದ ಜೆಸಿಬಿ ಯಂತ್ರಗಳು, ಪುರಸಭೆಯ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಭಾರೀ ಭದ್ರತೆಯಲ್ಲಿ ತೆರವುಗೊಳಿಸಿದ ಪುರಸಭೆಯ ಸಿಬ್ಬಂಧಿಗಳು.
ಪಾಂಡವಪುರ ಉಪವಿಭಾಗಾಧಿಕಾರಿ ಹಾಗೂ ಪುರಸಭೆಯ ಆಡಳಿತಾಧಿಕಾರಿಗಳಾದ ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ಶಿವಮೂರ್ತಿ ಮತ್ತು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ತೆರವು ಕಾರ್ಯಾಚರಣೆ …

ಕೆ.ಆರ್.ಪೇಟೆಯ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರ ತಾಲ್ಲೂಕು ಪಂಚಾಯಿತಿ ಮಾಜಿಅಧ್ಯಕ್ಷ ಕೆ.ಬಿ.ಈಶ್ವರಪ್ರಸಾದ್ ಮತ್ತು ಸಹೋದರರು ಅಕ್ರಮವಾಗಿ ಪುರಸಭೆಯ ಜಾಗದಲ್ಲಿ ನಿರ್ಮಿಸಿದ್ದ ವಾಣಿಜ್ಯ ಸಮುಚ್ಚಯ ಹಾಗೂ ವಾಣಿಜ್ಯ ಮಳಿಗೆಗಳು.

ಏಕಕಾಲದಲ್ಲಿ ೧೦ ಜೆಸಿಬಿ ಗಳು, ೨ ಡಿಗ್ಗಿಂಗ್ ಯಂತ್ರಗಳನ್ನು ಬಳಸಿಕೊಂಡು ನಡೆದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ. ಮೂಕಪ್ರೇಕ್ಷಕನಂತೆ ನಿಂತು ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವೀಕ್ಷಿಸಿದ ಈಶ್ವರಪ್ರಸಾದ್ ಮತ್ತು ಸಹೋದರರು.

ನಾಗಮಂಗಲ ಡಿವೈಎಸ್ ಪಿ ನವೀನ್ ಕುಮಾರ್, ಪಾಂಡವಪುರ ಸಿಪಿಐ ಕೆ.ಪ್ರಭಾಕರ್, ನಾಗಮಂಗಲ ಸಿಪಿಐ ಕೆ.ರಾಜೇಂದ್ರ, ಕೆ.ಆರ್.ಪೇಟೆ ಸಿಪಿಐ ಕೆ.ಎನ್.ಸುಧಾಕರ್ ಮತ್ತು ಮಂಡ್ಯ ಮಹಿಳಾ ಠಾಣೆಯ ಸಿಪಿಐ ಆನಂದೇಗೌಡರ ನೇತೃತ್ವದಲ್ಲಿ ಭಾರೀ ಬಿಗಿ ಬಂದೋಬಸ್ತ್ ನಡುವೆ ನಡೆದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ….

ಕೆ.ಆರ್.ಪೇಟೆ ಪಟ್ಟಣದಲ್ಲಿ ಸರ್ಕಾರಿ ಭೂಮಿ ಹಾಗೂ ನಿವೇಶನಗಳನ್ನು ಅಕ್ರಮವಾಗಿ ವಶಪಡಿಸಿಕೊಂಡು ವಾಣಿಜ್ಯ ಸಮುಚ್ಛಯಗಳು ಹಾಗೂ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವುದಾಗಿ ಶಪಥ ಮಾಡಿ ಕಾನೂನು ಹೋರಾಟ ನಡೆಸಿದ್ದ ಸಚಿವ ಡಾ.ನಾರಾಯಣಗೌಡರಿಗೆ ಗೆಲುವು..ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರ ಆದೇಶದ ಮೇರೆಗೆ ನಡೆಯುತ್ತಿರುವ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ..

ಪುರಸಭೆ ಖಾಸಗಿ ಬಸ್ ನಿಲ್ದಾಣದಲ್ಲಿ ಪೋಲಿಸ್ ಸರ್ಪಗಾವಲು,ಕುತೂಹಲದಿಂದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವೀಕ್ಷಿಸುತ್ತಿರುವ ಪಟ್ಟಣದ ಜನತೆ…ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಿಸಿರುವ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಬಲಾಡ್ಯರಿಗೆ ಮೈಚಳಿ ಹುಟ್ಟಿಸಿರುವ ತೆರವು ಕಾರ್ಯಾಚರಣೆ…

೨೦ ವರ್ಷಗಳ ನಂತರ ಪುರಸಭೆಗೆ ಸೇರಿರುವ ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ ಅಕ್ರಮ ಕಟ್ಟಡಗಳನ್ನು ತೆರವು ಮಾಡಿಸಿದ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಸಾರ್ವಜನಿಕರು ಹಾಗೂ ಸಂಘಸAಸ್ಥೆಗಳಿAದ ಅಭಿನಂದನೆಯ ಮಹಾಪೂರ …

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ..

error: