May 13, 2024

Bhavana Tv

Its Your Channel

ಕೋವಿಡ್- ೧೯ ಜನಾಂದೋಲನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಶ್ರೀ ಫಾರೂಕ್ ಝರೆ ಕಿಕ್ಕೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು

ಮಂಡ್ಯ: ಹೆಮ್ಮಾರಿ ಕೋರೋನ ರೋಗ ದಿಂದ ಪಾರಾಗಲು ಸಾಮಾಜಿಕ ಅಂತರ ಮತ್ತು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿ ಅಮೂಲ್ಯದ ಜೀವನವನ್ನು ರೂಪಿಸಿಕೊಳ್ಳಿ ಎಂದು ಕೋವಿಡ್ ೧೯ ಜನಾಂದೋಲನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರು ಶ್ರೀ ಫಾರೂಕ್ ಝರೆ ಅವರು ತಿಳಿಸಿ ಕಿಕ್ಕೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು

ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ವಕೀಲರ ಸಂಘ, ಕಾನೂನು ಸೇವಾ ಸಮಿತಿ, ತಾಲೂಕು ಕಛೇರಿ, ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆ, ಆರಕ್ಷಕ ಇಲಾಖೆ, ಪುರಸಭೆ ಕೆ ಆರ್ ಪೇಟೆ ಅವರ ಸಹಯೋಗದೊಂದಿಗೆ ನಡೆದ ಇಂದ ಕೋವಿಡ್ ಜನಾಂದೋಲನ ಜಾಗೃತಿ ಜಾಥಾ ಕಾರ್ಯಕ್ರಮವನ್ನು .. ಉದ್ಘಾಟಿಸಿ ಮಾತನಾಡಿದ ತಾಲೂಕು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್. ಸಿ ಸದಸ್ಯ ಕಾರ್ಯದರ್ಶಿಗಳದ ಫಾರೂಕ್ ಝೆರೆ ರವರು ಪರಿಸರವನ್ನು ವೈಯಕ್ತಿಕ ಲಾಭಕ್ಕೋಸ್ಕರ ನಾಶಪಡಿಸುತ್ತೇವೆ. ಆದರೆ ಪರಿಸರ ರಕ್ಷಿಸಿದರೆ ನಮ್ಮನ್ನು ಪರಿಸರ ಉಳಿಸುತ್ತದೆ ಎನ್ನುವ ಸಾಮಾನ್ಯ ಅರಿವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು.. ಕೊರೋನಾ ಎನ್ನುವ ಮಹಾಮಾರಿ ಕಾಯಿಲೆಯಿಂದಾಗಿ ಆರೋಗ್ಯವಂತರಾದ ನಮ್ಮಂತವರನ್ನೆಲ್ಲಾ ಅನುಮಾನದಿಂದ ನೋಡುವಂತಹ ಸ್ಥಿತಿ ನಿರ್ಮಿಸಿದೆ. ಆದರೆ ಮಹಾಮಾರಿ ಹೆಮ್ಮಾರಿ ಕೊರೋನಾ ದಿಂದ ಪಾರಾಗಲು ಸಾರ್ವಜನಿಕರು ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕೈಗೊಂಡರೆ ಮುಂದೊAದು ದಿನ ನಮ್ಮ ಅಮೂಲ್ಯವಾದ ಜೀವನವನ್ನು ರೂಪಿಸಿಕೊಳ್ಳಲು ಪ್ರಮುಖ ಕಾರಣವಾಗುತ್ತದೆ ಎಂದು ಅರ್ಥಪೂರ್ಣವಾದ ಹಿತನುಡಿ ನುಡಿಯುತ್ತಾ ಕಾರ್ಯಕ್ರಮಕ್ಕೆ ಮೆರಗು ತುಂಬಿದರಲ್ಲದೇ, ನಂತರ ನಡೆದ ಜಾಗೃತಿ ಜಾಥದಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆದು ಜನ ಸಾಮಾನ್ಯರಿಗೆ ಕೋರೋನದ ಬಗ್ಗೆ ಜಾಗೃತಿ ಮೂಡಿಸಿದರು…

ಕಿಕ್ಕೇರಿ ಪೊಲೀಸ್ ಠಾಣೆ ಪಿಎಸ್‌ಐ ಕೆ ನವೀನ್ ಮತ್ತು ಸಿಬ್ಬಂದಿಗಳಿAದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೋವಿಡ್ ೧೯ ತಡೆ ಕುರಿತು ಜನಜಾಗೃತಿ ಜಾಥ..ಜಾಥಾ ಕಾರ್ಯಕ್ರಮಕ್ಕೆ ಕಿಕ್ಕೇರಿ ಪೋಲಿಸರು ಸಬ್ ಇನ್ಸ್ ಪೆಕ್ಟರ್ ನವೀನ್ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು…

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ .ಎಂ ಆರ್ ಪ್ರಸನ್ನಕುಮಾರ್ ವಕೀಲ ಸಂಘದ ಅಧ್ಯಕ್ಷರು. ಕಿಕ್ಕೇರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತೀಶ್. ಉಪತಹಶೀಲ್ದಾರ್ ಲಕ್ಷ್ಮಿಕಾಂತ್. ರಾಜಶ್ವನಿರೀಕ್ಷಕ ಗೋಪಾಲಕೃಷ್ಣ. ಗ್ರಾಮಲೆಕ್ಕಾಧಿಕಾರಿ ಸೋಮಚಾರಿ. ಪಿಡಿಒ ಕೆಂಪೇಗೌಡ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು. ವಿವಿಧ ಇಲಾಖೆಯ ಅಧಿಕಾರಿಗಳು ಪೌರಕಾರ್ಮಿಕರು ಸೇರಿದಂತೆ ಉಪಸ್ಥಿತರಿದ್ದರು.

ವರದಿ. ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ . ಮಂಡ್ಯ.

error: