May 13, 2024

Bhavana Tv

Its Your Channel

ದಾಸಗೊಳಪುರ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿರುವ ತಾಲೂಕು ಪಂಚಾಯಿತಿ ಸದಸ್ಯ ರಾಜಾಹುಲಿದಿನೇಶ್ ವಿರುದ್ಧ ಕಾನೂನು ಕ್ರಮಕ್ಕೆ ಗ್ರಾಮಸ್ಥರ ಆಗ್ರಹ, ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ, ತಹಶೀಲ್ದಾರ್ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಕೆ.

ಮಂಡ್ಯ; ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದಾಸಗೊಳಪುರ ಗ್ರಾಮಸ್ಥರು ಇಂದು ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸುತ್ತಿರುವ ತಾಲೂಕು ಪಂಚಾಯಿತಿ ಸದಸ್ಯ ರಾಜಾಹುಲಿ ದಿನೇಶ್ ಮತ್ತು ಆತನ ಸಹೋದರರ ವಿರುದ್ಧ ರಕ್ಷಣೆ ನೀಡಬೇಕು. ನಾವು ಬೇಸಾಯ ಮಾಡುತ್ತಿರುವ ಗ್ರಾಮಕ್ಕೆ ಸೇರಿರುವ ೯ ಎಕರೆ ೨೨ ಗುಂಟೆ ಜಮೀನನ್ನು ಗ್ರಾಮಸ್ಥರಿಗೆ ದರಖಾಸ್ತು ಮೂಲಕ ಮಂಜೂರು ಮಾಡಿಸಿಕೊಡಬೇಕು ಎಂದು ಆಗ್ರಹಿಸಿ ದಿನೇಶ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ನ್ಯಾಯಕ್ಕಾಗಿ ಮನವಿ ಮಾಡಿದರು …

ದಾಸಗೊಳಪುರ ಗ್ರಾಮದ ಸರ್ವೇ ನಂಬರ್ ೧೭ಕ್ಕೆ ಸೇರಿರುವ ೫ಎಕರೆ ೨೨ ಗುಂಟೆ ಜಮೀನನ್ನು ಗ್ರಾಮದ ೧೦ ಕುಟುಂಬಗಳು ಕಳೆದ ೩೦ ವರ್ಷಗಳಿಂದ ಬೇಸಾಯ ಮಾಡುತ್ತಿದ್ದಾರೆ. ಜಮೀನಿನಲ್ಲಿ ನೆಟ್ಟಿ ಬೆಳೆಸಿದ್ದ ತೆಂಗಿನ ಗಿಡಗಳು ಹಾಗೂ ಇತರೆ ಬೆಳೆಗಳನ್ನು ಜೆಸಿಬಿ ಯಂತ್ರ ಬಳಸಿ ನಾಶಪಡಿಸಿರುವ ರಾಜಾಹುಲಿ ದಿನೇಶ್ ಗ್ರಾಮಕ್ಕೆ ಚನ್ನರಾಯಪಟ್ಟಣ ಸೇರಿದಂತೆ ಹೊರಗಿನಿಂದ ರೌಡಿಗಳನ್ನು ಕರೆ ತಂದು ಕೊಲೆ ಬೆದರಿಕೆ ಹಾಕಿಸಿ ದಬ್ಬಾಳಿಕೆ ದೌರ್ಜನ್ಯ ಮಾಡುತ್ತಿದ್ದಾರೆ. ಆದ್ದರಿಂದ ನಮಗೆ ರಕ್ಷಣೆ ನೀಡಬೇಕು. ನಮ್ಮ ಜೀವನಕ್ಕೆ ಆಧಾರವಾಗಿರುವ ಗ್ರಾಮದ ಜಮೀನನ್ನು ನಮಗೆ ಕೊಡಿಸಿಕೊಡಬೇಕು. ಗ್ರಾಮಕ್ಕೆ ಪುಡಿರೌಡಿಗಳು ಹಾಗೂ ಗೂಂಡಾಗಳೊAದಿಗೆ ಆಗಮಿಸಿ ದೌರ್ಜನ್ಯ ನಡೆಸುತ್ತಿರುವ ರಾಜಾಹುಲಿ ದಿನೇಶ್ ಹಾಗೂ ಆತನ ಸಹೋದರರಿಂದ ನಮಗೆ ರಕ್ಷಣೆ ನೀಡಬೇಕು. ಗ್ರಾಮದಲ್ಲಿ ಗಲಾಟೆ ಗದ್ದಲ ನಡೆಸಿ ಅಶಾಂತಿಗೆ ಕಾರಣವಾಗಿರುವ ರಾಜಾಹುಲಿ ದಿನೇಶ್ ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು…

ಪ್ರತಿಭಟನೆಯಲ್ಲಿ ದಾಸಗೊಳಪುರ ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರಾದ ದೇವೇಗೌಡ, ರೇಣುಕಾ, ಕರೀಗೌಡ, ದಿಲೀಪ್, ಸೌಮ್ಯ, ಸಾವಿತ್ರಮ್ಮ, ರಾಜೇಗೌಡ, ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು…

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: