May 13, 2024

Bhavana Tv

Its Your Channel

ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮವು ಕೆ.ಆರ್.ಪೇಟೆ ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು

ಮಂಡ್ಯ: ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಪಾಂಡವಪುರ ಉಪವಿಭಾಗದ ಅಬಕಾರಿ ಉಪಾಧೀಕ್ಷಕರಾದ ಆನಂದಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವ ಜನಾಂಗದ ಉಜ್ವಲವಾದ ಭವಿಷ್ಯವನ್ನು ಹಾಳು ಮಾಡಿ ನಷೆಯ ಭ್ರಮಾ ಲೋಕದಲ್ಲಿ ವಿಹರಿಸುವಂತೆ ಮಾಡುವ ಗಂಜಾ, ಅಫೀಮು, ಚರಸ್ ಸೇರಿದಂತೆ ಮಾದಕ ವಸ್ತುಗಳ ನಿರ್ಮೂಲನೆಗೆ ನಾಗರಿಕ ಸಮಾಜದ ಪ್ರತಿಯೊಬ್ಬರೂ ಸಹಕರಿಸಬೇಕು. ಗಾಂಜಾ, ಬಿಳಿ ಗಸಗಸೆ ಸೇರಿದಂತೆ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮಾದಕ ವಸ್ತುಗಳ ನಿರ್ಮೂಲನೆಗೆ ಮುಂದಾಗಬೇಕು.

ಅಕ್ರಮವಾಗಿ ಶುಂಠಿ ಬೆಳೆಯುವ ಜಮೀನು ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೆಳೆಯುತ್ತಿರುವ ಗಾಂಜಾ ಬೆಳೆಯ ಬಗ್ಗೆ ತಾಲೂಕು ಆಡಳಿತಕ್ಕೆ ಇಲ್ಲವೇ ಅಬ್ಕಾರಿ ಇಲಾಖೆಗೆ ಮಾಹಿತಿ ನೀಡಿ ಮಾದಕ ವಸ್ತುಗಳಿಂದ ಮುಕ್ತವಾದ ಆರೋಗ್ಯವಂತ ನಾಗರಿಕ ಸಮಾಜದ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಆನಂದಕುಮಾರ್ ಮನವಿ ಮಾಡಿದರು…

ತಹಶೀಲ್ದಾರ್ ಎಂ.ಶಿವಮೂರ್ತಿ ಮಾತನಾಡಿ ಕೃಷ್ಣರಾಜಪೇಟೆ ತಾಲ್ಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ೧೦ಕೆ.ಜಿ.ಯಷ್ಟು ಗಾಂಜಾ ಬೆಳೆಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ಬೆಳೆಯುತ್ತಿದ್ದರೆ ಅಥವಾ ಮಾರಾಟ ಮಾಡುತ್ತಿದ್ದರೆ ತಾಲೂಕು ಆಡಳಿತಕ್ಕೆ ಮಾಹಿತಿಯನ್ನು ನೀಡುವ ಮೂಲಕ ಸಹಕರಿಸಬೇಕು. ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ಮಾರಾಟ ಮಾಡುವ ಇಲ್ಲವೇ ಸರಬರಾಜು ಮಾಡುವ ಜಾಲದ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಗಳ ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿಟ್ಟು ನಗಧು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ತಹಶೀಲ್ದಾರ್ ಶಿವಮೂರ್ತಿ ಹೇಳಿದರು….
ರಾಜ್ಯದಲ್ಲಿ ಗಾಂಜಾ, ಚರಸ್, ಹೆರಾಯಿನ್ ಸೇರಿದಂತೆ ಇತರೆ ಮಾದಕ ವಸ್ತುಗಳ ನಿರ್ಮೂಲನೆ ಹಾಗೂ ಮಾದಕ ಪದಾರ್ಥಗಳ ನಾಶಕ್ಕೆ ಸರ್ಕಾರ ಮುಂದಾಗಿದೆ. ಮಾದಕ ವಸ್ತುಗಳನ್ನು ಸೇರಿಸುವವರು, ಸರಬರಾಜು ಮಾಡುವವರು ಹಾಗೂ ಡ್ರಗ್ಸ್ ದಂಧೆ ಮಾಡುವವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಕಾನೂನಿನ ಸಂಕೋಲೆಯ ನಡುವೆ ಬಂಧಿಸಿ ಶಿಕ್ಷೆ ವಿಧಿಸಲಾಗುವುದು. ಇದಕ್ಕೆ ಚಲನಚಿತ್ರ ನಟಿಯರಾದ ರಾಗಿಣಿದ್ವಿವೇದಿ ಹಾಗೂ ಸಂಜನಾ ಗಿರ್ಲಾನಿ ಪ್ರಕರಣವೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ತಹಶೀಲ್ದಾರ್ ಶಿವಮೂರ್ತಿ ವಿವರಿಸಿದರು .ಕೆ.ಆರ್.ಪೇಟೆ ತಾಲ್ಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ಬೆಳೆದಿದ್ದ ಗಾಂಜಾ ಬೆಳೆ ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿದ ಬಗ್ಗೆ ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ತೊಳಜನಾಯಕ್ ಸಭೆಗೆ ಮಾಹಿತಿ ನೀಡಿದರು..

ಈ ಸಂದರ್ಭದಲ್ಲಿ ಜಾಗೃತಿ ಸಭೆಯಲ್ಲಿ ತಾಲೂಕು ವಲಯ ಅರಣ್ಯಾಧಿಕಾರಿ ಹೆಚ್.ಎಸ್.ಗಂಗಾಧರ, ಅಭ್ಕಾರಿ ಇನ್ಸ್ ಪೆಕ್ಟರ್ ಗಳಾದ ಭವ್ಯ, ರಮೇಶ್, ಅಬ್ಕಾರಿ ಸಬ್ ಇನ್ಸ್ ಪೆಕ್ಟರ್ ರಾಚಪ್ಪಾಜಿಸ್ವಾಮಿ, ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುರೇಶ್, ಉಪತಹಶೀಲ್ದಾರ್ ರಾಮಚಂದ್ರಪ್ಪ, ರಾಜಶ್ವನಿರೀಕ್ಷಕರಾದ ಚಂದ್ರಕಲಾ, ರಾಮಮೂರ್ತಿ, ರಾಮಚಂದ್ರ, ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು

error: