May 13, 2024

Bhavana Tv

Its Your Channel

ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಮತ್ತು ಟಿಬಿ ಬಡಾವಣೆಯ ಅಕ್ರಮ ನಿವೇಶನಗಳು ಹಾಗೂ ಮನೆಗಳನ್ನು ಸಕ್ರಮಗೊಳಿಸಲು ೪೮ ಅಧಿಕಾರಿಗಳ ತಂಡದ ಮೂಲಕ ಸರ್ವೇ ಕಾರ್ಯ ಆರಂಭ.

ಮಂಡ್ಯ: ಜಿಲ್ಲೆಯಕೃಷ್ಣರಾಜಪೇಟೆ ಪಟ್ಟಣದ ಹೇಮಾವತಿ ಬಡಾವಣೆ ಹಾಗೂ ಟಿಬಿ ಬಡಾವಣೆಯ ಅಕ್ರಮ ನಿವೇಶನಗಳ ಹಂಚಿಕೆ, ಪೋರ್ಜರಿ ಖಾತೆ ಬದಲಾವಣೆ ಸೇರಿದಂತೆ ಲೋಕಾಯುಕ್ತ ತನಿಖೆ ನಡೆದು ಅಂತಿಮ ತೀರ್ಮಾನಕ್ಕಾಗಿ ೧೫ ವರ್ಷಗಳ ನಂತರ ಕಡತವು ಸರ್ಕಾರದ ಬಳಿಗೆ ಮರಳಿ ಬಂದಿರುವ ಹಿನ್ನೆಲೆಯಲ್ಲಿ ಹೇಮಾವತಿ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಮನವಿ ಹಾಗೂ ಕ್ಷೇತ್ರದ ಶಾಸಕರು ಮತ್ತು ರಾಜ್ಯದ ಪೌರಾಡಳಿತ ಸಚಿವರಾದ ಡಾ.ನಾರಾಯಣಗೌಡರ ಆದೇಶದಂತೆ ಅಕ್ರಮವನ್ನು ಸಕ್ರಮಗೊಳಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲು ನಿವೇಶನಗಳು ಹಾಗೂ ಮನೆಗಳ ಸರ್ವೇ ಕಾರ್ಯವು ಇಂದಿನಿAದ ಆರಂಭವಾಗಿದೆ..

ಒಂದು ತಿಂಗಳ ಕಾಲ ನಡೆಯಲಿರುವ ಸರ್ವೇ ಕಾರ್ಯವು ೬ ತಂಡಗಳ ಮೂಲಕ ನಡೆಯುತ್ತಿದೆ. ಮನೆಗಳ ಬಳಿಗೆ ಆಗಮಿಸುವ ಅಧಿಕಾರಿಗಳ ತಂಡಕ್ಕೆ ಮನೆಗಳು ಹಾಗೂ ನಿವೇಶನಗಳ ಬಳಿಗೆ ಬಂದಾಗ ಅಗತ್ಯ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ನೀಡಿ ಸಹಕರಿಸಬೇಕು ಎಂದು ಸಚಿವ ಡಾ.ನಾರಾಯಣಗೌಡ ಮನವಿ ಮಾಡಿದ್ದಾರೆ…

ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಒಂದೇ ನಿವೇಶನದ ಮೂರ್ನಾಲ್ಕು ಹಕ್ಕು ಪತ್ರಗಳು ಹಾಗೂ ಖಾತಾ ನಕಲುಗಳ ಹಂಚಿಕೆಯಾಗಿದ್ದು ಭಾರೀ ಗೋಲ್ ಮಾಲ್ ನಡೆದಿದೆ. ನಿವೇಶನಗಳ ಹಗರಣವು ಲೋಕಾಯುಕ್ತ ತನಿಖೆಯಾಗಿ ಅಂತಿಮ ಆದೇಶಕ್ಕಾಗಿ ೧೫ವರ್ಷಗಳ ನಂತರ ಕಡತವು ಸರ್ಕಾರಕ್ಕೆ ವಾಪಸ್ ಬಂದಿದ್ದು ಬಡಾವಣೆಯ ನಿವಾಸಿಗಳ ಒತ್ತಡ ಹಾಗೂ ಕ್ಷೇತ್ರದ ಶಾಸಕರು ಹಾಗೂ ಪೌರಾಡಳಿತ ಸಚಿವರಾದ ಡಾ.ನಾರಾಯಣಗೌಡರ ಆದೇಶದಂತೆ ನಿವೇಶನಗಳ ಗೊಂದಲಗಳನ್ನು ಸರಿಪಡಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ನೌಕರರ ತಂಡವು ಇಂದಿನಿAದ ಒಂದು ತಿಂಗಳ ಕಾಲ ಸರ್ವೇ ಕಾರ್ಯನಡೆಸಿ ಸತ್ಯಾಸತ್ಯತೆಗಳ ಬಗ್ಗೆ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿ ಪ್ರಕರಣವನ್ನು ಇತ್ಯರ್ಥಪಡಿಸುವ ಸಲುವಾಗಿ ನಿವೇಶನಗಳು ಹಾಗೂ ಮನೆಗಳ ಅಳತೆ ಕಾರ್ಯವು ಆರಂಭವಾಗಿದೆ..

ಮAಡ್ಯ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಕಾರ್ಯಪಾಲಕ ಅಭಿಯಂತರ ಪ್ರತಾಪ್, ನಗರಾಭಿವೃದ್ಧಿ ಇಲಾಖೆಯ ವ್ಯವಸ್ಥಾಪಕರಾದ ವಿಷಕಂಠ, ಮುಖ್ಯಾಧಿಕಾರಿ ಸತೀಶ್ ಕುಮಾರ್, ಸಹಾಯಕ ಎಂಜಿನಿಯರ್ ಗಳಾದ ಮಧುಸೂದನ್, ರುದ್ರೇಗೌಡ ಸೇರಿದಂತೆ ೪೮ ನೌಕರರು ಸರ್ವೇ ಕಾರ್ಯದಲ್ಲಿ ಭಾಗವಹಿಸಿದ್ದಾರೆ…

ಸರ್ವೇ ಕಾರ್ಯದ ಮೊದಲ ದಿನವಾದ ಇಂದು ಹೇಮಾವತಿ ಬಡಾವಣೆಯ ನಿವಾಸಿಗಳಲ್ಲಿ ಆತಂಕ ಮನೆಮಾಡಿತ್ತು, ಅಧಿಕಾರಿಗಳು ಹಾಗೂ ನೌಕರರ ತಂಡವು ಮನೆ ಮನೆಗೆ ತೆರಳಿ ಹೇಮಾವತಿ ಬಡಾವಣೆಯ ನಿವೇಶನಗಳ ಅಕ್ರಮವನ್ನು ಸಕ್ರಮಗೊಳಿಸಿ ಬಡಾವಣೆಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ ಸರ್ವೇ ಕಾರ್ಯವನ್ನು ನಡೆಸಲಾಗುತ್ತಿದೆ. ನಿವೇಶನಗಳು ಹಾಗೂ ಮನೆಗಳ ಮಾಲೀಕರು ಆತಂಕಪಡುವ ಅಗತ್ಯವಿಲ್ಲ ನಿಮ್ಮ ನಿವೇಶನಗಳು ಹಾಗೂ ಮನೆಗಳ ಅಗತ್ಯ ದಾಖಲೆಗಳ ಜೆರಾಕ್ಸ್ ಪ್ರತಿಗಳು ಹಾಗೂ ನಿಖರವಾದ ಮಾಹಿತಿಯನ್ನು ನೀಡಿ ಸಹಕರಿಸಬೇಕು ಎಂದು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಅಘಲಯ ಮಂಜುನಾಥ್ ಮನವಿ ಮಾಡಿದ್ದಾರೆ…

ವರದಿ. ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: