May 10, 2024

Bhavana Tv

Its Your Channel

ಉತ್ತಮ ಪ್ರಜೆಗಳನ್ನು ರೂಪಿಸಲು ಒಬ್ಬ ಗುರುವಿನಿಂದ ಮಾತ್ರ ಸಾಧ್ಯ ನಿವೃತ್ತ ಪ್ರಾಧ್ಯಾಪಕ ಬೈರೇಗೌಡ

ಮಂಡ್ಯ: ನಾಗಮಂಗಲ ಆದಿಚುಂಚನಗಿರಿ ಕಲಾ . ವಾಣಿಜ್ಯ. ಮತ್ತು ವಿಜ್ಞಾನ ಕಾಲೇಜಿನಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಡಾ.ಬಿಕೆ. ರಾಜೇಂದ್ರ ರವರಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿ ಗಳಿಂದ ಬೀಳ್ಕೊಡುಗೆ ಸಮಾರಂಭವನ್ನು ನಾಗಮಂಗಲ ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು

ಗಣ್ಯರಿಂದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಬೈರೇಗೌಡ ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆಯನ್ನು ರೂಪಿಸುವಲ್ಲಿ ಒಬ್ಬ ಗುರುವಿನ ಪಾತ್ರ ಬಹಳ ಪ್ರಮುಖವಾದದ್ದು ಹಾಗೂ ಆ ಕೆಲಸ ಗುರುವಿನಿಂದ ಮಾತ್ರ ಸಾಧ್ಯ ಪ್ರೊಫೆಸರ್ ರಾಜೇಂದ್ರ ರವರ ಗರಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ ಇವರ ೩೩ವರ್ಷದ ಸೇವೆಯಲ್ಲಿ ನಾಗಮಂಗಲ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಗುರುವಿನ ಹಾದಿಯಲ್ಲಿ ನಡೆದು ಜೀವನ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತವಚನ ನುಡಿದರು

ಗಣ್ಯ ಗ್ರಂಥಪಾಲಕ ವಿಜಯಕುಮಾರ್ ಮಾತನಾಡಿ ಉತ್ತಮ ಗುರು ಇದ್ದರೆ ಗುರಿ ತಲುಪಲು ಅನುಕೂಲಕರ ನಮ್ಮೆಲ್ಲರ ನೆಚ್ಚಿನ ಪ್ರೊಫೆಸರ್ ರಾಜೇಂದ್ರ ರವರು ನಿವೃತ್ತಿ ಹೊಂದಿದರು ಕೂಡ ಅಪಾರ ಶಿಷ್ಯಂದಿರ ಬಳಗವನ್ನು ಹೊಂದಿದ್ದಾರೆ ಇವರು ವೃತ್ತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಸಮಾನ ರೀತಿಯಲ್ಲಿ ಕಂಡು ತಿದ್ದಿ ಉತ್ತಮ ನಡುವಳಿಕೆಯನ್ನು ರೂಪಿಸಿಕೊಳ್ಳುವಲ್ಲಿ ಶ್ರಮಿಸಿದ್ದಾರೆ ಇವರ ವಿನಯತೆಯ ಪ್ರೀತಿಗೆ ಈ ವೇದಿಕೆಯ ಸಾಕ್ಷಿಯಾಗಿದೆ ಎಂದು ನುಡಿದರು

ಗಣ್ಯರು ಹಾಗೂ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ರಾಜೇಂದ್ರ ರವರು ಈ ಪ್ರಾಧ್ಯಾಪಕ ವೃತ್ತಿಗೆ ಬೇರೆ ಬೇರೆ ಸಂಸ್ಥೆಗಳಿAದ ಹಲವಾರು ಅವಕಾಶಗಳು ಬಂದವು ಆದರೂ ಕೂಡ ಆದಿಚುಂಚನಗಿರಿ ಮಠಾಧೀಶರಾದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ನಿರ್ಮಲಾನಂದ ಸ್ವಾಮೀಜಿ ಆಶೀರ್ವಾದದಿಂದ ಈ ಕಾಲೇಜಿನಲ್ಲಿ ವೃತ್ತಿ ನಿರ್ವಹಿಸಲು ಅವಕಾಶ ದೊರಕಿದ್ದು ನನ್ನ ಪುಣ್ಯ
ನನ್ನ ಆಸೆಯಂತೆ ಗ್ರಾಮೀಣ ಮಕ್ಕಳ ಬದುಕನ್ನು ರೂಪಿಸಲು ಈ ಸಂಸ್ಥೆಯಲ್ಲಿ ನನಗೆ ಅವಕಾಶ ಸಿಕ್ಕಿದ್ದೂ ನಿಮ್ಮೆಲ್ಲರ ಪ್ರೀತಿ ಗಳಿಸಲು ಸಾಧ್ಯವಾಗಿದೆ ಎಂದರು. ಇಂದಿನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಸಾವಿರಾರು ಅವಕಾಶಗಳು ಸಿಗುತ್ತವೆ ಒಳ್ಳೆಯ ಹಾದಿಯಲ್ಲಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ಬದುಕು ರೂಪಿಸಿಕೊಳ್ಳಿ ಎಂದು ತಿಳಿಸಿದರು.ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಂದ ತಮ್ಮ ನೆಚ್ಚಿನ ಗುರುಗಳಾದ ಡಾ ರಾಜೇಂದ್ರ ರವರ ಬಗ್ಗೆ ಮಾತನಾಡಿದರು

ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಬೈರೇಗೌಡ. ಗ್ರಂಥಪಾಲಕ ವಿಜಯ್ ಕುಮಾರ್. ರಾಜೇಂದ್ರ ರವರ ಧರ್ಮಪತ್ನಿ ಮಂಜುಳಾ ರವರನ್ನು ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸಿದರು

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾದ ಹರೀಶ್. ಅಶ್ವಥ್. ಹಾಗೂ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು

error: