May 14, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕು ಆಡಳಿತವು ಆಯೋಜಿಸಿದ್ದ ದಾಸಶ್ರೇಷ್ಠ ಭಕ್ತ ಕನಕದಾಸರ ೩೩೩ನೇ ಜಯಂತ್ಯೋತ್ಸವ ಸಮಾರಂಭವು ಸಡಗರ ಸಂಭ್ರಮದಿOದ ಅರ್ಥಪೂರ್ಣವಾಗಿ ನಡೆಯಿತು

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಕನಕ ಜಯಂತಿ ಸಮಾರಂಭವನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಭಕ್ತ ಕನಕದಾಸರ ಭಾವಚಿತ್ರಕ್ಕೆ ವಿಶೇಷಪೂಜೆ ಮಾಡಿ, ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು…

ಸಾಮಾಜಿಕ ಅಸಮಾನತೆ, ಮೇಲುಕೀಳು, ಬಡವ ಶ್ರೀಮಂತ ಎಂಬ ಅನಾಧಾರ ಹಾಗೂ ಜಾತಿಪದ್ದತಿಯ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ ಭಕ್ತ ಕನಕದಾಸರ ಜೀವನದ ಆದರ್ಶಗಳನ್ನು ಪಾಲಿಸಿದರೆ ಸಾಕು ಆರೋಗ್ಯವಂತ ಸಮಾನತೆಯ ಸಮಾಜವು ತಾನೇತಾನಾಗಿ ನಿರ್ಮಾಣವಾಗುತ್ತದೆ ಎಂದು ಪ್ರತಿಪಾದಿಸಿದ ಸಚಿವ ಡಾ.ನಾರಾಯಣಗೌಡ ನಾವು ಮಾಡುವ ಯಾವುದೇ ಕಾಯಕವು ಕೀಳಲ್ಲ, ಭಗವಂತನ ಪೂಜೆಗೆ ಹಾಗೂ ಸಾಕ್ಷಾತ್ಕಾರಕ್ಕೆ ಶ್ರೀಮಂತಿಕೆಯ ಅಗತ್ಯವಿಲ್ಲ. ಬಡವರು ಶ್ರೀಮಂತರು ಎಂಬ ಬೇಧಭಾವವಿಲ್ಲದಂತೆ ಸಮಾಜದಲ್ಲಿ ವಾಸಿಸುವ ಮನುಷ್ಯರೆಲ್ಲರೂ ದೇವರ ಪೂಜೆ ಮಾಡಬಹುದು. ಅಸ್ಪೃಶ್ಯರು ಹಾಗೂ ಶೋಷಿತ ವರ್ಗಗಳ ಜನರೂ ದೇವಾಲಯಕ್ಕೆ ಮುಕ್ತವಾಗಿ ಹೋಗಿ ಭಗವಂತನ ದರ್ಶನ ಮಾಡಬಹುದು ಎಂದು ಉಡುಪಿಯಲ್ಲಿ ದೇವಾಲಯದ ಹೊರಗೆ ನಿಂತು ಭಕ್ತಿಯಿಂದ ಪ್ರಾರ್ಥಿಸಿ ಶ್ರೀ ಕೃಷ್ಣನ ದರ್ಶನ ಮಾಡಿದರು ಎಂದು ವಿವರಿಸಿದ ಸಚಿವ ನಾರಾಯಣಗೌಡ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕನಕ ಭವನದ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾದ ಜಾಗವನ್ನು ಕನಕ ಗುರುಪೀಠಕ್ಕೆ ದೊರಕಿಸಿಕೊಡುವ ಜೊತೆಗೆ ಭವನದ ನಿರ್ಮಾಣಕ್ಕೆ ಕೈಲಾದ ಸಹಾಯ ಮಾಡುವುದಾಗಿ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್ ಅವರ ಮನವಿಗೆ ಸಚಿವ ನಾರಾಯಣಗೌಡ ತಿಳಿಸಿದರು …

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀಸ್ವಾಮಿನಾಯಕ, ಜಿಪಂ ಮಾಜಿಉಪಾಧ್ಯಕ್ಷ ಎಸ್.ಅಂಬರೀಶ್, ತಹಶೀಲ್ದಾರ್ ಎಂ.ಶಿವಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ದೀಪಕ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಕೋಡಿಮಾರನಹಳ್ಳಿ ಎಲ್.ದೇವರಾಜು, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಶಶಿಧರ ಸಂಗಾಪುರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಮುಖಂಡರಾದ ಎಂ.ಎಲ್.ನಾಗೇoದ್ರ, ಬಿ.ಆರ್.ಕುಮಾರ್, ಪಿ.ಜೆ.ಕುಮಾರ್, ಪದ್ಮೇಶ್, ಸಚಿವರ ಆಪ್ತಸಹಾಯಕರಾದ ದಯಾನಂದ, ಕಿಕ್ಕೇರಿ ಕುಮಾರ್, ಪ್ರಶಾಂತ್, ಕೆ.ವಿನೋದ್ ಕುಮಾರ್ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.

error: