May 12, 2024

Bhavana Tv

Its Your Channel

ಉಳ್ಳವರ ಕುತಂತ್ರದಿOದ ಬಿಕರಿಯಾದ ಗ್ರಾಮ ಪಂಚಾಯತಿ ಸದಸ್ಯರ ಸ್ಥಾನಗಳು

ಮಂಡ್ಯ: ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಕಟ್ಟಕಡೆಯ ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ ಸಮಾನತೆ ಹಾಗೂ ರಾಜಕೀಯ ಸ್ಥಾನಮಾನ ಹಕ್ಕುಗಳು ಮತ್ತು ಅಧಿಕಾರ ಸಿಗಬೇಕು ಎಂಬ ಆಶಯದೊಂದಿಗೆ ನಮ್ಮ ಸಂವಿಧಾನದಲ್ಲಿ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ

ಆದರೆ ಅವಿರೋಧ ಆಯ್ಕೆ ನೆಪದಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಹುತೇಕ ಕಡೆ ಒಂದೊoದು ಗ್ರಾಮ ಪಂಚಾಯಿತಿ ಸದಸ್ಯರು ಸ್ಥಾನವು ಕೆಲವು ಗ್ರಾಮಗಳಲ್ಲಿ ಹರಾಜು ಎಂಬ ಪ್ರಕ್ರಿಯೆಯೊಂದಿಗೆ ಬಿಕರಿಯಾಗುತ್ತಿರುವದು ಕಂಡುಬoದಿದೆ

ಈ ವ್ಯವಸ್ಥೆಯಿಂದ ಆರ್ಥಿಕವಾಗಿ ಬಲಾಡ್ಯ ಸಿರಿವಂತರ ಪಾಲಾಗಿ ಪ್ರಜಾತಂತ್ರ ವ್ಯವಸ್ಥೆಯೇ ಬುಡಮೇಲಾಗಿ ಕಾನೂನಿಗೆ ವಿರೋಧವಾಗಿದೆ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ೨೭ ಪಂಚಾಯತಿಗಳಿದ್ದು ಒಟ್ಟು ೨೨೪ ಗ್ರಾಮ ಪಂಚಾಯತಿ ಸದಸ್ಯರು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ ನಾಮಪತ್ರ ಸಲ್ಲಿಸುವ ಮುಂಚೆನೆ ಹಣವನ್ನೇ ಮಾನದಂಡ ಮಾಡಿಕೊಂಡು ಅವಿರೋಧ ಆಯ್ಕೆ ಪ್ರಕ್ರಿಯೆಗಳು ತಾಲೂಕಿನಾದ್ಯಂತ ನಡೆಯುತ್ತಿದ್ದು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅಧಿಕಾರಿಗಳ ಜಾಣ ಕುರುಡುತನ ನಡೆಯಿಂದ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗಿದೆ

ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯ ಲಾಳನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಿಕೆರೆ ಗ್ರಾಮದಲ್ಲಿ ಮೂರು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ತಲಾ ಒಂದೊAದು ಐದರಿಂದ ಹತ್ತು ಲಕ್ಷದವರೆಗೆ ಸ್ಥಳೀಯ ಗ್ರಾಮಸ್ಥರು ಕೂತು ಹರಾಜು ಪ್ರಕ್ರಿಯೆ ನಡೆಸಿದ್ದಾರೆ

ಸಂತೆಯಲ್ಲಿ ಜಾನುವಾರು ಖರೀದಿ ಮಾಡುವಂತೆ ಸಭೆ ಸೇರಿ ಸದಸ್ಯತ್ವ ಮಾರಾಟ ಪ್ರಕ್ರಿಯೆ ನಡೆದಿದೆ ಜನಸಾಮಾನ್ಯರಿಗೆ ನಿಲುಕದ ಗ್ರಾಮ ಪಂಚಾಯತಿ ಸ್ಥಾನ ಆರ್ಥಿಕವಾಗಿ ಸಬಲರಾಗಿರುವ ಹಾಗೂ ಹಣವಂತ ಬೆಂಗಳೂರು ನಿವಾಸಿಗಳ ಪಾಲಾಗುತ್ತಿರುವುದು ದುರಂತವೇ ಸರಿ ಈ ಹಿಂದೆ ತಾಲೂಕಿನ ವ್ಯಾಪ್ತಿಯಲ್ಲಿ ಬೆಂಗಳೂರು ನಿವಾಸಿಗಳು ಗ್ರಾಮ ಪಂಚಾಯಿತಿ ಸದಸ್ಯರಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಅಧಿಕಾರವನ್ನು ಪಡೆದಿರುವುದು ಇಲ್ಲಿ ನೆನೆಯಬಹುದು

ಯಾವುದೇ ಚುನಾವಣೆ ಬಂದರೂ ಮಂಡ್ಯ ಜಿಲ್ಲೆಗೆ ಪ್ರತ್ಯೇಕ ನಿಲುವಿನಲ್ಲಿ ನಿಲ್ಲುವ ನಾಗಮಂಗಲ ತಾಲೂಕು ವಲಸಿಗ ಬೆಂಗಳೂರು ಮತದಾರರೇ ಪಾರುಪತ್ಯ ಮೆರೆದಿದ್ದಾರೆ ಇನ್ನು ರಾಜಕಾರಣಿಗಳು ಹಾಲಿ ಮತ್ತು ಮಾಜಿ ಶಾಸಕರು ಮೇಲುಗೈ ಸಾಧಿಸಲು ಯಾರಾದರೇನು ಅಧಿಕಾರ-ನಮ್ಮ ಬೆಂಬಲಿಗರಿಗೆ ಇರಬೇಕು ಎಂಬ ನಿಲುವಿನಿಂದ ತಾಲೂಕಿನಾದ್ಯಂತ ಸಭೆ ಸಮಾರಂಭಗಳನ್ನು ನಡೆಸಿ ಗೆಲುವು ಅಭ್ಯರ್ಥಿಗಳ
ಪಟ್ಟಿಯನ್ನು ತಯಾರಿಸುತ್ತಿದ್ದಾರೆ

ಗ್ರಾಮಗಳ ಅಭಿವೃದ್ಧಿ ಎಂಬ ಗಾಂಧಿ ಮಂತ್ರಕ್ಕೆ ವಿರುದ್ಧವಾಗಿ ಇಂದಿನ ಸಮಾಜದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡಲಿರುವ ಇಂತಹ ಹರಾಜು ಪ್ರಕ್ರಿಯೆಗಳು ನಡೆಯದಿರಲಿ ಎಂಬುದೇ ಸಾರ್ವಜನಿಕರ ಆಶಯವಾಗಿದೆ

error: