May 2, 2024

Bhavana Tv

Its Your Channel

ಮಳವಳ್ಳಿ ತಾಲೂಕಿನಲ್ಲಿ ಕೊರೋನ ಹೆಚ್ಚಳ; ನಾಲ್ಕು ಗ್ರಾಮಗಳು ಸಂಪೂರ್ಣ ಸೀಲ್ ಡೌನ್

ಮಳವಳ್ಳಿ : ರಾಜ್ಯದೆಲ್ಲೆಡೆಯಂತೆ ಮಳವಳ್ಳಿ ತಾಲೂಕಿನಲ್ಲಿ ಸಹ ಕೊರೋನ ೨ನೇ ಅಲೆ ವ್ಯಾಪಕ ವಾಗಿ ಹರಡುತ್ತಿರುವ ಹಿನ್ನೆಲೆ ಯಲ್ಲಿ ತಾಲೂಕಿನ ನಾಲ್ಕು ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಿ ತಾಲ್ಲೂಕು ತಹಸೀಲ್ದಾರ್ ವಿಜಯಣ್ಣ ಆದೇಶ ಹೊರಡಿಸಿದ್ದಾರೆ.


ತಾಲೂಕಿನ ಕೋರೇಗಾಲ, ಹಲಗೂರು. ಹುಸ್ಕೂರು, ಹಾಗೂ ಬೆಳಕವಾಡಿ ಗ್ರಾಮಗಳನ್ನು ತಹಸೀಲ್ದಾರ್ ಅವರ ಅದೇಶದಂತೆ ಆಯಾ ಗ್ರಾ ಪಂ ಅಧಿಕಾರಿಗಳು ಸಂಪೂರ್ಣ ಸೀಲ್ ಡೌನ್ ಮಾಡಿದ್ದಾರೆ.
ಈ ಗ್ರಾಮಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರು ಈ ಕ್ರಮ ಕೈಗೊಂಡಿದ್ದಾರೆ.
ಇದಲ್ಲದೆ ಇಂದು ಸಾಯಂಕಾಲದ ಹೊತ್ತಿಗೆ ಇನ್ನಷ್ಟು ಗ್ರಾಮಗಳು ಸೀಲ್ ಡೌನ್ ಗೆ ಒಳಗಾಗಲಿವೆ ಎಂದು ತಾಲ್ಲೂಕು ಕಚೇರಿ ಮೂಲಗಳು ತಿಳಿಸಿವೆ.

error: