May 15, 2024

Bhavana Tv

Its Your Channel

೫೨ಲಕ್ಷ ರೂಪಾಯಿ ಹಣವನ್ನು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿ ದುರುಪಯೋಗಪಡಿಸಿಕೊಂಡ ಆರೋಪ

ಕೃಷ್ಣರಾಜಪೇಟೆ ಕೊರೋನಾ ನಿರ್ವಹಣೆಗಾಗಿ ತಾಲೂಕು ಆರೋಗ್ಯ ರಕ್ಷಾ ಸಮಿತಿಗೆ ಸರ್ಕಾರದಿಂದ ಬಿಡುಗಡೆಯಾಗಿದ್ದ ೫೨ಲಕ್ಷ ರೂಪಾಯಿ ಹಣವನ್ನು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿ ಡಾ.ಜಯಂತ್ ಅವರು ದುರುಪಯೋಗಪಡಿಸಿಕೊಂಡಿದ್ದಾರೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಲೂಕು ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷರು ಬಿ.ಎಲ್.ದೇವರಾಜು ಅವರು ಒತ್ತಾಯಿಸಿದ್ದಾರೆ.

ಕೃಷ್ಣರಾಜಪೇಟೆ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿ.ಎಲ್.ದೇವರಾಜು ಅವರು ವೈದ್ಯಾಧಿಕಾರಿಯ ಬ್ರಷ್ಟಾಚಾರದ ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಮಾತನಾಡಿದರು.
ಕೊರೋನಾ ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ಇದುವರೆಗೆ ತಾಲೂಕು ಆರೋಗ್ಯ ಸುರಕ್ಷಾ ಸಮಿತಿಗೆ ೫೨ ಲಕ್ಷ ರೂ ಬಿಡುಗಡೆ ಮಾಡಿದೆ. ಇದರಲ್ಲಿ ಶೇ.೭೦ ರಷ್ಟು ಹಣವನ್ನು ಕೋವಿಡ್ ಒಳ ರೋಗಿಗಳ ಚಿಕಿತ್ಸೆ ಮತ್ತು ಉಪಚಾರಕ್ಕಾಗಿ ಬಳಕೆ ಮಾಡಬೇಕು. ಉಳಿದ ಸೇ.೩೦ ರಷ್ಟು ಹಣವನ್ನು ಕೋವಿಡ್ ಕರ್ತವ್ಯನಿರತ ವೈದ್ಯರು, ನರ್ಸ್ ಗಳಿಗೆ ಮತ್ತು ಗ್ರೂಪ್ ನೌಕರರಿಗೆ ಪ್ರೋತ್ಸಾಹಕ ಧನವನ್ನಾಗಿ ಹಂಚಿಕೆ ಮಾಡಬೇಕು. ಕೋವಿಡ್ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಪ್ರೋತ್ಸಾಹಕವಾಗಿ ಹಂಚಬೇಕಾದ ೮ ಲಕ್ಷ ರೂ ಹಣವನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಂಚಿಕೆ ಮಾಡದೆ ಸ್ವಾಹ ಮಾಡಿದ್ದಾರೆ. ಈ ಬಗ್ಗೆ ಕೋವಿಡ್ ಕರ್ತವ್ಯ ನಿರತ ವೈದ್ಯರು ಮತ್ತಿತರ ಸಿಬ್ಬಂಧಿಗಳು ಸಭೆ ಸೇರಿ ಪ್ರಶ್ನಿಸಿದ್ದರೂ ಆಡಳಿತ ವೈದ್ಯಾಧಿಕಾರಿ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕರಾದ ತೆರ್ನೇನಹಳ್ಳಿ ಬಲದೇವ್, ಸಾಕ್ಷೀಬೀಡು ನವೀನ್ ಕುಮಾರ್, ರಾಜಾಹುಲಿ ದಿನೇಶ್, ಅಕ್ಕಿಹೆಬ್ಬಾಳು ರಘು, ಕೊರಟೀಕೆರೆ ದಿನೇಶ್, ಜೆಡಿಎಸ್ ಮುಖಂಡ ಬಸ್ ಕೃಷ್ಣೇಗೌಡ ಇತರರು ಇದ್ದರು.
ವರದಿ: ಶಂಭು ಕಿಕ್ಕೆರಿ

error: