May 15, 2024

Bhavana Tv

Its Your Channel

ಸಸಿಗಳ ನಾಟಿ ಹಾಗೂ ಸ್ವಸಹಾಯ ಸಂಘಗಳ ಲಾಭಾಂಶ ವಿತರಣೆ ಕಾರ್ಯಕ್ರಮ

ಕೃಷ್ಣರಾಜಪೇಟೆ ತಾಲ್ಲೂಕು ಅಕ್ಕಿಹೆಬ್ಬಾಳು ಹೋಬಳಿಯ ದುಡುಕನಹಳ್ಳಿ ಗ್ರಾಮದಲ್ಲಿ ಕೆರೆ ಅಂಗಳದಲ್ಲಿ ಸಸಿಗಳ ನಾಟಿ ಹಾಗೂ ಸ್ವಸಹಾಯ ಸಂಘಗಳ ಲಾಭಾಂಶ ವಿತರಣ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಅಕ್ಕಿಹೆಬ್ಬಾಳು ವಲಯ ದುಡುಕನಹಳ್ಳಿ ಕಾರ್ಯಕ್ಷೇತ್ರದ ದುಡುಕನಹಳ್ಳಿ ಕೆರೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಸಸಿ ನೆಟ್ಟು ಉದ್ಘಾಟನೆ ಮಾಡಿದ ಪ್ರಾದೇಶಿಕ ನಿರ್ದೇಶಕರಾದ ಗಂಗಾಧರ ರೈ ಅವರು ಪ್ರತಿಯೊಬ್ಬರೂ ಮನೆ ಅಂಗಳದಲ್ಲಿ ಹಾಗೂ ತಮ್ಮ ಗದ್ದೆ ಹೊಲಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಹೇಳಿದರು. ನಾವು ಮೊದಲಿಂದಲೂ ಗಿಡಮರಗಳನ್ನು ಪೋಷಿಸಿಕೊಂಡು ಬರುತ್ತಿದ್ದಾರೆ . ನಮ್ಮ ಹಿರಿಯರು ಒಂದು ಮರ ಕಡಿಯುವ ಮುನ್ನ ಎರಡು ಗಿಡಗಳನ್ನು ನೆಟ್ಟು ಅನಂತರ ಮರಗಳನ್ನು ಕಡಿಯುತ್ತಿದ್ದರು ಆದರೆ ಈಗ ಮರ ಗಿಡಗಳನ್ನು ಕಡಿದು ಪರಿಸರ ನಾಶ ಮಾಡುತ್ತಿದ್ದಾರೆ ಎಂದು ಹೇಳಿದರು. ಅದೇ ರೀತಿ ನೀವು ಮರಗಳನ್ನು ಕಡಿಯುವ ಮುನ್ನ ಎರಡು ಗಿಡಗಳನ್ನು ನೆಟ್ಟು ಮುಂದಿನ ಭವಿಷ್ಯಕ್ಕೆ ಉತ್ತಮ ಪರಿಸರವನ್ನು ನೀಡಬೇಕೆಂದು ಸಂದೇಶ ನೀಡಿದರು ನಮ್ಮ ಸಂಸ್ಥೆಯ ಸ್ವಸಹಾಯ ಸಂಘಗಳಿಗೆ ಪರಮಪೂಜ್ಯ ಪದ್ಮವಿಭೂಷಣ ಡಾಕ್ಟರ್ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಂತೆ ಪ್ರತಿ ಸಂಘಗಳಿಗೂ ಲಾಭಾಂಶವನ್ನು ವಿತರಣೆ ಮಾಡುತ್ತಿದ್ದೇನೆ. ಈ ಲಾಭಾಂಶ ವಿತರಣೆಯು ಈ ಕೋವಿಡ್ ಸಂದರ್ಭದಲ್ಲಿ ಎಲ್ಲಾರಿಗೂ ಉಪಯೋಗವಾಗುವುದು. ಹಾಗೆಯೇ ನಮ್ಮ ಪೂಜ್ಯರ ಮಾರ್ಗದರ್ಶನದ ಹಾಗೂ ಸಲಹೆಗಳ ಮೂಲಕ ಸಸಿ ನೆಡುವ ಕಾರ್ಯಕ್ರಮ ಮತ್ತು ಕೆರೆಗಳನ್ನು ಅಭಿವೃದ್ಧಿ ಮಾಡುವ ಯೋಜನೆಗಳನ್ನು ನಮ್ಮ ಸಂಸ್ಥೆಯು ಮಾಡುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೆರೆಯ ಸುತ್ತಲು ೧೫೦ಕ್ಕೂ ಹೆಚ್ಚಿನ ಸಸಿಗಳನ್ನು ನಾಟಿ ಮಾಡಲಾಯಿತು. ಹಾಗೆಯೆ ಪ್ರಗತಿಪರ ರೈತರಿಗೆ ಸಸಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಂಗಾಧರ ರೈ, ನಿರ್ದೇಶಕರಾದ ಮಹಾಬಲ ಕುಲಾಲ್, ಯೋಜನಾಧಿಕಾರಿಗಳಾದ ಮಮತಾ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ವಾಣಿ, ಹೆಡ್ ಕಾನ್ಸ್ಟೇಬಲ್ ಮೊಹಮ್ಮದ್ ಗೌಸ್, ಅಕ್ಕಿಹೆಬ್ಬಾಳು ವಲಯದ ಮೇಲ್ವಿಚಾರಕರಾದ ಸರಸ್ವತಿ, ಕೃಷಿ ಅಧಿಕಾರಿಗಳಾದ ಮನೋಹರ್, ಮಹೇಶ್, ಗೋಪಾಲಯ್ಯ, ಲಿಂಗರಾಜು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು

ವರದಿ ಅಜುರುದ್ದೀನ ಕೆ.ಆರ್ ಪೇಟೆ

error: