May 15, 2024

Bhavana Tv

Its Your Channel

ಮಾಜಿ ಉಪಪ್ರಧಾನಮಂತ್ರಿ ಬಾಬೂ ಜಗಜೀವನರಾಂ ಅವರ ೩೫ನೇ ಪುಣ್ಯಸ್ಮರಣೆ ಕಾರ್ಯಕ್ರಮ

ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲ್ಲೂಕು ಆಡಳಿತವು ಆಯೋಜಿಸಿದ್ದ ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನ ಮಂತ್ರಿ ಬಾಬೂ ಜಗಜೀವನರಾಂ ಅವರ ೩೫ನೇ ಪುಣ್ಯಸ್ಮರಣೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು ..

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಂ.ಶಿವಮೂರ್ತಿ ಮಾತನಾಡಿ ಹಸಿರುಕ್ರಾಂತಿಯ ಹರಿಕಾರನಾಗಿ ದೇಶದ ಆಹಾರ ಭದ್ರತೆಗೆ ಅಮೂಲ್ಯವಾದ ಕಾಣಿಕೆಯನ್ನು ನೀಡಿರುವ ಬಾಬೂಜಿ ತಾವು ಕಾರ್ಯನಿರ್ವಹಿಸಿದ ಎಲ್ಲಾ ಖಾತೆಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿ ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಜಾತಿ, ಮತ ಹಾಗೂ ಪಂಥಗಳಿAದ ಮುಕ್ತವಾದ ಸಮಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಬಾಬೂಜಿ ಅವರ ಜೀವನದ ಆದರ್ಶಗಳನ್ನು ಯುವಜನರು ಪಾಲಿಸುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಮನವಿ ಮಾಡಿದರು..ಕೃಷ್ಣರಾಜಪೇಟೆ ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಮಹೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿಸದಸ್ಯ ರಾಮದಾಸ್, ಬಾಬೂ ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹೆಚ್.ಎಂ.ಪುಟ್ಟರಾಜು, ಮಂಡ್ಯ ಜಿಲ್ಲಾ ಛಲವಾಧಿ ಮಹಾಸಭಾದ ಅಧ್ಯಕ್ಷ ಮಾಂಬಳ್ಳಿ ಜಯರಾಂ, ಮುಖಂಡರಾದ ಸುರೇಶ್ ಹರಿಜನ, ಮುದುಗೆರೆ ಮಹೇಂದ್ರ, ಬಿಬಿಕಾವಲು ಕಾಂತರಾಜು, ಸಿಡಿಪಿಓ ದೇವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: