April 27, 2024

Bhavana Tv

Its Your Channel

ಪಿಡಿಓ ಹಾಗೂ ಕಡತ ಸಹಾಯಕಿಗೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಿಂದ ಕಿರುಕುಳ; ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷರಿಂದ ಆರೋಪ

ಕೃಷ್ಣರಾಜಪೇಟೆ ತಾಲ್ಲೂಕಿನ ಹರಳಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಜನಪರವಾಗಿ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಯಿದಾಅಕ್ತರ್ ಹಾಗೂ ಕಡತ ಸಹಾಯಕಿ ಶಾನೂಬಿ ವಿರುದ್ಧ ಜಿ.ಪಂ ಮಾಜಿಸದಸ್ಯನ ದೌರ್ಜನ್ಯ, ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿ, ಪಿಡಿಓ ಗೆ ಮಾನಸಿಕ ಕಿರುಕುಳ ನೀಡಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹರಳಹಳ್ಳಿ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಕರ್ತೇನಹಳ್ಳಿ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ …

ನರೇಗ ಕಾಮಗಾರಿಯ ಅನುಷ್ಠಾನದಲ್ಲಿ ಶೇ.೧೦೦ಕ್ಕೆ ೧೦೦ರಷ್ಟು ಸಾಧನೆ ಮಾಡಿ ಗ್ರಾಮೀಣ ಜನರ ಸಂಕಷ್ಠಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಗಳು ಪಿಡಿಓ ನಾಯಿದಾಅಕ್ತರ್ ಹಾಗೂ ಕಡತ ಸಹಾಯಕಿ ಶಾನೂಬಿ ಅವರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ, ಜಿಲ್ಲಾಪಂಚಾಯಿತಿ ಮಾಜಿಸದಸ್ಯರ ಆಡಳಿತ ಹಸ್ತಕ್ಷೇಪವನ್ನು ತಪ್ಪಿಸಿ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯರಾದ ಕರ್ತೇನಹಳ್ಳಿ ಸುರೇಶ್, ಉಮಾದೇವಿ, ಶಿವಕುಮಾರ್, ನಾಗಮ್ಮ, ಅನ್ನಪೂರ್ಣ ಮತ್ತು ಸವಿತಾ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕಿ ಮೇನಕಾದೇವಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು…

ಹರಳಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಶೀಲಮ್ಮ ಮತ್ತು ಉಪಾಧ್ಯಕ್ಷ ಆರ್.ಕೆ.ಯೋಗೇಶ್ ಅವರನ್ನು ತಮ್ಮ ಕೈಗೊಂಬೆಗಳನ್ನಾಗಿ ಮಾಡಿಕೊಂಡಿರುವ ಜಿ.ಪಂ ಮಾಜಿಸದಸ್ಯ ಹೆಚ್.ಟಿ.ಮಂಜು ತಮ್ಮ ಸಂಬAಧಿ ಕಂಪ್ಯೂಟರ್ ಆಪರೇಟರ್ ಸುನೀಲ್ ಅವರ ಮೂಲಕ ಗ್ರಾಮ ಪಂಚಾಯತಿ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿ ಮಹಿಳಾ ನೌಕರರಿಗೆ ಮಾನಸಿಕ ಕಿರುಕುಳ ನೀಡಿ ದೌರ್ಜನ್ಯ ನಡೆಸುತ್ತಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಡತ ಸಹಾಯಕಿ ಶಾನೂಬಿ ಅವರನ್ನು ಸಕಾರಣವಿಲ್ಲದೇ ರಾಜಕೀಯ ದುರುದ್ಧೇಶದಿಂದ ಕೆಲಸದಿಂದ ತೆಗೆದುಹಾಕಿಸಿದ್ದಲ್ಲದೇ ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಪಿಡಿಓ ನಾಯಿದಾಅಕ್ತರ್ ಹಾಗೂ ಗ್ರಾಮ ಪಂಚಾಯತಿ
ಕಡತ ಸಹಾಯಕಿ ಶಾನೂಬಿ ಅವರಿಗೆ ಮಾನಸಿಕ ಕಿರುಕುಳ ನೀಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸದಸ್ಯರು ಗಂಭೀರ ಆರೋಪ ಮಾಡಿದರು..

ಜನಪರವಾಗಿ ಕೆಲಸ ಮಾಡುತ್ತಿರುವ ಅಲ್ಪಸಂಖ್ಯಾತ ಸಮಾಜಕ್ಕೆ ಸೇರಿರುವ ದಕ್ಷ ಮಹಿಳಾ ಅಧಿಕಾರಿ ನಾಯಿದಾಅಕ್ತರ್ ಅವರ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪ ಮಾಡಿ ಗ್ರಾಮ ಪಂಚಾಯತಿ ಆಡಳಿತದಲ್ಲಿ ತಮ್ಮಹಸ್ತಕ್ಷೇಪ ನಡೆಸುತ್ತಿರುವ ಜೆಡಿಎಸ್ ಮುಖಂಡ ಹರಳಹಳ್ಳಿ ಮಂಜು ವಿರುದ್ಧ ಕಾನೂನು ಕ್ರಮಕೈಗೊಂಡು ಮಹಿಳಾ ಅಧಿಕಾರಿಗಳಿಗೆ ಸೂಕ್ತರಕ್ಷಣೆ ನೀಡಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯರ ನಿಯೋಗವು ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕಿ ಮೇನಕಾದೇವಿ ಅವರನ್ನು ಆಗ್ರಹಿಸಿದರು.

ಪರಿಶಿಷ್ಟ ಜಾತಿಗೆ ಸೇರಿರುವ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಶೀಲಮ್ಮ ರಾಯಸಮುದ್ರ ಗ್ರಾಮದಲ್ಲಿ ಪರಿಶಿಷ್ಟ ಜನಾಂಗಕ್ಕೆ ಸೇರಿರುವ ಜನರು ಹಾಗೂ ಕುಟುಂಬಗಳ ವಿರುದ್ಧವೇ ದೌರ್ಜನ್ಯ ನಡೆಸುತ್ತಿರುವುದಲ್ಲದೇ ಉದ್ಯೋಗ ಖಾತ್ರಿ ಸೇರಿದಂತೆ ಯಾವುದೇ ಯೋಜನೆಗಳ ಮೂಲಕ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡದೇ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಮಹಿಳಾ ನೌಕರರ ವಿರುದ್ಧ ದಬ್ಬಾಳಿಕೆ ನಡೆಸಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಮಹಿಳಾ ಸದಸ್ಯೆಯರು ಆಗ್ರಹಿಸಿದರು..

ನಿಯಮಬದ್ಧವಾಗಿಯೇ ಗ್ರಾಮ ಪಂಚಾಯತಿಯಲ್ಲಿ ನಿರ್ಣಯಕೈಗೊಂಡು ಕಡತ ಸಹಾಯಕಿಯನ್ನು ಕೆಲಸಕ್ಕೆ ತೆಗೆದುಕೊಂಡಿದೆ. ಕಳೆದ ಏಳೆಂಟು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಡತ ಸಹಾಯಕಿ ಶಾನೂಬಿ ಅವರನ್ನು ಕೆಲಸದಿಂದ ತೆಗೆದುಹಾಕಿದ ಕ್ರಮವನ್ನು ಖಂಡಿಸಿದ ಸದಸ್ಯರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಪಿಡಿಓ ನಾಯಿದಾಅಕ್ತರ್ ಹಾಗೂ ಕಡತ ಸಹಾಯಕಿ ಶಾನೂಬಿ ಅವರಿಗೆ ಸೂಕ್ತರಕ್ಷಣೆ ನೀಡಿ ಕಡತ ಸಹಾಯಕಿ ಶಾನೂಬಿ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಹರಳಹಳ್ಳಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕೆಂದು ಗ್ರಾಮಪಂಚಾಯಿತಿ ಸದಸ್ಯರಾದ ಕರ್ತೇನಹಳ್ಳಿ ಸುರೇಶ್, ಉಮಾದೇವಿ, ಶಿವಕುಮಾರ್, ನಾಗಮ್ಮ, ಅನ್ನಪೂರ್ಣ ಮತ್ತು ಸವಿತಾ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಅವರನ್ನು ಒತ್ತಾಯಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ
.

error: