April 27, 2024

Bhavana Tv

Its Your Channel

ಬಿಜೆಪಿ ಪಕ್ಷವು ರಾಜ್ಯ ಮತ್ತು ದೇಶದ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿದೆ-ಸಚಿವ ಡಾ.ನಾರಾಯಣಗೌಡ

ಕೆ.ಆರ್.ಪೇಟೆ: ಮುಳುಗುತ್ತಿರುವ ಹಡಗಿನಂತಾಗಿರುವ ಕಾಂಗ್ರೆಸ್ ಒಡೆದ ಮನೆಯಾಗಿದ್ದರೆ, ಸ್ವಾರ್ಥ ಸಾಧನೆ ಮಾಡುತ್ತಿರುವ ಅಪ್ಪಮಕ್ಕಳ ಪಕ್ಷವಾದ ಜೆಡಿಎಸ್ ರಾಜ್ಯದ ಹಿತವನ್ನು ಕಡೆಗಣಿಸಿದೆ. ಆದರೆ ಬಿಜೆಪಿ ಪಕ್ಷವು ಮಾತ್ರ ರಾಜ್ಯ ಮತ್ತು ದೇಶದ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿದೆ. ಮಂಡ್ಯ ಜಿಲ್ಲೆಯ
ಅಭಿವೃದ್ಧಿಯನ್ನು ಮೂಲ-ಮಂತ್ರವನ್ನಾಗಿಸಿಕೊAಡಿರುವ ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವು ಶತಸಿದ್ಧವಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ವಿಶ್ವಾಸ
ವ್ಯಕ್ತಪಡಿಸಿದರು.

ಇಂದು ಕೆ.ಆರ್.ಪೇಟೆ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುಧಾಯ ಭವನದಲ್ಲಿ ನಡೆದ ಬಿಜೆಪಿ ಪಕ್ಷದ ಅಭ್ಯರ್ಥಿ ಬೂಕಹಳ್ಳಿ ಮಂಜು ಅವರ ಪರವಾಗಿ ಮತಪ್ರಚಾರ ನಡೆಸಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಉಪ ಚುನಾವಣೆಯಲ್ಲಿ ರಾಜಕೀಯ ಪಂಡಿತರು ಸೇರಿದಂತೆ ಎಲ್ಲರ ಲೆಕ್ಕಾಚಾರವನ್ನು
ಬುಡಮೇಲು ಮಾಡಿ ಬಿಜೆಪಿ ಅಭ್ಯರ್ಥಿಯಾದ ನಾನು ದಿಗ್ವಿಜಯ ಸಾಧಿಸಿದಂತೆ ಈ ಭಾರಿ ವಿಧಾನಪರಿಷತ್ ಅಭ್ಯರ್ಥಿ ಯಾಗಿರುವ ಸರಳ ಸಜ್ಜನ ರಾಜಕಾರಣಿ ಬೂಕಹಳ್ಳಿ ಮಂಜು ಅವರು ಭಾರೀ ಬಹುಮತಗಳ ಅಂತರದಿAದ ಗೆಲುವು ಸಾಧಿಸಲಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಪವಾಡ ನಡೆಯಲಿದ್ದು ಈಗಾಗಲೇ ಕನಿಷ್ಠ ಮೂರು ನಾಲ್ಕು ಭಾರಿ ಗ್ರಾಮ ಪಂಚಾಯಿತಿ ಸದಸ್ಯರ ಮನೆಬಾಗಿಲಿಗೆ ತೆರಳಿ ಸದಸ್ಯರ ಕಷ್ಟಸುಖಗಳನ್ನು ವಿಚಾರಿಸಿ ನಿಮ್ಮ ಕಷ್ಟಕ್ಕೆ ನಾನಿದ್ದೇನೆ ಎಂಬ ವಿಶ್ವಾಸ ತುಂಬಿ ಆಶೀರ್ವಾದ ಪಡೆದಿರುವ ಬೂಕಹಳ್ಳಿ ಮಂಜು ಅವರ ಪರವಾಗಿ ಪಕ್ಷಾತೀತವಾಗಿ ಜಿಲ್ಲೆಯ ಎಲ್ಲಾ ಏಳೂ ತಾಲೂಕುಗಳಲ್ಲಿಯೂ ಬೆಂಬಲವು ವ್ಯಕ್ತವಾಗುತ್ತಿದೆ. ಹಣದ ಥೈಲಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಇದೀಗ ಕಾಂಗ್ರೇಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ರಾಜಕೀಯದ ಗಂಧಗಾಳಿ ಗೊತ್ತಿಲ್ಲದ ದಿನೇಶ್ ಗೂಳೀಗೌಡ ಅವರಿಗೆ ನಿರಾಸೆ
ಕಾದಿದೆ. ಕಳೆದ ೬ ವರ್ಷಗಳ ಹಿಂದೆ ಸದಸ್ಯರ ಮತ ಪಡೆದು ತಲೆಮರೆಸಿಕೊಂಡು ನಾಪತ್ತೆಯಾಗಿದ್ದ ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ಮತ್ತೆ ಮತ ಕೇಳಲು ನಿಮ್ಮ ಮುಂದೆ ಬoದಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಜಿಲ್ಲೆಯ ಜನತೆಯ ಯೋಗಕ್ಷೇಮವನ್ನು ಕಡೆಗಣಿಸಿದ್ದ ಜೆಡಿಎಸ್ ಅಭ್ಯರ್ಥಿಗೆ ಜನರೇ ತಕ್ಕ ಪಾಠವನ್ನು ಕಲಿಸಲಿದ್ದಾರೆ. ಜಿಲ್ಲೆಯ ಜನತೆಯ ಸರ್ವ ಸಮ್ಮತವಾದ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣಾ ಅಖಾಡದಲ್ಲಿರುವ ಸರಳ ಸಜ್ಜನ ರಾಜಕಾರಣಿ, ಉಧ್ಯಮಿ ಬೂಕಹಳ್ಳಿ ಮಂಜು ಒಬ್ಬ ಸಾಮಾನ್ಯ ರೈತನ ಮಗನಾಗಿದ್ದಾರೆ. ಜನಸಾಮಾನ್ಯರು ಹಾಗೂ ರೈತ ಬಾಂಧವರ ಕಷ್ಟಸುಖಗಳನ್ನು ಹತ್ತಿರದಿಂದ ಕಂಡಿರುವ ಮಂಜು ಅವರ ಗೆಲುವು ನಿಚ್ಛಳವಾಗಿದ್ದು ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಇದೊಂದು ಭಾರಿ ನಮ್ಮ ಮತ ಬಿಜೆಪಿ ಅಭ್ಯರ್ಥಿಯಾಗಿರುವ ಮಂಜಣ್ಣ ಅವರಿಗೆ ಕೊಡ್ತೀವಿ, ನಮಗೆ ಪಕ್ಷಕ್ಕಿಂತಲೂ ಶ್ರೀಸಾಮಾನ್ಯರ ಕಷ್ಟಸುಖಗಳನ್ನು ಆಲಿಸುವ ಅಭ್ಯರ್ಥಿಯ ಗೆಲುವು ಮುಖ್ಯ ಎಂದು ಹೇಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವಬೂಕಹಳ್ಳಿ ಮಂಜು ಅವರು ಡಿಸೆಂಬರ್ ೧೦ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ ಎಂದು ಸಚಿವ ನಾರಾಯಣಗೌಡ ಭವಿಷ್ಯ ನುಡಿದರು.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ೭ಸಾವಿರ ಕೋಟಿ ರೂ ವಿಶೇಷ ಅನುಧಾನ ನೀಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಜಿಲ್ಲೆಯ ಜನತೆಗೆ ಟೋಪಿ ಹಾಕಿದ ಜೆಡಿಎಸ್ ಕಾಂಗ್ರೇಸ್ ಮೈತ್ರಿ ಸರ್ಕಾರವು ಹಾಸನ ಮತ್ತು ರಾಮನಗರ ಜಿಲ್ಲೆಗಳಿಗೆ ಹಣದ ಹೊಳೆಯನ್ನೇ ಹರಿಸಿತು. ಆದರೆ ಜಿಲ್ಲೆಯ ಸುಪುತ್ರ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ಜಿಲ್ಲೆಗೆ ೪ಸಾವಿರ ಕೋಟಿ ರೂಗಳಿಗೂ ಹೆಚ್ಚಿನ ಅನುಧಾನವನ್ನು ನೀಡುವ ಮೂಲಕ ಜಿಲ್ಲೆಗೆ ಆಗಿದ್ದ ಅನ್ಯಾಯವನ್ನು ಸರಿಪಡಿಸಿದ್ದರು. ನಾನು ಮೂರು ಭಾರಿ ಶಾಸಕನಾಗಿ ಸಿದ್ಧರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಅವರ ಆಡಳಿತ ವೈಖರಿಯನ್ನು ಹತ್ತಿರದಿಂದ ಕಂಡಿದ್ದೇನೆ. ಕೊಟ್ಟ ಮಾತಿಗೆ ತಪ್ಪದ ಮಾತಿನಂತೆ ನಡೆಯುವ ರಾಜಕಾರಣಿ ರಾಜ್ಯದಲ್ಲಿ ಯಾರಾದರೂ ಇದ್ದರೆ ಅವರು ಜಿಲ್ಲೆಯ ಸುಪುತ್ರ ರೈತನಾಯಕರಾದ ಬಿ.ಎಸ್.ಯಡಿಯೂರಪ್ಪ ಮಾತ್ರ. ಜಿಲ್ಲೆಯ ಹೆಮ್ಮೆಯ ಮಗನಾದ ಯಡಿಯೂರಪ್ಪ ಅವರ ಕೈಬಲಪಡಿಸಲು ಜಿಲ್ಲೆಗಾಗಿರುವ ಅನ್ಯಾಯವನ್ನು ಸರಿಪಡಿಸಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಜಿಲ್ಲೆಯ ಪ್ರಜ್ಞಾವಂತ ಜನತೆ ಜಿಲ್ಲೆಯ ಅಭಿವೃದ್ಧಿಗಾಗಿ ಜಿಲ್ಲೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯಲು ಬಿಜೆಪಿ ಅಭ್ಯರ್ಥಿಗೆ ಮತನೀಡಿ ಗೆಲುವಿನ ವಿಜಯಮಾಲೆ ತೊಡಿಸಿ ನನ್ನೊಂದಿಗೆ ವಿಧಾನಸೌಧಕ್ಕೆ ಕರೆದುಕೊಂಡು ಹೋಗುತ್ತೇನೆ. ಇಬ್ಬರೂ ಸೇರಿಕೊಂಡು ಜಿಲ್ಲೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ ಸಾಧಿಸಿ ತೋರಿಸುತ್ತೇವೆ
ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯ
ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಮೈಸೂರು ವಿಭಾಗದ ಬಿಜೆಪಿ ಪ್ರಭಾರಿಗಳಾದ ಮೈ.ವಿ.ರವಿಶಂಕರ್, ಮೈಷುಗರ್ ಅಧ್ಯಕ್ಷ ಶಿವಲಿಂಗೇಗೌಡ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ಧರಾಮಯ್ಯ, ಬಿಜೆಪಿ ಮೈಸೂರು ವಿಭಾಗ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಬಿಜೆಪಿ ಜಿಲ್ಲಾ ಮಾಜಿಅಧ್ಯಕ್ಷ ನಾಗಣ್ಣಗೌಡ, ಪುರಸಭೆ ಅಧ್ಯಕ್ಷೆ ಮಹಾದೇವಿ, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಬೇಲದಕೆರೆ ಪಾಪೇಗೌಡ, ಶೀಳನೆರೆಅಂಬರೀಶ್, ಕಿಕ್ಕೇರಿ ಪ್ರಭಾಕರ್ ಸಭೆಯಲ್ಲಿ ಮಾತನಾಡಿದರು.

ಕೃಷ್ಣರಾಜಪೇಟೆ ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಲತಾಮುರಳಿ, ಕೃಷ್ಣರಾಜಪೇಟೆ ನಗರ ಬಿಜೆಪಿ ಮಹಿಳಾ ಅಧ್ಯಕ್ಷೆಚಂದ್ರಕಲಾರಮೇಶ್, ಓಬಿಸಿ ಮೋರ್ಚಾ ಅಧ್ಯಕ್ಷ ಸಾರಂಗಿ ನಾಗರಾಜು, ಎಸ್‌ಸಿ ಮೋರ್ಚಾ ಅಧ್ಯಕ್ಷ ರವಿಶಿವಕುಮಾರ್, ರೈತಮೋರ್ಚಾ ಅಧ್ಯಕ್ಷ ಶಿವರಾಮೇಗೌಡ, ಪುರಸಭೆಯ ಸದಸ್ಯರಾದ ಹೆಚ್.ಆರ್.ಲೋಕೇಶ್, ಕೆ.ಎಸ್.ಪ್ರಮೋದ್, ಗಿರೀಶ್, ಶ್ರೀನಿವಾಸಕೇಸರಿ, ಇಂದ್ರಾಣಿ ವಿಶ್ವನಾಥ, ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಆರ್.ಜಗಧೀಶ್, ತಾಲೂಕು ಅಧ್ಯಕ್ಷ ನರೇಂದ್ರನಾಯಕ, ತಾಲೂಕು ಪಂಚಾಯಿತಿ ಮಾಜಿಅಧ್ಯಕ್ಷ ಬಿ.ಜವರಾಯಿಗೌಡ, ಸಾರಂಗಿ ಮಂಜುನಾಥಗೌಡ ಸೇರಿದಂತೆ ಸಾವಿರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: