May 14, 2024

Bhavana Tv

Its Your Channel

ನಿಷೇಧಾಜ್ಞೆ ಉಲ್ಲಂಘಿಸಿ ರಾಸುಗಳೊಂದಿಗೆ ಹೇಮಗಿರಿ ಜಾತ್ರೆಗೆ ಆಗಮಿಸಿರುವ ರೈತರು

ಕೆ.ಆರ್.ಪೇಟೆ: ನಿಷೇಧಾಜ್ಞೆ ಉಲ್ಲಂಘಿಸಿ ರಾಸುಗಳೊಂದಿಗೆ ಹೇಮಗಿರಿ ಜಾತ್ರೆಗೆ ಆಗಮಿಸಿರುವ ರೈತರು.ಜಾತ್ರಾಮಾಳದಲ್ಲಿರುವ ರಾಸುಗಳನ್ನು ಖಾಲಿ ಮಾಡಿಸಲು ಪೋಲಿಸರು ಹಾಗೂ ಕಂದಾಯಾಧಿಕಾರಿಗಳ ಹರಸಾಹಸ..ಕೋವಿಡ್ ಸೋಂಕು ಹರಡುವ ಭೀತಿ ..

ಜಿಲ್ಲಾಡಳಿತವು ಕೋವಿಡ್ 3ನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧವಾದ ಹೇಮಗಿರಿ ದನಗಳ ಜಾತ್ರೆಯನ್ನು ನಿಷೇಧಿಸಿದ್ದರೂ ಸಾವಿರಾರು ಸಂಖ್ಯೆಯಲ್ಲಿ ರಾಸುಗಳು ಜಾತ್ರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಾತ್ರಾಮಾಳದಿಂದ ರಾಸುಗಳನ್ನು ಮರಳಿಸಲು ಪೋಲಿಸರು ಮತ್ತು ಕಂದಾಯ ಇಲಾಖೆಯ ನೌಕರರು ಹರಸಾಹಸ ಮಾಡುತ್ತಿದ್ದಾರೆ.

ಕೆ.ಆರ್.ಪೇಟೆ ತಹಶೀಲ್ದಾರ್ ಎಂ.ವಿ.ರೂಪ ಅವರ ಅಧ್ಯಕ್ಷತೆಯಲ್ಲಿ ನಡೆದ ರೈತರು ಮತ್ತು ಸಾರ್ವಜನಿಕರ ಸಭೆಯಲ್ಲಿ ಹೇಮಗಿರಿ ಜಾತ್ರೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಶ್ವಥಿ ಅವರು ನಿಷೇಧಿಸಿ ಆದೇಶ ಹೊರಡಿಸಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿ ಈ ಬಾರಿ ದನಗಳ ಜಾತ್ರೆಯನ್ನು ನಿಷೇಧಿಸಲಾಗಿದ್ದು ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದು ಅರಿವು ಮೂಡಿಸಿದ್ದರೂ ನಿನ್ನೆ ತಡ ರಾತ್ರಿಯಿಂದ ಭಾರೀ ಸಂಖ್ಯೆಯಲ್ಲಿ ರಾಸುಗಳೊಂದಿಗೆ ರೈತರು ಜಾತ್ರೆಗೆ ಆಗಮಿಸಿರುವುದರಿಂದ ಹೇಮಗಿರಿ ಜಾತ್ರೆಯು ಭಾಗಷಃ ರಾಸುಗಳೊಂದಿಗೆ ಭರ್ತಿಯಾಗಿದೆ..
ಹೇಮಗಿರಿ ಜಾತ್ರೆಗೆ ಆಗಮಿಸುತ್ತಿರುವ ರಾಸುಗಳನ್ನು ತಡೆದು ನಿಯಂತ್ರಿಸಲು ಪೋಲಿಸರು ಮತ್ತು ಕಂದಾಯ ಇಲಾಖೆಯ ಸಿಬ್ಬಂಧಿಗಳು ಹರಸಾಹಸ ಮಾಡುತ್ತಿದ್ದಾರೆ.

ಇಂದು ಸಂಜೆಯೊಳಗೆ ಜಾತ್ರಾ ಮಾಳದಲ್ಲಿರುವ ರಾಸುಗಳೊಂದಿಗೆ ರೈತ ಬಾಂಧವರು ಜಾಗ ಖಾಲಿ ಮಾಡಬೇಕು. ನಿಷೇಧಾಜ್ಞೆ ಹಾಗೂ ಕಾನೂನು ಉಲ್ಲಂಘಿಸುವ ರೈತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಕೆಲವು ರೈತರು ಪೋಲಿಸರು ಮತ್ತು ಕಂದಾಯ ಅಧಿಕಾರಿಗಳ ಮೇಲೆ ವಾಗ್ಯುದ್ಧ ನಡೆಸಿ ನಾವು ರಾಸುಗಳೊಂದಿಗೆ ಜಾತ್ರೆಗೆ ಬಂದಾಗಿದೆ. ಇನ್ನು ಜಾತ್ರೆಯಿಂದ ಮರಳಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಒಟ್ಟಾರೆ ವಾತಾವರಣವು ಗಂಭೀರವಾಗಿದ್ದು ಕೋವಿಡ್ ಸೋಂಕು ಹರಡುವ ಭಯ ಹಾಗೂ ಕಾನೂನು ಉಲ್ಲಂಘನೆ ನಿಷೇಧಾಜ್ಞೆಯ ಭೀತಿಯು ರೈತರನ್ನು ಕಾಡುತ್ತಿದೆ.

ಇಂದು ಸಂಜೆಯೊಳಗೆ ಜಾತ್ರಾ ಮಾಳದಿಂದ ರಾಸುಗಳನ್ನು ಖಾಲಿ ಮಾಡಿಸುತ್ತೇವೆ. ರೈತಬಾಂಧವರು ಸಹಕರಿಸಬೇಕು, ಜೀವ ಇದ್ದರೆ ಜಾತ್ರೆ ಆರೋಗ್ಯವಾಗಿದ್ದರೆ ರಥೋತ್ಸವ ಎಂಬುದನ್ನು ತಿಳಿಯಬೇಕು ಎಂದು ತಹಶೀಲ್ದಾರ್ ರೂಪ ಮನವಿ ಮಾಡಿದ್ದಾರೆ. ಜಿಲ್ಲಾಡಳಿತವು ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಈ ಭಾರಿ ಹೇಮಗಿರಿ ಜಾತ್ರೆಯು ನಡೆಯುವುದಿಲ್ಲ, ರಥೋತ್ಸವವೂ ಕೂಡ ಇರುವುದಿಲ್ಲ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ವರದಿ. ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ.

error: