May 15, 2024

Bhavana Tv

Its Your Channel

ಕೆ.ಆರ್.ಪೇಟೆಯಲ್ಲಿ ದಲಿತ ಪರ ಸಂಘಟನೆಗಳಿOದ ಬೃಹತ್ ತಮಟೆ ಚಳುವಳಿ

ಕೆ.ಆರ್.ಪೇಟೆ:– ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರ ಅಂಬೇಡ್ಕರ್ ವಿರೋಧಿ ನಿಲುವು ಖಂಡಿಸಿ ಗೌಡರ ಭಾವಚಿತ್ರಕ್ಕೆ ಚಪ್ಪಲಿಯಿಂದ ಥಳಿಸಿ ಭಾವಚಿತ್ರಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ದಲಿತ ಮುಖಂಡರು..

ಮನುವಾದಿಯಾಗಿರುವ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸಿ ಗಡೀಪಾರು ಮಾಡಬೇಕು. ಗಣರಾಜ್ಯೋತ್ಸವ ದಿನದ ಸಮಾರಂಭದಲ್ಲಿ ಸಂವಿಧಾನಶಿಲ್ಪಿಯ ಭಾವಚಿತ್ರ ತೆಗೆಸಿ ಅವಮಾನ ಮಾಡಿರುವುದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆಯಾಗಿದೆ.

ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿ ತಮ್ಮ ಕರ್ತವ್ಯವನ್ನು ಮರೆತು ಸಂವಿಧಾನಶಿಲ್ಪಿಯ ಅವಹೇಳನ ಮಾಡಿರುವ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡನನ್ನು ಸೇವೆಯಿಂದ ವಜಾಗೊಳಿಸಿ ಈ ದೇಶದಿಂದಲೇ ಗಡೀಪಾರು ಮಾಡಬೇಕು ಎಂದು ವಕೀಲ ಗಂಜಿಗೆರೆ ಲೋಕೇಶ್, ದಲಿತಪರ ಸಂಘಟನೆಗಳ ಮುಖಂಡರಾದ ಡಿ.ಪ್ರೇಮಕುಮಾರ್, ಸಿಂದಘಟ್ಟ ಸೋಮಸುಂದರ್, ಮಾಂಬಳ್ಳಿಜಯರಾA, ಹೊಸಹೊಳಲು ಪುಟ್ಟರಾಜು, ಸಂತೋಷ್ ಕುಮಾರ್, ರಾಜಯ್ಯ, ಬಸ್ತಿರಂಗಪ್ಪ ಆಗ್ರಹಿಸಿದರು..

ಛಲವಾಧಿ ಮಹಾಸಭಾದ ಜಿಲ್ಲಾಧ್ಯಕ್ಷ ಮಾಂಬಳ್ಳಿ ಜಯರಾಂ, ಮಾದಿಗ ದಂಡೋರ ಹೋರಾಟ ಸಮಿತಿಯ ಪುಟ್ಟರಾಜು, ದಲಿತ ನಾಯಕರಾದ ಹೊಸಹೊಳಲು ದೇವರಾಜು, ವಕೀಲ ಗಂಜಿಗೆರೆ ಲೋಕೇಶ್, ದಲಿತ ಮುಖಂಡರಾದ ಡಿ.ಪ್ರೇಮಕುಮಾರ್, ಬಸ್ತಿರಂಗಪ್ಪ, ಸೋಮಸುಂದರ್, ಲಕ್ಷ್ಮೀಪುರ ರಂಗಸ್ವಾಮಿ, ಕತ್ತರಘಟ್ಟ ರಾಜೇಶ್, ತೆಂಡೇಕೆರೆ ನಿಂಗಯ್ಯ ಜೈನಹಳ್ಳಿ ಹರೀಶ್, ಬಂಡಿಹೊಳೆ ರಮೇಶ್ ಸೇರಿದಂತೆ ನೂರಾರು ದಲಿತ ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು..

ಕೆ.ಆರ್.ಪೇಟೆ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮಾನವಸರಪಳಿ ರಚಿಸಿ ರಸ್ತೆತಡೆ ಮಾಡಿದ ದಲಿತಪರ ಸಂಘಟನೆಗಳ ಮುಖಂಡರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ತಮಟೆ ಚಳವಳಿ ನಡೆಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪತಹಶೀಲ್ದಾರ್ ಹಿರಿಯಣ್ಣ ಅವರಿಗೆ ಮನವಿ ಸಲ್ಲಿಸಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸಿ ಗಡೀಪಾರು ಮಾಡುವಂತೆ ರಾಜ್ಯ ಉಚ್ಛನ್ಯಾಯಾಲಯಕ್ಕೆ ವರದಿ ನೀಡುವಂತೆ ಮನವಿ ಮಾಡಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: