May 13, 2024

Bhavana Tv

Its Your Channel

ಮಾರ್ಚ್ 5 ಕ್ಕೆ ಬಿ.ಎಂ ಕಿರಣ್ ನೇತೃತ್ವದಲ್ಲಿ ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮ

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಕರ್ನಾಟಕ ಪಬ್ಲೀಕ್ ಶಾಲಾ ಆವರಣದಲ್ಲಿ ದಿನಾಂಕ ಮಾರ್ಚ್ 5 ನೇ ಶನಿವಾರದೊಂದು ಜೆ.ಡಿ.ಎಸ್ ಪಕ್ಷದ ಪ್ರಭಾವಿ ಯುವ ನಾಯಕರಾದ ಬಿ.ಎಂ ಕಿರಣ್ ನೇತೃತ್ವದಲ್ಲಿ ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಎಲ್ಲಾ ಜೆ.ಡಿ.ಎಸ್ ಪಕ್ಷದ ಜಿಲ್ಲಾ, ತಾಲ್ಲೂಕು, ಹೋಬಳಿಯ ನಾಯಕರು,ಸಾರ್ವಜನಿಕರುಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಿಕ್ಕೇರಿ ಹೋಬಳಿ ಘಟಕದ ಅದ್ಯಕ್ಷರಾದ ಕಾಯಿ ಮಂಜೇಗೌಡ್ರು ಮನವಿ ಮಾಡಿದರು

ಕಿಕ್ಕೇರಿ ಪಟ್ಟಣದ ಜೆ.ಡಿ.ಎಸ್ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯುವ ನಾಯಕ ಬಿ.ಎಂ ಕಿರಣ್ ಅವರು ಕಿಕ್ಕೇರಿ ಪಟ್ಟಣದ ಕರ್ನಾಟಕ ಪಬ್ಲೀಕ್ ಶಾಲಾ ಆವರಣದಲ್ಲಿ ಶನಿವಾರದೊಂದು ಸಂಜೆ 4ಗಂಟೆಗೆ ಕಾರ್ಯಕ್ರಮ ನಿಗದಿಯಾಗಿದ್ದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿ,ಎನ್ ಬಾಲಕೃಷ್ಣ ಮತ್ತು ವಿಧಾನ ಪರಿಷತ್ ಶಾಸಕ ಡಾ.ಸೂರಜ್ ರೇವಣ್ಣ ರವರಿಗೆ, ರಾಜ್ಯ ಸಹಕಾರ ಮಾರಾಟ ಮಹಾಮಂಡಲಿಯ ರಾಜ್ಯ ನಿರ್ದೇಶಕರಾದ ಸಿ.ಎನ್ ಪುಟ್ಟಸ್ವಾಮಿಗೌಡ,ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಚ್.ಕೆ.ಅಶೋಕ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ನೆಲ್ಲಿಗೆರೆ ಬಾಲು, ರಾಘವೇಂದ್ರ, ಸೇರಿದಂತೆ ಹಲವು ಗಣ್ಯರಿಗೆ ಅದ್ದೂರಿಯಾಗಿ ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಿದ್ದು ಈ ಕಾರ್ಯಕ್ರಮವನ್ನು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ಮತ್ತು ಚಲನಚಿತ್ರ ನಟರಾದ ನಿಖಿಲ್ ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದಾರೆ ಎಲ್ಲಾ ಜೆ.ಡಿ.ಎಸ್ ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು, ಹೋಬಳಿ ಮಟ್ಟದ ನಾಯಕರು, ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು, ಸಾರ್ವಜನಿಕರು ಸಕಾಲಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು..

ಎಪಿಎಂಸಿ ಮಾಜಿ ಅಧ್ಯಕ್ಷರಾದ ಐನೋರಹಳ್ಳಿ ಮಲ್ಲೇಶ್ ನಮ್ಮ ಜೆಡಿಎಸ್ ಪಕ್ಷದ ಯುವ ನಾಯಕರಾದ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಸಂಸ್ಥಾಪಕರಾದ ಬಿ.ಎಂ. ಕಿರಣ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ವಿವಿಧ ಜಾನಪದ ಕಲಾತಂಡದಿAದ ವೀರಗಾಸೆ, ನೃತ್ಯ ಪ್ರದರ್ಶನ, ಭರತ ನಾಟ್ಯ,ಡೊಳ್ಳು ಕುಣಿತ, ಮಿಮಿಕ್ರಿ, ಆರ್ಕೇಸ್ಟ್ರಾ ಕಾರ್ಯಕ್ರಮವನ್ನು ರೂಪಿಸಿ ನಮ್ಮ ಪಕ್ಷದ ಕೀರ್ತಿ ಹೆಚ್ಚಿಸಿದ ಹಿರಿಯರಿಗೆ, ಯುವ ನಾಯಕರಿಗೆ ನಮ್ಮ ಹೋಬಳಿಗೆ ಆಹ್ವಾನಿಸಿ ಹೃದಯಸ್ಪರ್ಶಿಸುವಂತಹ ಗೌರವ ಸಲ್ಲಿಸುವ ಕಾರ್ಯಕ್ರಮ ರೂಪಿಸಿ ರುವುದು ಸಂತೋಷದ ವಿಷಯವಾಗಿದೆ. ಆದ್ದರಿಂದ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಿಕ್ಕೇರಿ ಹೋಬಳಿ ಜೆ.ಡಿ.ಎಸ್ ಘಟಕದ ಅಧ್ಯಕ್ಷರಾದ ಕಾಯಿ ಮಂಜೇಗೌಡ್ರು, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಶಾರದಮ್ಮ ಕೃಷ್ಣೇಗೌಡ, ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ ಶೇಖರ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಚೌಡೇನಹಳ್ಳಿ ಶಂಭು, ಮುಖಂಡರಾದ ಮಿಲ್ ಬಾಲಚಂದ್ರು, ಗ್ರಾಮ ಪಂಚಾಯತಿ ಸದಸ್ಯರಾದ ದಬ್ಬೇಘಟ್ಟ ಅನೀಲ್, ಕೋಡಿಮರನಹಳ್ಳಿ ಹರೀಶ್, ಯುವ ಮುಖಂಡರಾದ ಜಮ್ಮಿಂದಾರ್ ಮಂಜು ನಟರಾಜ್, ಆಕಾಶ್,ಲೋಕೇಶ್, ರಾಜೇಶ್, ಪ್ರವೀಣ್ ,ಪ್ರತಾಪ್, ಮೋಹನ್,ಸಚಿನ್,ಅನೀಲ್ ದೀಪು, ಸೇರಿದಂತೆ ಉಪಸ್ಥಿತರಿದ್ದರು.

ವರದಿ ಶಂಭು ಕಿಕ್ಕೇರಿ

error: