May 13, 2024

Bhavana Tv

Its Your Channel

ಕೆ.ಆರ್.ಪೇಟೆ ತಾಲೂಕಿನ ವಿಠಲಾಪುರ ಬಳಿ ಕಿಡಿಗೇಡಿಗಳಿಂದ ಹೇಮಗಿರಿ ನಾಲೆಯ ಅಕ್ವಡೆಕ್ಟ್ ತಡೆಗೋಡೆ ಧ್ವಂಸ. .

ಕೆ.ಆರ್.ಪೇಟೆ ತಾಲ್ಲೂಕಿನ ವಿಠಲಾಪುರ ಬಳಿ ಕಿಡಿಗೇಡಿಗಳಿಂದ ಹೇಮಗಿರಿ ನಾಲೆಯ ಅಕ್ವಡೆಕ್ಟ್ ತಡೆಗೋಡೆ ಧ್ವಂಸ. ಕಾಲುವೆ ನೀರು ಹಳ್ಳಕ್ಕೆ..ನಾಲೆಯ ಕೊನೆಯ ಭಾಗಕ್ಕೆ ನೀರು ಹರಿಯದಿರುವುದರಿಂದ ಒಣಗುತ್ತಿರುವ ಬೆಳೆಗಳು. ಶೀಘ್ರವಾಗಿ ನಾಲೆ ದುರಸ್ಥಿಪಡಿಸಲು ರೈತಮುಖಂಡ ವಿಠಲಾಪುರ ದೇವರಾಜು ಆಗ್ರಹ …

ಕೃಷ್ಣರಾಜಪೇಟೆ ತಾಲ್ಲೂಕಿನ ಹೇಮಾವತಿ ಜಲಾಶಯ ಯೋಜನೆಯ ಹೇಮಗಿರಿ ನಾಲೆಯನ್ನು ವಿಠಲಾಪುರ ಗ್ರಾಮದ ಬಳಿ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಒಡೆದು ಹಾಕಿದ್ದು ಕಾಲುವೆಯ ನೀರು ವ್ಯರ್ಥವಾಗಿ ಹಳ್ಳಕ್ಕೆ ಹರಿದು ಹೋಗುತ್ತಿದೆ.

ಹೇಮಗಿರಿ ನಾಲೆಯ ಕೊನೆಯ ಭಾಗಕ್ಕೆ ನೀರು ಹರಿಯದಿರುವುದರಿಂದ ಭತ್ತ ಮತ್ತು ಕಬ್ಬಿನ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಹೇಮಾವತಿ ಜಲಾಶಯ ಯೋಜನೆಯ ನಂ.20 ವಿಭಾಗದ ಎಂಜಿನಿಯರುಗಳು ಸ್ಥಳಕ್ಕೆ ಆಗಮಿಸಿ ಮೇಲ್ಗಾಲುವೆ ನಾಲೆಯನ್ನು, ದುರಸ್ಥಿ ಮಾಡಿಸಿ ನಾಲೆಯ ಕೊನೆಯ ಭಾಗಕ್ಕೆ ನೀರು ಹರಿಯುವಂತೆ ಕ್ರಮಕೈಗೊಂಡು ಒಣಗುತ್ತಿರುವ ಬೆಳೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಈ ಭಾಗದ ಯುವಮುಖಂಡ ವಿಠಲಾಪುರ ದೇವರಾಜು ಆಗ್ರಹಿಸಿದ್ದಾರೆ……

ಹೇಮಾವತಿ ಜಲಾಶಯ ಯೋಜನೆಯ ನಂ.20 ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಂಗಸ್ವಾಮಿ ಹಾಗೂ ಸಹಾಯಕ ಎಂಜಿನಿಯರ್ ಎಲೆಕೆರೆ ರವಿ ಅವರು ಸ್ಥಳಕ್ಕೆ ಭೇಟಿ ನೀಡಿ ಒಡೆದಿರುವ ಮೇಲ್ಗಾಲುವೆಯಲ್ಲಿ ವ್ಯರ್ಥವಾಗಿ ಕಾಲುವೆಯ ನೀರು ಹರಿದುಹೋಗದಂತೆ ಕ್ರಮಕೈಗೊಂಡಿದ್ದು ಶೀಘ್ರವಾಗಿ ಒಡೆದ ನಾಲೆಯನ್ನು ದುರಸ್ಥಿ ಮಾಡಿಸಿ ರೈತರ ಜಮೀನುಗಳಿಗೆ ನೀರು ಹರಿಯುವಂತೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ವರದಿ ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ . ಮಂಡ್ಯ

error: