April 28, 2024

Bhavana Tv

Its Your Channel

ವಿಶ್ವ ಗ್ರಾಹಕರ ದಿನದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ

ಕೆ.ಆರ್.ಪೇಟೆ:– ಗ್ರಾಹಕರು ಜಾಹಿರಾತುಗಳ ಮೋಸದ ಜಾಲಕ್ಕೆ ಮಾರುಹೋಗದೇ ಗುಣಮಟ್ಟದ ವಸ್ತುಗಳನ್ನು ಖರೀದಿ ಮಾಡಿ ಅಧಿಕೃತ ರಶೀದಿಯನ್ನು ಪಡೆದು ನೆಮ್ಮದಿಯ ಜೀವನ ನಡೆಸಬೇಕು ಎಂದು ಕೆ.ಆರ್.ಪೇಟೆ ಪಟ್ಟಣದ ಅಪರ ಸಿವಿಲ್ ನ್ಯಾಯಾಲಯದ ಅಪರ ನ್ಯಾಯಾಧೀಶರಾದ ಬಸವರಾಜ್ ತುಳಸಪ್ಪನಾಯಕ ಹೇಳಿದರು …

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ವಿಶ್ವ ಗ್ರಾಹಕರ ದಿನದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು…

ವ್ಯಾಪಾರಗಾರರಿಗೆ ಗ್ರಾಹಕರೇ ದೇವರು ಆದರೆ ಗ್ರಾಹಕರನ್ನು ವ್ಯಾಪಾರಿಗಳ ವೇಶಧಾರಿಗಳು ವಂಚಿಸಿ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಗ್ರಾಹಕರು ವಂಚನೆಯ ಜಾಲಕ್ಕೆ ಮೋಸ ಹೋಗದೇ ತಾವು ಖರೀದಿ ಮಾಡುವ ಯಾವುದೇ ಪದಾರ್ಥಗಳಿಗೆ ನಿರ್ಧಿಷ್ಟವಾದ ರಶೀದಿಯನ್ನು ಪಡೆದುಕೊಂಡು ನಿಗಧಿತ ಗ್ಯಾರೆಂಟಿಯ ಅವಧಿಯೊಳಗೆ ತಾವು ಖರೀದಿ ಮಾಡಿರುವ ವಸ್ತುಗಳಲ್ಲಿ ದೋಷ ಅಥವಾ ಲೋಪ ಕಂಡುಬAದರೆ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನ್ಯಾಯವನ್ನು ಪಡೆಯಬಹುದಾಗಿದೆ ಎಂದು ನ್ಯಾಯಾಧೀಶರಾದ ಬಸವರಾಜ್ ತುಳಸಪ್ಪನಾಯಕ ಹೇಳಿದರು…
ಸಂಪನ್ಮೂಲ ಭಾಷಣಕಾರರಾದ ಹೆಚ್.ವಿ.ಆಶಾರಾಜೇಗೌಡ ಮತ್ತು ಬಿ.ಕೆ.ಯೋಗೇಶ್ ಗ್ರಾಹಕರ ಹಕ್ಕುಗಳು ಮತ್ತು ಕರ್ತವ್ಯ ಕುರಿತು ಉಪನ್ಯಾಸ ನೀಡಿ ಜಾಗೃತಿ ಮೂಡಿಸಿದರು..

ಕೃಷ್ಣರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಎಂ.ವಿ.ರೂಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ಉಪಾಧ್ಯಕ್ಷ ಕೆ.ಆರ್.ಇಂದ್ರಕುಮಾರ್, ಕಾರ್ಯದರ್ಶಿ ಡಿ.ಆರ್.ಮೋಹನ್, ಜಂಟಿ ಕಾರ್ಯದರ್ಶಿ ಅನ್ವೇಶ್, ಉಪತಹಶೀಲ್ದಾರ್ ಸ್ವಾಮಿ, ಚಿಕ್ಕಲಕ್ಷ್ಮೀ, ಹಿರಿಯಣ್ಣ, ರಾಜಶ್ವನಿರೀಕ್ಷಕಿ ಚಂದ್ರಕಲಾ, ತಾಲ್ಲೂಕು ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಗ್ರಾಮಲೆಕ್ಕಾಧಿಕಾರಿಗಳಾದ ಪೂಜಾ ಮತ್ತಿತರರು ಉಪಸ್ಥಿತರಿದ್ದರು..

ವರದಿ. ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: