April 28, 2024

Bhavana Tv

Its Your Channel

ಮಾ.18ಕ್ಕೆ ಶ್ರೀ ಚೌಡೇಶ್ವರಿ ಅಮ್ಮನವರ ಪರುವು ಕಾರ್ಯಕ್ರಮ

ಕೆ.ಆರ್.ಪೇಟೆ:- ಮಾರ್ಚ.18ರ ಶುಕ್ರವಾರ ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದ ನಾರಾಯಣದುರ್ಗದ ತಪ್ಪಲಿನಲ್ಲಿರುವ ಶಕ್ತಿದೇವತೆ ತಾಯಿ ಶ್ರೀ ಚೌಡೇಶ್ವರಿ ಅಮ್ಮನವರ ಪರುವು ಕಾರ್ಯಕ್ರಮ ಹೆಚ್ಚಿನ ಸಂಖ್ಯೆಯಲ್ಲಿ ಬಂಧುಗಳು ಹಾಗೂ ಭಕ್ತರು ಭಾಗವಹಿಸಿ ಆತಿಥ್ಯ ಸ್ವೀಕರಿಸಲು ಪುರಸಭೆ ಸದಸ್ಯ ಕೆ.ಎಸ್.ಸಂತೋಷ್ ಮನವಿ …

ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧವಾದ ಐತಿಹಾಸಿಕ ರಾಯಸಮುದ್ರ ಗ್ರಾಮದ ಸಮೀಪದಲ್ಲಿರುವ ನಾರಾಯಣ ದುರ್ಗದ ತಪ್ಪಲಿನಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದ ಪಕ್ಕದಲ್ಲಿ ಮಾರ್ಚ.18ರ ಮಧ್ಯಾಹ್ನ 01ಗಂಟೆಗೆ ಪರುವು ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಿದ ಪುರಸಭೆ ಸದಸ್ಯ ಕೆ.ಆರ್.ಪೇಟೆ ತಾಲ್ಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕೆ.ಎಸ್.ಸಂತೋಷ್ ಕುಮಾರ್…

ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರವಾದ ರಾಯಸಮುದ್ರ ಗ್ರಾಮದ ಹೊರವಲಯದಲ್ಲಿರುವ ಐತಿಹಾಸಿಕ ನಾರಾಯಣದುರ್ಗದ ತಪ್ಪಲಿನಲ್ಲಿ ಸ್ನೇಹಿತರು ಹಾಗೂ ಬಂಧುಗಳಿಗೆ ಆತಿಥ್ಯ ಹಾಗೂ ಪರುವಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಧುಗಳು ಹಾಗೂ ಭಕ್ತರು ಆಗಮಿಸಿ ಪರುವು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ದೇವಿ ತಾಯಿ ಶ್ರೀಚೌಡೇಶ್ವರಿಯ ಕೃಪೆಗೆ ಪಾತ್ರರಾಗುವಂತೆ ಸಂತೋಷ್ ಮನವಿ ಮಾಡಿದರು…

ಏಳು ಸುತ್ತಿನ ಭವ್ಯವಾದ ಕೋಟೆಯನ್ನು ಹೊಂದಿರುವ ನಾರಾಯಣದುರ್ಗ ಬೆಟ್ಟವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ತಾಲ್ಲೂಕಿನ ಏಕೈಕ ಸ್ಥಳವಾಗಿದೆ. ಹಲವಾರು ಐತಿಹಾಸಿಕ ರೋಚಕಗಳು ಹಾಗೂ ಇತಿಹಾಸವನ್ನು ತನ್ನ ಒಡಲಿನಲ್ಲಿ ತುಂಬಿಕೊAಡಿರುವ ಈ ಬೆಟ್ಟವು ಚಾರಣ ಮಾಡುವವರಿಗೆ ಇತಿಹಾಸ ಸಂಶೋಧಕರಿಗೆ ಪ್ರಶಸ್ತವಾದ ಸ್ಥಳವಾಗಿದ್ದು ಆಸಕ್ತರನ್ನು ಕೈ ಬೀಸಿ ಕರೆಯುತ್ತಿದೆ. ಮಾ. 18ರಂದು ನಡೆಯಲಿರುವ ತಾಯಿಯ ಪರುವಿನ ಹಿನ್ನೆಲೆಯಲ್ಲಿ ಸಂತೋಷ್ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಆತಿಥ್ಯ ನೀಡಲು ಪರುವು ನಡೆಸುವ ಸ್ಥಳವನ್ನು ಪರಿಶೀಲನೆ ನಡೆಸಿದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ.

error: