May 2, 2024

Bhavana Tv

Its Your Channel

ಕೃಷ್ಣರಾಜಪೇಟೆ ಪಟ್ಟಣದ ಸಮಗ್ರವಾದ ಅಭಿವೃದ್ಧಿಗೆ ಪಕ್ಷಾತೀತವಾಗಿ ದುಡಿಯೋಣ- ಪುರಸಭೆ ಅಧ್ಯಕ್ಷೆ ಮಹಾದೇವಿನಂಜುOಡ

ಕೃಷ್ಣರಾಜಪೇಟೆ ಪಟ್ಟಣದ ಸಮಗ್ರವಾದ ಅಭಿವೃದ್ಧಿಗೆ ಪಕ್ಷಾತೀತವಾಗಿ ದುಡಿಯೋಣ.. ಚುನಾಯಿತ ಸದಸ್ಯರಾಗಿರುವ ನಾವು ಅಭಿವೃದ್ಧಿಯನ್ನು ಮೂಲ ಮಂತ್ರವನ್ನಾಗಿಸಿಕೊAಡು ಕೆಲಸ ಮಾಡೋಣ ಎಂದು ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಮನವಿ ಮಾಡಿದರು

ಕೆ.ಆರ್.ಪೇಟೆ ಪಟ್ಟಣದ ಸ್ವರ್ಣಜಯಂತಿ ಶಹರಿ ರೋಜ್ಗಾರ್ ಯೋಜನಾ ಭವನದಲ್ಲಿ ಇಂದು ಕೆ.ಆರ್.ಪೇಟೆ ಪುರಸಭೆಯ 2022-23ನೇ ಸಾಲಿನ ಬಜೆಟ್ ಮಂಡನೆಯ ಪೂರ್ವಬಾವಿ ಸಮಾಲೋಚನಾ ಸಭೆಯು ಪುರಸಭಾಧ್ಯಕ್ಷೆ ಮಹಾದೇವಿನಂಜುAಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು..

ಪುರಸಭೆ ಮಾಜಿಅಧ್ಯಕ್ಷ ಕೆ.ಹೆಚ್.ರಾಮಕೃಷ್ಣ, ಪಿ.ಎಲ್.ಡಿ ಬ್ಯಾಂಕ್ ಮಾಜಿಅಧ್ಯಕ್ಷ ಕೆ.ಎಸ್.ರಾಮೇಗೌಡ, ಆದಿದ್ರಾವಿಡ ಅರುಂದತಿಯಾರ್ ಸಮಾಜದ ಜಿಲ್ಲಾಧ್ಯಕ್ಷ ಬನ್ನಾರಿ, ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೊಸಹೊಳಲು ಮಂಜುನಾಥ್, ಉಪಾಧ್ಯಕ್ಷೆ ಗಾಯತ್ರಿ ಸುಬ್ಬಣ್ಣ ಹಾಗೂ ಮುಖ್ಯಾಧಿಕಾರಿ ಕುಮಾರ್ ಕೆ.ಆರ್.ಪೇಟೆ ಪಟ್ಟಣದ ವಿವಿಧ ಬಡಾವಣೆಗಳು ಹಾಗೂ ವಾರ್ಡುಗಳ ಅಭಿವೃದ್ಧಿಗೆ ಪೂರಕವಾದ ಸಲಹೆ ಸೂಚನೆಗಳನ್ನು ಸಭೆಗೆ ಮಂಡಿಸಿದರು…ಮಳೆ ಬಂದಾಗಲೆಲ್ಲಾ ಕೆಸರು ಗದ್ದೆಯಂತಾಗಿ ಕೆರೆಯಾಗುವ ಪುರಸಭೆಯ ಖಾಸಗಿ ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡಿ ಅಭಿವೃದ್ಧಿಪಡಿಸುವಂತೆ ರಾಮಕೃಷ್ಣ ಮನವಿ ಮಾಡಿದರೆ ಪುರಸಭೆ ಸದಸ್ಯ ಪತ್ರಕರ್ತ ಹೆಚ್.ಆರ್.ಲೋಕೇಶ್ ಮಾತನಾಡಿ ಕೆ.ಆರ್.ಪೇಟೆ ಪಟ್ಟಣವು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಪಟ್ಟಣದ ಬೀದಿ ಬದಿಯ ವ್ಯಾಪಾರಿಗಳಿಗೆ ಶಾಶ್ವತವಾದ ಕಾಯಕಲ್ಪವನ್ನು ಕಲ್ಪಿಸಿಕೊಡುವ ದಿಕ್ಕಿನಲ್ಲಿ ಪುರಸಭೆಯ ವ್ಯಾಪ್ತಿಯಲ್ಲಿ ಮಿನಿ ಮಾರ್ಕೆಟ್ ಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕು. ಪಟ್ಟಣದ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿರುವ ತಳ್ಳುವ ಗಾಡಿಗಳು ಹಾಗೂ ಪೆಟ್ಟಿಗೆ ಅಂಗಡಿಗಳನ್ನು ತೆರವು ಮಾಡಿಸಿ ಶಾಶ್ವತವಾದ ನೆಲೆ ಮಾಡಿಕೊಟ್ಟು ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿದರು..

ಈ ಸಂದರ್ಭದಲ್ಲಿ ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಸಲಹೆ ನೀಡುವ ಸಂದರ್ಭದಲ್ಲಿ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಆರ್.ರವೀಂದ್ರಬಾಬು ಹಾಗೂ ಜೆಡಿಎಸ್ ಸದಸ್ಯ ಕೆ.ಎಸ್.ಸಂತೋಷ್ ಅವರ ನಡುವೆ ವಾಗ್ಯುದ್ಧ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿತು ಆಗ ಅಧ್ಯಕ್ಷೆ ಮಹಾದೇವಿ ಮತ್ತು ಸದಸ್ಯ ಹನುಮಂತರಾಜ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು…

ಸದಸ್ಯೆ ಕಲ್ಪನಾ, ಸದಸ್ಯರಾದ ಕೆ.ಆರ್.ನೀಲಕಂಠ, ಹೆಚ್.ಡಿ.ಅಶೋಕ್, ಗಿರೀಶ್, ಶಾಮಿಯಾನತಿಮ್ಮೇಗೌಡ, ಹೆಚ್.ಎನ್.ಪ್ರವೀಣ್, ಮುಖಂಡರಾದ ದಿನೇಶ್, ಉಮೇಶ್, ಡಾ.ಕೆ.ಎಸ್.ರಾಜೇಶ್ ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಸಲಹೆಗಳನ್ನು ನೀಡಿದರು..

ಸದಸ್ಯ ಡಿ.ಪ್ರೇಮಕುಮಾರ್ ಮಾತನಾಡಿ ಕೆ.ಆರ್.ಪೇಟೆ ಪಟ್ಟಣಕ್ಕೆ ಸಂಪರ್ಕ ನೀಡುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿಯೂ ಸ್ವಾಗತ ಫಲಕಗಳನ್ನು ನಿರ್ಮಿಸಲು ಕ್ರಮ ವಹಿಸಬೇಕು, ಕುಡಿಯುವ ನೀರಿನ ಸರಬರಾಜಿಗೆ ಯಾವುದೇ ತೊಂದರೆಯಾಗದAತೆ ತುರ್ತಾಗಿ ನೀರು ಸರಬರಾಜು ಮಾಡಲು ಟ್ಯಾಂಕರ್ ಒಂದನ್ನು ಪುರಸಭೆ ನಿಧಿಯಿಂದ ಖರೀದಿಸಬೇಕು. ಈ ಖಾತೆ ಮಾಡುವುದನ್ನು ಸರಳೀಕರಣಗೊಳಿಸಬೇಕು, ಪಟ್ಟಣದಲ್ಲಿ ಪಾರ್ಕುಗಳು ಮತ್ತು ಉದ್ಯಾನವನಗಳ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಿ ಬಜೆಟ್ ನಲ್ಲಿ ಹಣ ಮೀಸಲಿಡಲು ಕ್ರಮ ವಹಿಸಬೇಕು ಎಂದು ಹೇಳಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: