April 26, 2024

Bhavana Tv

Its Your Channel

ಕೆ.ಆರ್.ಪೇಟೆ ನ್ಯಾಯಾಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕೆ.ಆರ್.ಪೇಟೆ ನ್ಯಾಯಾಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗದಿನ ಅಂಗವಾಗಿ ನ್ಯಾಯಾಧೀಶರು ಹಾಗೂ ವಕೀಲರಿಂದ ಯೋಗ ಪ್ರದರ್ಶನ .. ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಲು ಜೆಎಂಎಫ್ ಸಿ ನ್ಯಾಯಾಧೀಶರಾದ ಓಂಕಾರಮೂರ್ತಿ ಮನವಿ …

ಆರೋಗ್ಯವಂತ ಸಮೃದ್ಧ ಸ್ವಾಭಿಮಾನಿ ಜೀವನ ನಡೆಸಲು ಜೀವನದಲ್ಲಿ ಹೊಸ ಉತ್ಸಾಹವನ್ನು ತುಂಬಲು ಯೋಗವು ವರದಾನವಾಗಿದೆ. ಆದ್ದರಿಂದ ಯುವಜನರು, ವಿದ್ಯಾರ್ಥಿಗಳು ಸೇರಿದಂತೆ ಮಹಿಳೆಯರು ಪ್ರತಿದಿನವೂ ಕಡ್ಡಾಯವಾಗಿ ಯೋಗಾಭ್ಯಾಸವನ್ನು ಮಾಡುವ ಮೂಲಕ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನ್ಯಾಯಾಧೀಶ ಓಂಕಾರಮೂರ್ತಿ ಕರೆ ನೀಡಿದರು..

ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸಮೀರ್ ಪಿ.ನಂಧ್ಯಾಲ್ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸಿ ಯುವ ವಕೀಲರಲ್ಲಿ ಉತ್ಸಾಹ ತುಂಬಿದರು..
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಮಾತನಾಡಿ ಆರೋಗ್ಯವಂತ ಜೀವನಕ್ಕೆ ಯೋಗವು ಸಂಜೀವಿನಿಯಾಗಿದೆ. ಆದ್ದರಿಂದ ಯುವಜನರು ಸೇರಿದಂತೆ ವಕೀಲ ಮಿತ್ರರು ಪ್ರತಿದಿನವೂ ಯೋಗವನ್ನು ಮಾಡುವ ಮೂಲಕ ಯೋಗದ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ರವಿಶಂಕರ್ ಮನವಿ ಮಾಡಿದರು..

ವಕೀಲರ ಸಂಘದ ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ಅಪರ ಸರ್ಕಾರಿ ಅಭಿಯೋಜಕ ರಾಜೇಶ್, ಹಿರಿಯ ವಕೀಲರಾದ ಅನಂತರಾಮಯ್ಯ, ಗಣೇಶ್, ಎಂ.ಎಲ್.ಸುರೇಶ್ ಸೇರಿದಂತೆ ನೂರಾರು ವಕೀಲರು ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: