May 2, 2024

Bhavana Tv

Its Your Channel

ಭೂವರಹನಾಥ ದೇವಾಲಯಕ್ಕೆ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಸೊಸೆ ಭವಾನಿರೇವಣ್ಣ ಭೇಟಿ

ಕೆ.ಆರ್.ಪೇಟೆ ತಾಲ್ಲೂಕಿನ ಭೂವರಹನಾಥ ದೇವಾಲಯಕ್ಕೆ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಸೊಸೆ ಭವಾನಿರೇವಣ್ಣ ಭೇಟಿ.. ದೇವರ ದರ್ಶನ ಮಾಡಿ ಪುಳಕಿತರಾದ ಭವಾನಿ..ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಮಾಡಿ ಪ್ರಾರ್ಥಿಸಿದ ಭವಾನಿರೇವಣ್ಣ ..

ಜೆಡಿಎಸ್ ನಾಯಕಿ ಮಾಜಿಸಚಿವ ಹೆಚ್.ಡಿ.ರೇವಣ್ಣ ಅವರ ಧರ್ಮಪತ್ನಿ ಭವಾನಿರೇವಣ್ಣ ಅವರು ಇಂದು ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧವಾದ ಭೂವರಹನಾಥಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿ ಭಗವಂತನ ದರ್ಶನ ಮಾಡಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು…

ದೇಶದಲ್ಲಿಯೇ ಅಪರೂಪದ್ದಾಗಿರುವ ಶ್ರೀ ಸಾಲಿಗ್ರಾಮ ಕೃಷ್ಣಶಿಲೆಯಲ್ಲಿ ನಿರ್ಮಿಸಲಾಗಿರುವ ಶ್ರೀ ಲಕ್ಷ್ಮೀ ಸಮೇತನಾಗಿ ನೆಲೆಸಿರುವ ಭೂವರಹನಾಥನ ದರ್ಶನ ಪಡೆದು ಪುಳಕಿತರಾದ ಭವಾನಿರೇವಣ್ಣ ಕಳೆದ ಐದಾರು ವರ್ಷಗಳಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಭಗವಂತನ ದರ್ಶನ ಮಾಡಬೇಕೆಂಬ ಮನದಾಸೆಯು ಇಂದು ಈಡೇರಿದೆ. ಶ್ರೀ ಕ್ಷೇತ್ರವು ಭಕ್ತರು ಮತ್ತು ದಾನಿಗಳ ಸಹಕಾರದಿಂದಲೇ ಅದ್ಭುತವಾಗಿ ಅಭಿವೃದ್ಧಿಯಾಗುತ್ತಿರುವುದನ್ನು ತಿಳಿದು ಸಂತೋಚವಾಗಿದೆ. ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತರಿಗೆ ಧರ್ಮಸ್ಥಳ ಕ್ಷೇತ್ರದಂತೆ ಇಲ್ಲಿಯೂ ಉಚಿತವಾಗಿ ಪ್ರಸಾದ ನೀಡಲಾಗುತ್ತಿದೆ. ಶ್ರೀ ಕ್ಷೇತ್ರದಲ್ಲಿ 25 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೂರು ಪ್ರಾಕಾರಗಳ ಕಲ್ಲಿನ ದೇವಾಲಯ ಹಾಗೂ 172 ಅಡಿ ಎತ್ತರದ ರಾಜಗೋಪುರವು ಇನ್ನು ಮೂರು ವರ್ಷಗಳಲ್ಲಿ ನಿರ್ಮಾಣವಾಗಿ ಲೋಕಾರ್ಪಣೆ ಮಾಡಲು ಪರಕಾಲ ಮಠದ ಸ್ವಾಮಿಗಳು ಸಂಕಲ್ಪ ಮಾಡಿ ಕೆಲಸ ಆರಂಭಿಸಿರುವುದನ್ನು ತಿಳಿದು ರೋಮಾಂಚನವಾಯಿತು. ನಮ್ಮ ಕುಟುಂಬವೂ ದೇವಾಲಯದ ಅಭಿವೃದ್ಧಿಗೆ ನಮ್ಮ ಶಕ್ತಾನುಸಾರ ಧನ ಸಹಾಯ ಮಾಡುತ್ತೇವೆ. ತಿರುಮಲ ತಿರುಪತಿಯ ಮಾದರಿಯಲ್ಲಿ ಭೂವರಹನಾಥಸ್ವಾಮಿ ಕ್ಷೇತ್ರ ಅಭಿವೃದ್ಧಿ ಆಗುತ್ತಿದೆ. ದೇವರ ದರ್ಶನ ಮಾಡಿ ನನಗೆ ಸಾರ್ಥಕತಾ ಭಾವನೆ ಮೂಡಿದೆ ಎಂದು ಭವಾನಿರೇವಣ್ಣ ಹೇಳಿದರು..

ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮನ್ ಮುಲ್ ನಿರ್ದೇಶಕರಾದ ಹೆಚ್.ಟಿ.ಮಂಜು, ಡಾಲುರವಿ, ಮನ್ ಮುಲ್ ಮಾಜಿಅಧ್ಯಕ್ಷ ಎಂ.ಬಿ.ಹರೀಶ್, ಮುಖಂಡರಾದ ಬಸ್ ಸಂತೋಷ್ ಕುಮಾರ್, ಬಸ್ ಕೃಷ್ಣೇಗೌಡ, ಕುರುಬಳ್ಳಿ ನಾಗೇಶ್, ಸೋಮನಹಳ್ಳಿ ಭೋಜರಾಜು, ಪೂವನಹಳ್ಳಿ ರೇವಣ್ಣ, ಬಲ್ಲೇನಹಳ್ಳಿ ನಂದೀಶ್, ಎಂ.ಪಿ.ಅಶೋಕ್ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ನಾಳೆ ಜೂನ್.23ರ ಗುರುವಾರ ಬೆಳಿಗ್ಗೆ 8ಗಂಟೆಯಿAದ 12 ಗಂಟೆವರೆಗೆ ಭೂವರಹನಾಥ ಸ್ವಾಮಿಗೆ ರೇವತಿ ನಕ್ಷತ್ರದ ವಿಶೇಷ ಪೂಜೆ ಹಾಗೂ ಅಭಿಷೇಕ.. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಮನವಿ..

ನಾಳೆ ಭೂವರಹನಾಥಸ್ವಾಮಿಗೆ ರೇವತಿ ನಕ್ಷತ್ರದ ಅಂಗವಾಗಿ ವಿಶೇಷ ಪೂಜೆ ಅಭಿಷೇಕ ಹಾಗೂ ಪಟ್ಟಾಭಿಷೇಕ, ಸ್ವಾಮಿಯ ಅಡ್ಡಪಲ್ಲಕಿ ಉತ್ಸವ ಕಾರ್ಯಕ್ರಮಗಳು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಭೂವರಹನಾಥನ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ್ ರಾಘವನ್ ಮನವಿ ಮಾಡಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ .

error: