April 26, 2024

Bhavana Tv

Its Your Channel

ಹೇಮಾವತಿ ಜಲಾಶಯ ಯೋಜನೆಯ ವಿಭಾಗ ಕಛೇರಿಯಲ್ಲಿ ಭಾರತ ಸ್ವಾತಂತ್ರ‍್ಯದ 75ನೇ ವರ್ಷದ ಅಮೃತಮಹೋತ್ಸವದ ಆಚರಣೆ

ಕೃಷ್ಣರಾಜಪೇಟೆ :-ಕೆ.ಆರ್.ಪೇಟೆ ಪಟ್ಟಣದ ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಹೇಮಾವತಿ ಜಲಾಶಯ ಯೋಜನೆಯ ನಂ.03 ವಿಭಾಗ ಕಛೇರಿಯ ಆವರಣದಲ್ಲಿ ನಡೆದ ಭಾರತ ಸ್ವಾತಂತ್ರ‍್ಯದ 75ನೇ ವರ್ಷದ ಅಮೃತಮಹೋತ್ಸವದಲ್ಲಿ ಕಾರ್ಯಪಾಲಕ ಎಂಜಿನಿಯರ್ ಕಿಜರ್ ಅಹಮದ್ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು..

ಭಾರತ ದೇಶದ ಲಕ್ಷಾಂತರ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ ಹಾಗೂ ಬಲಿದಾನದ ಫಲವಾಗಿ ದೇಶಕ್ಕೆ ಬ್ರಿಟೀಷರಿಂದ ಸ್ವಾತಂತ್ರ‍್ಯ ದೊರಕಿದೆ. ಸ್ವಾತಂತ್ರ‍್ಯ ಪಡೆದ ನಂತರ ಭಾರತ ದೇಶದ ಸಾಧನೆಯು ಇಡೀ ವಿಶ್ವದ ಅಭಿವೃದ್ಧಿ ರಾಷ್ಟ್ರಗಳ ಸಾಲಿಗಿಂತಲೂ ಹೆಚ್ಚಿನದಾಗಿದೆ. ವಿಶ್ವಗುರುವಾಗಿ ಹೊರಹೊಮ್ಮುತ್ತಿರುವ ಭಾರತ ಸ್ವಾತಂತ್ರ‍್ಯದ ಹೋರಾಟವು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ದೇಶದ ಯುವಜನರು ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡು ಮಾದರಿಯಾಗಿ ಜೀವನ ನಡೆಸಬೇಕು. ಜಾತಿ, ಮತ, ಪಂಥಗಳಿAದ ಮುಕ್ತವಾದ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು..

ಭಾರತ ಸ್ವಾತಂತ್ರ‍್ಯದ 75ನೇ ವರ್ಷದ ಅಮೃತ ಮಹೋತ್ಸವದ ವಿಶೇಷ ಕಾರ್ಯಕ್ರಮದಲ್ಲಿ ಹೇಮಾವತಿ ಜಲಾಶಯ ಯೋಜನೆಯ ನಂ.20 ಉಪವಿಭಾಗದ ಎಇಇ ರಂಗಸ್ವಾಮಿ, ಸಹಾಯಕ ಎಂಜಿನಿಯರ್ ಗಳಾದ ಎಲೆಕೆರೆ ರವಿ, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: