May 15, 2024

Bhavana Tv

Its Your Channel

ಈಶ್ವರ ದೇವಾಲಯದಲ್ಲಿ 10ಸಾವಿರ ಮೋದಕಗಳನ್ನು ಬಳಸಿ ಲೋಕಕಲ್ಯಾಣಾರ್ಥವಾಗಿ ನಡೆಸಿದ ಮಹಾಗಣಪತಿ ಹೋಮ

ಕೃಷ್ಣರಾಜಪೇಟೆ ಪಟ್ಟಣದ ಈಶ್ವರ ದೇವಾಲಯದಲ್ಲಿ 10ಸಾವಿರ ಮೋದಕಗಳನ್ನು ಬಳಸಿ ಲೋಕಕಲ್ಯಾಣಾರ್ಥವಾಗಿ ನಡೆಸಿದ ಮಹಾಗಣಪತಿ ಹೋಮ. ಸಾವಿರಾರು ಭಕ್ತರ ಉಪಸ್ಥಿತಿ.. ಮೊಳಗಿದ ಜಯಘೋಷಗಳು. ಮುಗಿಲು ಮುಟ್ಟಿದ ಸಂಭ್ರಮ .

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಭ್ರಮರಾಂಭ ಶ್ರೀ ಚನ್ನಮಲ್ಲಿಕಾರ್ಜುನ ಈಶ್ವರ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ 10ಸಾವಿರ ಮೋದಕಗಳನ್ನು ಬಳಸಿ ವಿಶೇಷವಾಗಿ ಮಹಾಗಣಪತಿ ಹೋಮವನ್ನು ನಡೆಸಲಾಯಿತು …

ನಾಡಿನ ಖ್ಯಾತ ಸಂಸ್ಕೃತಿ ಸಂಘಟಕರಾದ ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ಮೂರು ಯಜ್ಞ ಕುಂಡಗಳಲ್ಲಿ ಒಂದೇ ಬಾರಿಗೆ ಬೆಳಿಗ್ಗೆ 7.30ಕ್ಕೆ ಆರಂಭವಾದ ಮಹಾಗಣಪತಿ ಹೋಮವು ಮಧ್ಯಾಹ್ನ 1.30ಕ್ಕೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊAಡಿತು…ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ವಿಪ್ರಬಾಂಧವರು, ಆಗಮಿಕರು ಹಾಗೂ ಪಟ್ಟಣದ ಗಣ್ಯರು ಮಹಾಗಣಪತಿ ಹೋಮದಲ್ಲಿ ಭಾಗವಹಿಸಿ ಪೂರ್ಣಾಹುತಿಯ ಮಹಾಮಂಗಳಾರತಿ ಹಾಗೂ ಗೌರವರಕ್ಷೆಯನ್ನು ಸ್ವೀಕರಿಸಿದರು..
ಶ್ರೀ ಗೋಪಾಲಕೃಷ್ಣ ಅವಧಾನಿಗಳು ಮಾತನಾಡಿ ಇಂದಿನ ಒತ್ತಡದ ಯಾಂತ್ರಿಕ ಜೀವನದಲ್ಲಿ ನಾವು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ಪಡೆಯಬೇಕಾದರೆ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗಿದೆ. ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮವು ವಿಶ್ವದಲ್ಲಿಯೇ ಯಾವುದೂ ಇಲ್ಲವಾದ್ದರಿಂದ ಮಾನವರಾದ ನಾವು ಪರಸ್ಪರ ದ್ವೇಶ ಅಸೂಯೆಯನ್ನು ಮರೆತು ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವನ ನಡೆಸುವುದು ಅನಿವಾರ್ಯವಾಗಿದೆ. ಮಹಾಗಣಪತಿ ಹೋಮ ಸೇರಿದಂತೆ ವಿಘ್ನನಿವಾರಕನಾದ ಗಣಪತಿಯ ಪೂಜೆಯನ್ನು ಮಾಡಿ ಶ್ರಧ್ಧಾಭಕ್ತಿಯಿಂದ ಪ್ರಾರ್ಥಿಸಿದರೆ ಸಾಕು ಹಿಡಿದ ಕೆಲಸಗಳು ಯಾವುದೇ ಅಡ್ಡಿಯಾಗದಂತೆ ಸಂಪನ್ನವಾಗುವ ಜೊತೆಗೆ ಇಷ್ಠಾರ್ಥಗಳು ನೆರವೇರುತ್ತವೆ. ಆದ್ದರಿಂದ ಸಾಧನೆ ಮಾಡಲು ಕಷ್ಟವಾದರೂ ನ್ಯಾಯ, ನೀತಿ,ಧರ್ಮ ಹಾಗೂ ಸತ್ಯದ ದಾರಿಯಲ್ಲಿಯೇ ಸಾಗುವ ಮೂಲಕ ಜೀವನದಲ್ಲಿ ಯಶಸ್ಸುಗಳಿಸಿ ಮುನ್ನಡೆಯಬೇಕು ಎಂದು ಗೋಪಾಲಕೃಷ್ಣ ಅವಧಾನಿಗಳು ಕರೆ ನೀಡಿದರು..
ವೇದಬ್ರಹ್ಮ ಮಾಲತೇಶ್ ಶರ್ಮಾ ಹಾಗೂ ರೋಹಿತ್ ಶಾಸ್ತ್ರಿಗಳು ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು..
ನಾಡಿಗ್ ಸಹೋದರಿಯರು ನಡೆಸಿಕೊಟ್ಟ ಸುಗಮಸಂಗೀತ ಕಾರ್ಯಕ್ರಮವು ನೆರೆದಿದ್ದ ಭಕ್ತಾದಿಗಳನ್ನು ರಂಜಿಸಿ ಭಕ್ತಿಯ ಲೋಕಕ್ಕೆ ಕರೆದೊಯ್ದಿದ್ದು ಇತಿಹಾಸ ನಿರ್ಮಾಣ ಮಾಡಿತು..

ಒಂದು ವಾರಗಳ ಕಾಲ 75ಕ್ಕೂ ಹೆಚ್ಚು ಸುಮಂಗಲಿಯರು ತಯಾರಿಸಿದ 10ಸಾವಿರ ಮೋದಕಗಳಿಂದ ವಿಶೇಷವಾಗಿ ಆಯೋಜಿಸಿದ್ದ ಮಹಾಗಣಪತಿ ಹೋಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಸಿಹಿಪೊಂಗಲ್, ಬಿಸಿಬೇಳೆ ಭಾತ್, ಮೊಸರನ್ನ ಹಾಗೂ ಮೋದಕ ಪ್ರಸಾದವನ್ನು ವಿತರಿಸಲಾಯಿತು…

ತಹಶೀಲ್ದಾರ್ ಎಂ.ವಿ.ರೂಪ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅರವಿಂದ್ ಕಾರಂತ್, ಸೇರಿದಂತೆ ಸಾವಿರಾರು ಜನರು ಮಹಾಗಣಪತಿ ಹೋಮದಲ್ಲಿ ಭಾಗವಹಿಸಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .ಕೃಷ್ಣರಾಜಪೇಟೆ , ಮಂಡ್ಯ

error: