May 14, 2024

Bhavana Tv

Its Your Channel

ಶ್ರೀ ವಿನಾಯಕ ಗೆಳೆಯರ ಬಳಗವು ಗಣೇಶೋತ್ಸವದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ

ಕೃಷ್ಣರಾಜಪೇಟೆ :- ಅಮೂಲ್ಯವಾದ ಜೀವವನ್ನು ಉಳಿಸಿ ಮನುಷ್ಯನ ಪ್ರಾಣವನ್ನು ಕಾಪಾಡುವ ರಕ್ತದಾನವು ದಾನ ದಾನಗಳಲ್ಲಿಯೇ ಅತ್ಯಂತ ಶ್ರೇಷ್ಠವಾದ ದಾನವಾಗಿದೆ ಎಂದು ತಾಲ್ಲೂಕು ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಹೆಚ್.ಕೆ.ರಾಜು ಹೇಳಿದರು ..

ಅವರು ಪುರಸಭೆಯ ವ್ಯಾಪ್ತಿಯ ಹೊಸಹೊಳಲು ಗ್ರಾಮದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗವು ಗಣೇಶೋತ್ಸವದ ಅಂಗವಾಗಿ ಕೆ.ಆರ್.ಪೇಟೆ ಪಟ್ಟಣದ ಸ್ವಸ್ಥಿ ಕ್ಲಿನಿಕ್ ಹಾಗೂ ಸುಶೃತ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು…

ಆರೋಗ್ಯವಂತ ಯುವಜನರು ಪ್ರತೀ ಆರು ತಿಂಗಳಿಗೊಮ್ಮೆ ಯಾವುದೇ ಅಂಜಿಕೆಯಿಲ್ಲದೇ ರಕ್ತದಾನ ಮಾಡುವುದರಿಂದ ತುರ್ತಾಗಿ ರಕ್ತವು ಬೇಕಾಗಿರುವ ರೋಗಿಗಳು ಸೇರಿದಂತೆ ಅಪಘಾತದಲ್ಲಿ ನೊಂದಿರುವ ಸಂತ್ರಸ್ತ ಜನರಿಗೆ ಅನುಕೂಲವಾಗಲಿದೆ. ಆದ್ದರಿಂದ ಯುವಕ ಯುವತಿಯರು ರಕ್ತದಾನ ಮಾಡುವುದನ್ನು ಜೀವನದ ಒಂದು ಹವ್ಯಾಸವನ್ನಾಗಿಸಿಕೊಂಡು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು..

ರಕ್ತದಾನ ಶಿಬಿರದಲ್ಲಿ ಮಾರುತಿ ಯುವಕ ಸಂಘದ ಅಧ್ಯಕ್ಷ ಹೆಚ್.ವಿ.ಶ್ರೀನಿವಾಸ್, ವಿನಾಯಕ ಗೆಳೆಯರ ಬಳಗದ ಗೋವರ್ಧನ್, ಅಭಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಯೋಗೇಶ್, ಮುಖಂಡರಾದ ಚಂದ್ರಕಲಾ ರಮೇಶ್, ಜಯಮ್ಮ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್, ಸ್ವಸ್ಥಿ ಕ್ಲಿನಿಕ್ ನ ವ್ಯವಸ್ಥಾಪಕ ನಿರ್ದೇಶಕ ಡಾ.ರಕ್ಷಿತ್, ಮೈಸೂರಿನ ಸುಶೃತ ರಕ್ತನಿಧಿ ಕೇಂದ್ರದ ಡಾ.ರಕ್ಷಿತಾ, ಐಸಿಟಿಸಿ ಕೌನ್ಸಿಲರ್ ಸತೀಶ್, ಆಟೋ ಚಾಲಕರು, ಗ್ರಾಮದ ಮುಖಂಡರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು..ರಕ್ತದಾನ ಶಿಬಿರದಲ್ಲಿ 60ಕ್ಕೂ ಹೆಚ್ಚಿನ ಯೂನಿಟ್ ರಕ್ತವು ಸಂಗ್ರಹವಾಯಿತು..ರಕ್ತದಾನಿಗಳನ್ನು ಹೊಸಹೊಳಲು ಗ್ರಾಮಸ್ಥರು ಹೃದಯಸ್ಪರ್ಶಿಯಾಗಿ ಗೌರವಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ .

error: