April 30, 2024

Bhavana Tv

Its Your Channel

ಟೌನ್ ಕ್ಲಬ್ ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಕೃಷ್ಣರಾಜಪೇಟೆ ಪಟ್ಟಣದ ಪ್ರತಿಷ್ಠಿತ ಟೌನ್ ಕ್ಲಬ್ ನ 2020-21 ಹಾಗೂ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಕ್ಲಬ್ ಅಧ್ಯಕ್ಷರಾದ ಎಂ.ಬಿ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು …

ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ.ಬಿ.ಹರೀಶ್ ಅವರ ಸಾರಥ್ಯದಲ್ಲಿ ಕ್ಲಬ್ ಅಭಿವೃದ್ಧಿಯ ಪಥದತ್ತ ಮುನ್ನಡೆಯುತ್ತಿರುವ ಬಗ್ಗೆ ಸಭೆಯಲ್ಲಿ ಭಾರೀ ಮೆಚ್ಚುಗೆಯು ವ್ಯಕ್ತವಾಯಿತು..

ಈ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಬಿ.ಈಶ್ವರಪ್ರಸಾದ್ ಅವರ ನೇತೃತ್ವದ ಆಡಳಿತ ಮಂಡಳಿಯು ಏಳೂವರೆ ಲಕ್ಷ ರೂಗಳಿಗೂ ಹೆಚ್ಚಿನ ಹಣವನ್ನು ದುರುಪಯೋಗ ಪಡಿಸಿಕೊಂಡು ಕ್ಲಬ್ ಗೆ ಸಕಾಲದಲ್ಲಿ ಮರಳಿ ಪಾವತಿಸದ ಹಿನ್ನೆಲೆಯಲ್ಲಿ ಈಶ್ವರಪ್ರಸಾದ್ ಸೇರಿದಂತೆ ಈ ಹಿಂದಿನ ಆಡಳಿತ ಮಂಡಳಿಯ ಪದಾಧಿಕಾರಿಗಳ ಸದಸ್ಯತ್ವವನ್ನು ಅಮಾನತ್ತಿನಲ್ಲಿಟ್ಟು ಹಣ ಪಾವತಿ ಮಾಡುವ ಬಗ್ಗೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮಕೈಗೊಳ್ಳುವಂತೆ ಸಭೆಯು ಸರ್ವಾನುಮತದಿಂದ ಒಪ್ಪಿಗೆ ನೀಡಿತು..

ಕಳೆದ ಸರ್ವ ಸದಸ್ಯರ ಮಹಾಸಭೆಯಲ್ಲಿಯೇ ಈಶ್ವರಪ್ರಸಾದ್ ಅವರು ದುರುಪಯೋಗ ಮಾಡಿಕೊಂಡಿರುವ ಹಣವನ್ನು ವಸೂಲು ಮಾಡಲು ಹಣ ಪಾವತಿ ಮಾಡದಿದ್ದರೆ ಕಾನೂನು ಕ್ರಮಕೈಗೊಳ್ಳುವಂತೆ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ಅಧಿಕಾರ ನೀಡಿದ್ದರೂ ಕ್ರಮಕೈಗೊಳ್ಳದೇ ಬೇಜವಾಬ್ಧಾರಿಯು ಪ್ರದರ್ಶನವಾಗಿರುವ ಬಗ್ಗೆ ಸಭೆಯಲ್ಲಿ ತೀವ್ರ ವಾಕ್ಸಮರ ನಡೆಯಿತು..

ಟೌನ್ ಕ್ಲಬ್ ಸದಸ್ಯರಾದ ಎನ್.ಆರ್.ರವಿಶಂಕರ್, ಎ.ಆರ್.ರಘು, ಅಘಲಯ ರಮೇಶ್, ಅಂಚಿ ಸಣ್ಣಸ್ವಾಮಿಗೌಡ, ನರಸೇಗೌಡ, ಎ.ಜೆ.ದಿವಾಕರ್, ಎಸ್.ಕೆ.ಹೇಮಣ್ಣ, ಡಿ.ರಮೇಶ್, ಪಿ.ಬಿ.ನಾಗರಾಜು, ಮಾಸ್ತಿಗೌಡ ಕ್ರಿಮಿನಲ್ ಪ್ರಕರಣ ದಾಖಲಿಸಿ ಆದಷ್ಟು ಜಾಗ್ರತೆ ದುರುಪಯೋಗ ಮಾಡಿಕೊಂಡಿರುವ ಹಣವನ್ನು ವಸೂಲಿ ಮಾಡಬೇಕು, ಹಣ ಸಂಸ್ಥೆಗೆ ಪಾವತಿಯಾಗುವವರೆಗೂ ಸದಸ್ಯತ್ವವನ್ನು ಅಮಾನತ್ತಿನಲ್ಲಿಡಬೇಕು ಎಂದು ಆಗ್ರಹಿಸಿದರು ..

ಚರ್ಚೆಯ ಮಧ್ಯೆ ಮಾತಿಗಿಳಿದ ಪುರಸಭೆ ಮಾಜಿಅಧ್ಯಕ್ಷ ಕೆ.ಬಿ.ಮಹೇಶ್ ಮಾತನಾಡಿ ಈ ಹಿಂದೆಯೇ ಹಣ ದುರುಪಯೋಗ ಆಗಿದ್ದರೆ ಕಾನೂನು ಕ್ರಮಕೈಗೊಳ್ಳುವಂತೆ ನೂತನ ಆಡಳಿತ ಮಂಡಳಿಗೆ ಅಧಿಕಾರ ನೀಡಲಾಗಿತ್ತು, ಆದರೆ ಹಣ ವಸೂಲಿ ಮಾಡಲು ವಿಫಲವಾಗಿರುವ ಆಡಳಿತ ಮಂಡಳಿಯು ಪದೇ ಪದೇ ವಾರ್ಷಿಕ ಮಹಾಸಭೆಯಲ್ಲಿ ವಿಷಯವನ್ನಿಟ್ಟು ಮಾಜಿಅಧ್ಯಕ್ಷರಿಗೆ ಮುಜುಗರ ಉಂಟುಮಾಡುತ್ತಿದ್ದಾರೆ. ಟೌನ್ ಕ್ಲಬ್ ಸಮಗ್ರವಾದ ಅಭಿವೃದ್ಧಿಯಲ್ಲಿ ಈಶ್ವರಪ್ರಸಾದ್ ಅವರ ಪಾತ್ರ ಹಾಗೂ ಕೊಡುಗೆಯು ಅಪಾರವಾಗಿದೆ. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಸಂಸ್ಥೆಗೆ ಮಾಡಿಟ್ಟಿರುವ ಮಾಜಿಅಧ್ಯಕ್ಷರು ಮಾಡಿರುವ ಸಣ್ಣ ತಪ್ಪನ್ನೇ ದೊಡ್ಡದೆಂದು ಬಿಂಬಿಸಿ ತೇಜೋವಧೆ ಮಾಡಿ ಅಪಪ್ರಚಾರ ಮಾಡಲಾಗುತ್ತಿದೆ. ಆಡಳಿತ ಮಂಡಳಿಗೆ ನ್ಯಾಯಾಲಯದಲ್ಲಿಯೇ ಉತ್ತರ ನೀಡುತ್ತೇವೆ ಎಂದಾಗ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಅಂಬರೀಶ್, ಆಡಳಿತ ಮಂಡಳಿಯ ನಿರ್ದೇಶಕ ಹೆಚ್.ಆರ್.ರಾಜೇಶ್ ಮತ್ತು ಮಹೇಶ್ ನಡುವೆ ಮಾತಿನ ಚಕಮಕಿ ನಡೆಯಿತು..

ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ.ಹರೀಶ್ ಅವರ ನೇತೃತ್ವದಲ್ಲಿ ಕ್ಲಬ್ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದ್ದರಿಂದ ಯಾವುದೇ ಚುನಾವಣೆ ನಡೆಸದೇ ಮತ್ತೆ ಮೂರು ವರ್ಷಗಳ ಅವಧಿಗೆ ಹಾಲಿ ಕೆಲಸ ಮಾಡುತ್ತಿರುವ ಆಡಳಿತ ಮಂಡಳಿಯ ಜೊತೆಗೆ ಇಬ್ಬರು ನಿರ್ದೇಶಕರನ್ನು ಹೊಸದಾಗಿ ನೇಮಕ ಮಾಡಿಕೊಂಡು ಮುಂದುವರೆಸೋಣ ಎಂದು ಕ್ಲಬ್ ಸದಸ್ಯರಾದ ನರಸೇಗೌಡ ಅಭಿಪ್ರಾಯ ವ್ಯಕ್ತಪಡಿಸಿದಾಗ ಸಭೆಯಲ್ಲಿ ಭಾಗವಹಿಸಿದ್ದ ಶೇ.80 ಕ್ಕೂ ಹೆಚ್ಚಿನ ಸದಸ್ಯರು ಆಗಬಹುದು ಇವರೇ ಮುಂದುವರೆಯಲಿ, ಚುನಾವಣೆ ನಡೆಸಿ ಸಂಸ್ಥೆಯ ಹಣವನ್ನು ಪೋಲು ಮಾಡುವುದು ಬೇಡ ಎಂಬ ಅಭಿಪ್ರಾಯ ಮಂಡಿಸಿದಾಗ ಕ್ಲಬ್ ನ ಚಟುವಟಿಕೆಗಳಲ್ಲಿ ಭಾಗವಹಿಸದ ಸದಸ್ಯರು ನೀಡುವ ಅಭಿಪ್ರಾಯಕ್ಕೆ ಬೆಲೆಯಿಲ್ಲ, ಸಂಸ್ಥೆಯ ಚಟುವಟಿಕೆಗಳಲ್ಲಿ, ಆಟೋಟಗಳಲ್ಲಿ ಭಾಗವಹಿಸಿ ಆದಾಯ ಮಾಡಿಕೊಡುತ್ತಿರುವ ಸದಸ್ಯರ ಭಾವನೆಗಳನ್ನು ಗೌರವಿಸಬೇಕು. ಈಗ ಆಡಳಿತ ಮಂಡಳಿಯನ್ನು ಮುಂದುವರೆಸುವ ಚರ್ಚೆ ಬೇಡ ಎಂದು ಸದಸ್ಯ ಕೆ.ಬಿ.ಮಹೇಶ್ ವಯಕ್ತಿಕವಾಗಿ ಸದಸ್ಯರ ನಿಂಧನೆಗೆ ಇಳಿದಾಗ ಅಧ್ಯಕ್ಷ ಹರೀಶ್ ಮಧ್ಯೆಪ್ರವೇಶಿಸಿ ಸಂಸ್ಥೆಗೆ ಹೊಸದಾಗಿ ಸದಸ್ಯತ್ವ ನೀಡುವ ಬಗ್ಗೆ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚೆ ಮಾಡಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ನಿರ್ಧಾರ ಕೈಗೊಳ್ಳುತ್ತೇವೆ. ಕಾನೂನು ತಜ್ಞರ ಜೊತೆ ಮತ್ತೊಮ್ಮೆ ಚರ್ಚಿಸಿ ಈ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರು ದುರುಪಯೋಗ ಮಾಡಿಕೊಂಡಿರುವ ಹಣ ವಸೂಲಿಗೆ ಕ್ರಿಮಿನಲ್ ಮೊಕದ್ದಮೆ ದಾಖಲೆ ಮಾಡುತ್ತೇವೆ ಎಂದಾಗ ಮಹೇಶ್ ಹಾಗೂ ಅಧ್ಯಕ್ಷ ಹರೀಶ್ ಅವರ ನಡುವೆ ವಾಗ್ಯುದ್ಧವೇ ನಡೆಯಿತು …

ಕ್ಲಬ್ ನ ಸದಸ್ಯರು ಅಕಾಲಿಕವಾಗಿ ನಿಧನರಾದರೆ ಅವರ ಕುಟುಂಬಕ್ಕೆ 50 ಸಾವಿರ ರೂ ಸಹಾಯ ಧನ ನೀಡುವುದು, ಸದಸ್ಯತ್ವ ಬೇಡ ಎನ್ನುವ ಸದಸ್ಯತ್ವದ ಅವಧಿಯು 15 ವರ್ಷ ತುಂಬಿರುವ ಸದಸ್ಯರಿಗೆ 25 ಸಾವಿರ ರೂ ಮರುಪಾವತಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು..

ಟೌನ್ ಕ್ಲಬ್ ಗೆ ನೂತನವಾಗಿ ಸದಸ್ಯತ್ವ ನೀಡಿ ಮೈಸೂರು ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕ್ಲಬ್ ಗಳೊಂದಿಗೆ ನಮ್ಮ ಕ್ಲಬ್ ಅನ್ನು ಹೊಂದಾಣಿಕೆ ಮಾಡಿಕೊಂಡರೆ ಸದಸ್ಯರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳು ದೊರೆಯಲಿವೆ. ಆಡಳಿತ ಮಂಡಳಿಯು ಈ ಬಗ್ಗೆ ಗಮನ ಹರಿಸಬೇಕು ಎಂದು ಎಪಿಎಂಸಿ ಮಾಜಿಅಧ್ಯಕ್ಷ ಎಂ.ಪಿ.ಲೋಕೇಶ್ ಸಲಹೆ ನೀಡಿದರು.. ಅಧ್ಯಕ್ಷ ಹರೀಶ್ ಮಾತನಾಡಿ ನಮ್ಮ ಕ್ಲಬ್ ಅನ್ನು ಆಧುನೀಕರಣಗೊಳಿಸಿ ಹೆಚ್ಚುವರಿಯಾಗಿ ಎರಡು ಕೊಠಡಿಗಳನ್ನು ನಿರ್ಮಿಸಿ ಬಾರ್ ಆರಂಬಿಸಲು ಆಲೋಚಿಸಲಾಗಿದೆ. ಸಧ್ಯದಲ್ಲಿಯೇ ಈ ಕಾರ್ಯವು ಆರಂಭವಾಗಲಿದೆ ಎಂದು ತಿಳಿಸಿದರು..

ಕೃಷ್ಣರಾಜಪೇಟೆ ಟೌನ್ ಕ್ಲಬ್’ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಬೇಕಾಗಿದ್ದ ಕ್ಷೇತ್ರದ ಶಾಸಕರು ರಾಜ್ಯದ ಸಚಿವರಾದ ಡಾ.ನಾರಾಯಣಗೌಡ ಹಾಗೂ ಮುಖ್ಯ ಅತಿಥಿಯಾಗಿ ಭಾಗಿಯಾಗಬೇಕಾಗಿದ್ದ ಕ್ಲಬ್ ಗೌರವಾಧ್ಯಕ್ಷ ಕೆ.ಬಿ.ಚಂದ್ರಶೇಖರ್ ಅವರ ಗೈರು ಹಾಜರಿಯಲ್ಲಿ ಸಭೆಯು ಆರಂಭವಾಯಿತು ..

ಸಭೆಯಲ್ಲಿ ಭಾಗವಹಿಸಿದ್ದ ಸಂಸ್ಥಾಪಕ ಸದಸ್ಯರಾದ ಡಾ.ಗಣೇಶಗೌಡ, ಬಿ.ನಂಜಪ್ಪ, ಹೊಸಹೊಳಲು ಯತಿರಾಜು, ಜೆ.ಬಿ.ಬೋರೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಶೀಳನೆರೆ ಅಂಬರೀಶ್, ಉಪಾಧ್ಯಕ್ಷ ಕೆ.ಟಿ.ಗಂಗಾಧರ್, ಖಜಾಂಚಿ ನೀತಿಮಂಗಲ ನಟರಾಜ್, ನಿರ್ದೇಶಕರಾದ ಬಿ.ಪಿ.ಅಶೋಕ್ ಕುಮಾರ್, ಎಸ್.ಪ್ರಕಾಶ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರೀಕ್ಷೆಯಂತೆ ಈ ಹಿಂದಿನ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸಂಸ್ಥೆಯ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಈಶ್ವರಪ್ರಸಾದ್ ಅವರಿಂದ ಹಣದ ವಸೂಲಿಗೆ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು..ಟೌನ್ ಕ್ಲಬ್ ಮಾಜಿಅಧ್ಯಕ್ಷರಾದ ಕೆ.ಬಿ.ರವಿ, ಈಶ್ವರಪ್ರಸಾದ್ ಹಾಗೂ ಅವರ ಬೆಂಬಲಿಗ ಸದಸ್ಯರ ಗೈರುಹಾಜರಿಯು ಎದ್ದು ಕಾಣುತ್ತಿತ್ತು ..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ .

error: