April 29, 2024

Bhavana Tv

Its Your Channel

ಕೆ.ಆರ್.ಪೇಟೆ ಪಟ್ಟಣದ ಆಚಾರ್ಯ ವಿದ್ಯಾಶಾಲೆಯಲ್ಲಿ ಬೃಹತ್ ಆಹಾರ ಮೇಳ

ಕೆ.ಆರ್.ಪೇಟೆ ಪಟ್ಟಣದ ಆಚಾರ್ಯ ವಿದ್ಯಾಶಾಲೆಯಲ್ಲಿ ಬೃಹತ್ ಆಹಾರ ಮೇಳ .. ಮಕ್ಕಳ ಸಂಭ್ರಮದಲ್ಲಿ ಭಾಗಿಯಾಗಿ ವಿವಿಧ ಆಹಾರ ಪದಾರ್ಥಗಳನ್ನು ಖರೀದಿಸಿ ಸಂಭ್ರಮಿಸಿದ ಪೋಷಕರು .. ಸಾರ್ವಜನಿಕರ ಗಮನ ಸೆಳೆದ ರಾಗಿ ರೊಟ್ಟಿ, ಅಕ್ಕಿರೊಟ್ಟಿ ಹಾಗೂ ಮಲೆನಾಡ ಕಡುಬು ..

ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ ಬಾಲ್ಯದಿಂದಲೇ ವ್ಯವಹಾರ ಜಾಣ್ಮೆಯನ್ನು ಹೆಚ್ಚಿಸಿ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಮಕ್ಕಳ ಸಂತೆ ಮತ್ತು ಆಹಾರ ಮೇಳದಂತಹ ಕಾರ್ಯಕ್ರಮಗಳು ಅನುಕೂಲವಾಗಿವೆ ಎಂದು ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಹೇಳಿದರು..

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಆಚಾರ್ಯ ವಿದ್ಯಾಶಾಲೆಯಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಆಹಾರ ಮೇಳವನ್ನು ಉದ್ಘಾಟಿಸಿ ಮಕ್ಕಳು ತಯಾರಿಸಿ ತಂದಿದ್ದ ಆಹಾರ ಪದಾರ್ಥಗಳನ್ನು ಖರೀದಿಸಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ರುಚಿ ನೋಡಿ ಮಕ್ಕಳೊಂದಿಗೆ ಸಂವಾದ ನಡೆಸಿ ವ್ಯವಹಾರ ಜಾಣ್ಮೆಯನ್ನು ಪರಿಶೀಲಿಸಿ ಜಾಣ ಮಕ್ಕಳಿಗೆ ಶಹಭಾಷ್ ಗಿರಿ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು..
ಮಕ್ಕಳು ಶಾಲೆಗೆ ಬಂದು ಅಕ್ಷರಜ್ಞಾನವನ್ನು ಹೊಂದುವ ಜೊತೆಗೆ ಲೋಕಜ್ಞಾನ, ವ್ಯವಹಾರ ಮತ್ತು ಲೆಕ್ಕಾಚಾರ, ಲಾಭನಷ್ಠ ಹಾಗೂ ಉಳಿತಾಯದ ಬಗ್ಗೆ ತಿಳಿದುಕೊಂಡು ತಮ್ಮಲ್ಲಿನ ಜ್ಞಾನಶಕ್ತಿಯನ್ನು ಹೆಚ್ಚಿಸಿ ವ್ಯಕ್ತಿತ್ವವನ್ನು ವಿಕಸನಪಡಿಸಿಕೊಂಡು ಪ್ರಗತಿಯ ಪಥದಲ್ಲಿ ಸಾಗಿ ಗುರಿ ಮುಟ್ಟುವುದು ಅನಿವಾರ್ಯವಾಗಿದೆ. ಮಕ್ಕಳ ಗುರಿ ಸಾಧನೆಗೆ ಹಾಗೂ ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಸವಾಲುಗಳನ್ನು ಎದುರಿಸಲು ವರದಾನವಾಗಿದೆ. ಈ ದಿಕ್ಕಿನಲ್ಲಿ ಆಚಾರ್ಯ ಶಾಲೆಯ ಆಡಳಿತ ಮಂಡಳಿಯವರು ಇದೇ ಪ್ರಪ್ರಥಮ ಬಾರಿಗೆ ಬೃಹತ್ ಆಹಾರ ಮೇಳವನ್ನು ಆಯೋಜಿಸಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ಸಂಗತಿಯಾಗಿದೆ ಎಂದು ಮಹಾದೇವಿ ಅಭಿಮಾನದಿಂದ ಹೇಳಿದರು..

ಶಾಲೆಯ ಆಡಳಿತ ನಿರ್ದೇಶಕರಾದ ಚಲನಚಿತ್ರ ನಟ ಅರವಿಂದರಾವ್, ಮುಖ್ಯಶಿಕ್ಷಕಿ ಹುಧಾಫಾತಿಮಾ, ಆಡಳಿತಾಧಿಕಾರಿಗಳಾದ ತಬ್ರೇಜ್ ನಧೀಮ್, ವ್ಯವಸ್ಥಾಪಕ ಕೆ.ಎಸ್.ನಾಗೇಶಬಾಬೂ, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ ಸೇರಿದಂತೆ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಆಹಾರ ಮೇಳದಲ್ಲಿ ಭಾಗವಹಿಸಿ ವಿವಿಧ ಆಹಾರ ಪದಾರ್ಥಗಳನ್ನು ಖರೀದಿಸಿ ಸಂಭ್ರಮಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: