April 29, 2024

Bhavana Tv

Its Your Channel

3 ಸಾವಿರ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಸoಸ್ಥೆಗಳ ಪದಾಧಿಕಾರಿಗಳಿಂದ ಕೋಟಿ ಕಂಠ ಗಾಯನ

ಕೃಷ್ಣರಾಜಪೇಟೆ :- ಹೊಯ್ಸಳ ಶಿಲ್ಪಕಲಾ ವೈಭವದ ಹೊಸಹೊಳಲಿನ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ 3 ಸಾವಿರ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಸAಸ್ಥೆಗಳ ಪದಾಧಿಕಾರಿಗಳಿಂದ ಕೋಟಿ ಕಂಠ ಗಾಯನ..ಮುಗಿಲು ಮುಟ್ಟಿದ ಸಂಭ್ರಮ.. ಹಾರಾಡಿದ ಕನ್ನಡ ಬಾವುಟಗಳು.. ಹೊಸಹೊಳಲು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ .. ಎತ್ತ ನೋಡಿದರೂ ಕನ್ನಡ ಧ್ವಜಗಳ ಸಂಭ್ರಮವೋ ಸಂಭ್ರಮ..ಕನ್ನಡ ಭಾವುಟಗಳಿಂದ ಕಂಗೊಳಿಸಿದ ಹೊಸಹೊಳಲು.. ..

67ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ನನ್ನ ನಾಡು ನನ್ನ ಹಾಡು ಕಾರ್ಯಕ್ರಮದ ಅಂಗವಾಗಿ ಕೋಟಿ ಕಂಠ ಗಾಯನವು ಕೆ.ಆರ್.ಪೇಟೆ ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಯ್ಸಳ ಶಿಲ್ಪಕಲಾ ವಾಸ್ತುವೈಭವದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಸAಸ್ಥೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು..

ತಹಶೀಲ್ದಾರ್ ಎಂ.ವಿ.ರೂಪ ಮಾತನಾಡಿ ಕನ್ನಡ ಭಾಷೆ, ನೆಲಜಲ ಹಾಗೂ ನಾಡುನುಡಿಯ ಬಗ್ಗೆ ಯುವಜನರು ಅಭಿಮಾನವನ್ನು ಬೆಳೆಸಿಕೊಳ್ಳಬೇಕು..ಆಂಗ್ಲಭಾಷೆಯನ್ನು ಕೇವಲ ಒಂದು ಭಾಷೆಯಾಗಿ ಮಾತ್ರ ಕಲಿಯಬೇಕು ಆದರೆ ತಾಯಿ ಭಾಷೆಯಾಗಿರುವ ಕನ್ನಡವನ್ನು ಪ್ರೀತಿಸಿ ಆರಾಧಿಸಬೇಕು..ಕನ್ನಡದ ನೆಲದಲ್ಲಿ ವಾಸಿಸುವ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡುವ ಕೆಲಸವನ್ನು ಅಭಿಮಾನದಿಂದ ಮಾಡಬೇಕು ಎಂದು ರೂಪ ಕರೆ ನೀಡಿದರು…

ಹೊಯ್ಸಳ ಶಿಲ್ಪಕಲಾ ವೈಭವದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಆರಂಭವಾದ ಕೋಟಿಕಂಠ ಗಾಯನದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ, ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಕನ್ನಡ ಡಿಂಡಿಮ, ಡಿ.ವಿ.ಕರ್ಕಿ ಅವರ ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ವಿದ್ಯಾಚೇತನ ಗೀತೆ ಹಾಗೂ ನಾದಬ್ರಹ್ಮ ಹಂಸಲೇಖ ವಿರಚಿತ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಗೀತೆಗಳಿಗೆ ಧನಿಯಾದರು. ಕೆ.ಆರ್.ಪೇಟೆ ತಾಲ್ಲೂಕಿನ ಉದಯೋನ್ಮುಖ ಗಾಯಕ ರವಿಶಿವಕುಮಾರ್ ನೇತೃತ್ವದಲ್ಲಿ ವಿವಿಧ ಗಾಯಕರು ಹಾಡಿದ ಈ ಆರು ಗೀತೆಗಳಿಗೆ ವಿದ್ಯಾರ್ಥಿಗಳು ಹಾಗೂ ಅತಿಥಿಗಳು ಧನಿಗೂಡಿಸಿ ಕೋಟಿ ಕಂಠ ಗಾಯನಕ್ಕೆ ಶಕ್ತಿ ತುಂಬಿದ ನಂತರ ಸಂಕಲ್ಪವಿಧಿ ಸ್ವೀಕರಿಸಿದರು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಒತ್ತಾಯದ ಮೇರೆಗೆ ತಹಶೀಲ್ದಾರ್ ರೂಪ, ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಹಾಗೂ ಇತರೆ ಗಾಯಕರು ಹಾಡಿದರಲ್ಲದೇ ಹಾಡಿಗೆ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ನೃತ್ಯ ಮಾಡಿ ಸಂಭ್ರಮಿಸಿದರು..

ಕೋಟಿಕAಠ ಗಾಯನ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಮಹಾದೇವಿನಂಜುAಡ, ಕರ್ನಾಟಕ ರಕ್ಷಣಾ ವೇದಿಕೆಯ ಕೆ.ಆರ್.ಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಸಮಾಜ ಸೇವಕ ಡಾ.ಕೆ.ಎಂ.ಶಿವಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಕ್ಷೇತ್ರಶಿಕ್ಷಣಾಧಿಕಾರಿ ಸೀತಾರಾಮ್, ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ಸಿಡಿಪಿಓ ಅರುಣಕುಮಾರ್, ಪುರಸಭೆ ಮುಖ್ಯಾಧಿಕಾರಿ ಕುಮಾರ್, ಪರಿಸರ ಎಂಜಿನಿಯರ್ ಅರ್ಚನಾಆರಾಧ್ಯ, ಮಹಿಳಾ ಹೋರಾಟಗಾರರಾದ ಮಂಜುಳಾ ಚನ್ನಕೇಶವ, ಸುಕನ್ಯ ರಂಗನಾಥ, ಜಯಮ್ಮ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಂಘಸAಸ್ಥೆಗಳ ಪದಾಧಿಕಾರಿಗಳು ಪತ್ರಕರ್ತರು ಹಾಗೂ ಹೊಸಹೊಳಲು ಗ್ರಾಮದ ಕುರುಹಿನಶೆಟ್ಟಿ ಮಹಿಳಾ ಸಂಘದ ಪದಾಧಿಕಾರಿಗಳು, ಪ್ರತಿಭಾ ಯುವತಿ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಹೊಸಹೊಳಲು ಗ್ರಾಮಸ್ಥರು ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: