April 29, 2024

Bhavana Tv

Its Your Channel

ಕೆ.ಆರ್.ಪೇಟೆ ತಾಲೂಕಿಗೆ ಆಗಮಿಸಿದ ಸಿದ್ಧಗಂಗಾ ಮಠದ ಧಾರ್ಮಿಕ ಜಾಗೃತಿ ರಥಕ್ಕೆ ಭಕ್ತರಿಂದ ಸ್ವಾಗತ

ಕೃಷ್ಣರಾಜಪೇಟೆ :- ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಗದ್ದುಗೆಗೆ ತೃತೀಯ ವರ್ಷದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದ ಅಂಗವಾಗಿ ಕೆ.ಆರ್.ಪೇಟೆ ತಾಲೂಕಿಗೆ ಆಗಮಿಸಿದ ಸಿದ್ಧಗಂಗಾ ಮಠದ ಧಾರ್ಮಿಕ ಜಾಗೃತಿ ರಥಕ್ಕೆ ತಾಲೂಕಿನ ವೀರಶೈವ ಸಮಾಜದ ಗಣ್ಯರಿಂದ ಪುಷ್ಪಾರ್ಚನೆ ಮತ್ತು ಕರಪತ್ರ ಬಿಡುಗಡೆ ಮೂಲಕ ಚಾಲನೆ ನೀಡಿ, ವೀರಭದ್ರ ನೃತ್ಯದ ಮೂಲಕ ಪಟ್ಟಣದಲ್ಲಿ ವರ್ಣರಂಜಿತ ಮೆರವಣಿಗೆ ಮುಗಿಲು ಮುಟ್ಟಿದ ಸಂಭ್ರಮ..

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ತುಮಕೂರು ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಡಾ. ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರ ಗದ್ದುಗೆಯ ತೃತೀಯ ವರ್ಷದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದ ಅಂಗವಾಗಿ ಭಕ್ತಾದಿಗಳು ಪ್ರತಿ ತಾಲೂಕಿನಲ್ಲೂ ಸಂಚಾರಿಸಿರಲಿರುವ ಧಾರ್ಮಿಕ ಜಾಗೃತಿ ರಥವನ್ನು ತಾಲೂಕಿನ ಗಣ್ಯರು ಸ್ವಾಗತಿಸಿ ರಥಕ್ಕೆ ತೆಂಡೇಕೆರೆ ಬಾಳೆಹೊನ್ನೂರು ಶ್ರೀಗಳ ನೇತೃತ್ವದಲ್ಲಿ ಪುಷ್ಪಾರ್ಚನೆ ಮಾಡಿ ಕರಪತ್ರ ಬಿಡುಗಡೆ ಮಾಡಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದ ಉದ್ಘಾಟನೆಯ ನಂತರ ಮಾತನಾಡಿದ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀಗಳಾದ ಶ್ರೀ ಗಂಗಾಧರ ಶಿವಾಚಾರ್ಯ ಶ್ರೀಗಳು ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಿಗಳು ಹಾಗೂ ನಡೆದಾಡುವ ದೇವರೆಂದೇ ಪ್ರಖ್ಯಾತರಾಗಿರುವ ಡಾ. ಶ್ರೀಶ್ರೀಶ್ರೀ ಶಿವಕುಮಾರ ಮಹಾ ಶಿವಯೋಗಿಗಳ ತೃತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರ ಸಿದ್ದಗಂಗಾ ಮಠದಲ್ಲಿ ದಿನಾಂಕ ನವಂಬರ್ 21ರಂದು ಬೆಳಿಗ್ಗೆ 5:30 ರಿಂದ ಪುಷ್ವ ಬಿಲ್ವಾರ್ಚನೆ ಮಧ್ಯಾಹ್ನ 12:30ಕ್ಕೆ ಮಹಾ ಮಂಗಳಾರತಿ ಮಧ್ಯಾಹ್ನ 2:30 ರಿಂದ 25ಕ್ಕೂ ಅಧಿಕ ಕಲಾ ತಂಡಗಳೊAದಿಗೆ ಪೂಜ್ಯರ ಭಾವಚಿತ್ರದೊಂದಿಗೆ ಅಲಂಕೃತ ಬೆಳ್ಳಿಪಲ್ಲಕಿಯ ಅದ್ದೂರಿ ಮೆರವಣಿಗೆ ಸಂಜೆ 6 ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮ್ಮ ತಾಲೂಕಿನ ಶ್ರೀಮಠದ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೃತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಪಾತ್ರರಾಗಬೇಕು ಎಂದು ತಾಲೂಕಿನ ಜನತೆಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ವೀರಶೈವ ಯುವ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಸಾಸಲು ಗುರುಮೂರ್ತಿ, ಸಚಿವ ನಾರಾಯಣಗೌಡರ ಆಪ್ತ ಸಹಾಯಕ ದಯಾನಂದ್, ಮುಖಂಡರಾದ ತೋಟಪ್ಪಶೆಟ್ಟಿ, ಸಾಸಲು ಈರಪ್ಪ, ನಾಗೇಶ್, ಮೋದೂರು ಮಂಜು, ಮಿತ್ರ ಗಿರೀಶ್, ವಡ್ಡರಹಳ್ಳಿ ಮಂಜು, ಮಂಜುನಾಥ್ ಸೇರಿದಂತೆ ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: