April 30, 2024

Bhavana Tv

Its Your Channel

ಜನವರಿ 25 ರಿಂದ ಹೇಮಗಿರಿ ಜಾತ್ರೆ ಆರಂಭ, ಚರ್ಮಗಂಟು ಸಾಂಕ್ರಾಮಿಕ ರೋಗದ ಭೀತಿಯ ಹಿನ್ನೆಲೆ ಹೇಮಗಿರಿ ದನಗಳ ಜಾತ್ರೆಗೆ ರಾಸುಗಳಿಗೆ ನಿರ್ಬಂಧ

ಕೆ.ಆರ್.ಪೇಟೆ :- ಚರ್ಮಗಂಟು ಸಾಂಕ್ರಾಮಿಕ ರೋಗದ ಭೀತಿಯ ಹಿನ್ನೆಲೆಯಲ್ಲಿ ಈ ಭಾರಿ ಕೆ.ಆರ್.ಪೇಟೆ ತಾಲ್ಲೂಕಿನ ಸುಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆಗೆ ರಾಸುಗಳಿಗೆ ನಿರ್ಬಂಧ ವಿಧಿಸಲಾಗಿದೆ..ಜನವರಿ 25 ರಿಂದ ಹೇಮಗಿರಿ ಜಾತ್ರೆ ಆರಂಭವಾಗಲಿದ್ದು 28 ರಂದು ಬ್ರಹ್ಮರಥೋತ್ಸವ ಹಾಗೂ ಫೆ.1ರಂದು ರಾತ್ರಿ ಹೇಮಾವತಿ ನದಿಯಲ್ಲಿ ವಿಜೃಂಭಣೆಯ ತೆಪ್ಪೋತ್ಸವ ನಡೆಯುವುದಾಗಿ ತಹಶೀಲ್ದಾರ್ ರೂಪ ಪ್ರಕಟಣೆ..ಜಾತ್ರಾ ಕಾಲದ ಸುಂಕಗಳ ಬಹಿರಂಗ ಹರಾಜು ಪ್ರಕ್ರಿಯೆಗೆ ಚಾಲನೆ..ನೂರಾರು ಜನರು ಬಿಡ್ ಸವಾಲಿನಲ್ಲಿ ಭಾಗಿ ..

ಜನವರಿ 28ರಂದು ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೃಗು ಮಹರ್ಷಿಗಳ ತಪೋಭೂಮಿಯಾಗಿರುವ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿಯವರ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಹೇಮಗಿರಿ ಜಾತ್ರಾ ಕಾಲದ ಸುಂಕಗಳ ಹರಾಜು ಪ್ರಕ್ರಿಯೆಯು ತಹಶೀಲ್ದಾರ್ ಎಂ.ವಿ.ರೂಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು..

ದನಗಳ ಜಾತ್ರೆಗೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿರುವ ಹೇಮಗಿರಿ ಜಾತ್ರೆಯು ಜನವರಿ 25 ರಿಂದ ಆರಂಭವಾಗುತ್ತಿದೆ. ರಾಸುಗಳ ಆರೋಗ್ಯಕ್ಕೆ ಮಾರಕವಾದ ಚರ್ಮಗಂಟು ಸಾಂಕ್ರಾಮಿಕ ರೋಗದ ಭೀತಿಯ ಹಿನ್ನೆಲೆಯಲ್ಲಿ ಈ ಭಾರಿಯ ಜಾತ್ರೆಗೆ ರಾಸುಗಳು ಆಗಮಿಸುವುದನ್ನು ಜಿಲ್ಲಾಡಳಿತವು ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಜಾತ್ರಾಮಾಳದಲ್ಲಿನ ಹುಣಸೆ ಮರಗಳ ಹರಾಜು, ಅಂಗಡಿ ಮುಂಗಟ್ಟುಗಳು ಹಾಗೂ ವಾಹನಗಳ ಸುಂಕವನ್ನು ಮಾತ್ರ ಛಡ್ ಸವಾಲ್ ಮೂಲಕ ಹರಾಜು ನಡೆಸಿ ಆಯ್ಕೆ ಮಾಡಲಾಯಿತು.

ತಹಶೀಲ್ದಾರ್ ಎಂ.ವಿ.ರೂಪ ಮಾತನಾಡಿ ಹೇಮಗಿರಿ ಜಾತ್ರೆಯನ್ನು ಎಂದಿನAತೆ ಈ ಭಾರಿಯೂ ವಿಶೇಷವಾಗಿ ಸಡಗರ ಸಂಭ್ರಮದಿAದ ಆಚರಿಸಲಾಗುತ್ತಿದೆ. ಹೇಮಗಿರಿ ಬೆಟ್ಟದ ಮೇಲಿರುವ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯ ಹಾಗೂ ಬೆಟ್ಟವನ್ನು ಬಣ್ಣ ಬಣ್ಣದ ವಿದ್ಯುದ್ಧೀಪಗಳಿಂದ ಅಲಂಕರಿಸುವುದು, ಜಾತ್ರೆಗೆ ಆಗಮಿಸುವ ಶ್ರೀ ರಂಗನಾಥಸ್ವಾಮಿಯ ಭಕ್ತರು ಹಾಗೂ ಸಾರ್ವಜನಿಕರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು ಸೇರಿದಂತೆ 28ರಂದು ನಡೆಯಲಿರುವ ಬ್ರಹ್ಮರಥೋತ್ಸವ ಹಾಗೂ ಫೆಬ್ರವರಿ 1 ರಂದು ರಾತ್ರಿ 8 ಗಂಟೆಗೆ ಹೇಮಾವತಿ ನದಿಯಲ್ಲಿ ನಡೆಯಲಿರುವ ವೆಂಕಟರಮಣ ಸ್ವಾಮಿಯ ತೆಪ್ಪೋತ್ಸವ ಕಾರ್ಯಕ್ರಮವನ್ನು ವಿಶೇಷವಾಗಿ ಅರ್ಥಪೂರ್ಣವಾಗಿ ವಿಜೃಂಭಣೆಯಿAದ ಆಚರಿಸಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು..

ಹರಾಜು ಪ್ರಕ್ರಿಯೆಯಲ್ಲಿ ಬಂಡಿಹೊಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುನಿಲ್, ಪಿಡಿಓ ಚಂದ್ರು, ಚೆಸ್ಕಾಂ ಎಇಇ ಕೃಷ್ಣ, ತಾಲ್ಲೂಕು ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷೆ ಆರ್.ಐ ಚಂದ್ರಕಲಾ, ಗ್ರಾಮಲೆಕ್ಕಾಧಿಕಾರಿ ಪೂಜಾಗೌಡ, ಕಂದಾಯ ಇಲಾಖೆಯ ವಿಷಯ ನಿರ್ವಾಹಕಿ ಆಶಾ, ಕಂಪ್ಯೂಟರ್ ಆಪರೇಟರ್ ಪೂರ್ಣಿಮಾ, ಪ್ರಥಮದರ್ಜೆ ಸಹಾಯಕ ಅಮೃತರಾಜು, ಬಂಡಿಹೊಳೆ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷರಾದ ಶಿವಕುಮಾರ್, ಶೇಷಾದ್ರಿ, ಕಾಯಿಮಂಜೇಗೌಡ, ಮುಖಂಡರಾದ ರಾಮೇಗೌಡ, ರಂಗನಾಥೇಗೌಡ, ಲಕ್ಷ್ಮೀಪುರ ಕುಮಾರಸ್ವಾಮಿ, ಪ್ರಕಾಶ್, ಭೈರೇಗೌಡ, ಕೆ.ಮಧು ಸೇರಿದಂತೆ ಹೆಗ್ಗಡಹಳ್ಳಿ, ಕುಪ್ಪಳ್ಳಿ, ಸಾಧುಗೋನಹಳ್ಳಿ, ನಾಟನಹಳ್ಳಿ, ಮಲ್ಲೇನಹಳ್ಳಿ, ಮಾಕವಳ್ಳಿ, ವಡ್ಡರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಜನರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ, ಮಂಡ್ಯ

error: