May 18, 2024

Bhavana Tv

Its Your Channel

ಶ್ರೀಆದಿಚುಂಚನಗಿರಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿಜೂ. ೨೯ ರಂದು ರಾಜ್ಯಮಟ್ಟದ ಕವಿಗೋಷ್ಠಿ

ನಾಗಮಂಗಲ : ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಸಾಂಸ್ಕೃತಿಕ ಸಮಿತಿಯ ವತಿಯಿಂದ ಜೂ. ೨೯ ರಂದು ಬೆಳಿಗ್ಗೆ ೧೦ – ೩೦ ಕ್ಕೆ ಅಂತರ್ಜಾಲದ ಮೂಲಕ ಇತ್ತೀಚೆಗೆ ಅಗಲಿದ ಜಾನಪದ ವಿದ್ವಾಂಸ ಕ.ರಾ. ಕೃಷ್ಣಸ್ವಾಮಿ, ಹಿರಿಯ ದಲಿತ ಕವಿ ಡಾ. ಸಿದ್ಧಲಿಂಗಯ್ಯ, ಹಿರಿಯ ಸಂಶೋಧಕ ಡಾ. ಹ.ಕ. ರಾಜೇಗೌಡ ಅವರಿಗೆ ನುಡಿನಮನ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಲಿದೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಸಾನಿಧ್ಯ ವಹಿಸವರು.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖ್ಯಾತ ಸಾಹಿತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ದೊಡ್ಡರಂಗೇಗೌಡ ವಹಿಸುವರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಡಾ. ಎನ್.ಎಸ್. ರಾಮೇಗೌಡ, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಕೆ. ಲೋಕೇಶ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಕೀಲ ಕೆಂಪೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳ ಖ್ಯಾತ ಕವಿ-ಕವಿಯತ್ರಿಯರಾದ ಹೆಚ್.ಆರ್. ಸುಜಾತ, ನಾ.ಸು. ನಾಗೇಶ್, ಡಾ. ಟಿ. ಯಲ್ಲಪ್ಪ, ಡಾ. ಗೀತಾ ವಸಂತ್, ಟಿ. ಸತೀಶ್ ಜವರೇಗೌಡ, ಸ್ಮಿತಾ ಅಮೃತರಾಜ್, ಹೊ.ನಾ. ನೀಲಕಂಠೇಗೌಡ, ಡಾ. ಜಯಶ್ರೀ ಕಂಬಾರ, ಡಾ. ನಾಗರಾಜ್ ತಲಘಟ್ಟಪುರ, ಡಾ. ಕಾಂತರಾಜಪುರ ಸುರೇಶ್, ಡಾ. ಪ್ರಕಾಶ್ ಖಾಡೆ, ಮಮತಾ ಅರಸೀಕೆರೆ, ಡಾ. ಬ್ಯಾಡರಹಳ್ಳಿ ಶಿವರಾಜ್, ಡಾ. ಸತ್ಯಮಂಗಲ ಮಹದೇವ, ಕೆ.ಎಂ. ವಸುಂಧರ, ಡಾ. ಹೊಂಬಯ್ಯ ಹೊನ್ನಲಗೆರೆ ಹಾಗೂ ಉದಯೋನ್ಮುಖ ಕವಿಗಳಾದ ದಿನೇಶ್ ಹೆರಗನಹಳ್ಳಿ, ಹೆಚ್.ಆರ್. ತ್ರಿವೇಣಿ, ಕಾ.ಹು. ಚಾನ್ ಪಾಷ, ಎಂ.ಎನ್. ಮಂಜುನಾಥ್, ಎನ್.ಆರ್. ದೇವಾನಂದ್, ಟಿ.ಇ. ಅನುಷಾ, ಕೆ.ಎಸ್. ಉದಯ ಕುಮಾರ್, ಡಿ.ಪಿ. ಚಿಕ್ಕಣ್ಣ (ದಾಪುಚಿ), ಎನ್.ಸಿ. ಶಿವಕುಮಾರ್ ತಮ್ಮ ಸ್ವರಚಿತ ಕವನ ವಾಚನ ಮಾಡುವರು.

ದೇವಲಾಪುರ ಜಗದೀಶ್ ನಾಗಮಂಗಲ

error: