May 18, 2024

Bhavana Tv

Its Your Channel

ನಾಡಪ್ರಭು ಕೆಂಪೇಗೌಡರ ೫೧೨ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು

ನಾಗಮಂಗಲ ;.ನಾಡು ಕಂಡು ಅಪ್ರತಿಮ ವೀರ ಸಮಾನತೆಯ ಹರಿಕಾರನಾಗಿ ರಾಜ್ಯದ ನಾಡಕಟ್ಟುವ ದೊರೆಯಾಗಿ ನಮ್ಮಗಳಿಗೆ ಆದರ್ಶವಾಗಿ ವಾಗಿರುವ ಕೆಂಪೇಗೌಡರನ್ನು ಸ್ಮರಿಸುವುದು ಅಗತ್ಯವೆಂದು ಶಾಸಕ ಸುರೇಶ್ ಗೌಡ ತಿಳಿಸಿದರು

ಅವರಿಂದು ನಾಗಮಂಗಲ ತಾಲೂಕು ಆಡಳಿತ ವತಿಯಿಂದ ನಾಡಪ್ರಭು ಕೆಂಪೇಗೌಡರ ೫೧೨ನೇ ಜಯಂತೋತ್ಸವದ ಅಂಗವಾಗಿ ಭಾವ ಚಿತ್ರಕ್ಕೆ ವಿಶೇಷ ಪೂಜೆಸಲ್ಲಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ

ಕೆಂಪೇಗೌಡರು ನಾವುಗಳು ಅವರ ಆದರ್ಶತೆ ಅವರು ಹಾಕಿಕೊಟ್ಟ ಸಮಾನದ ತತ್ವ ಆಧಾರದ ಮೇಲೆ ಮುಂದಿನ ತಲೆಮಾರಿಗೂ ಅವರ ಯೋಜನೆಗಳ ಅನುಷ್ಠಾನಗಳು ಇಂದಿಗೂ ನಾವು ನೋಡುತ್ತಿದ್ದು ಅಂತಹ ಮಹಾನ್ ನಾಯಕರ ಸ್ಮರಣೆ ಯನ್ನು ಮೈಗೂಡಿಸಿಕೊಳ್ಳುವುದು ನಮ್ಮಗಳ ಕರ್ತವ್ಯವೆಂದು ತಿಳಿಸಿದರು

ನಾಡಪ್ರಭು ಆಗಿನ ಕಾಲದಲ್ಲಿ ನಾಡಿನ ದೊರೆಯಾಗಿ ವಿವಿಧ ರಾಜ ಸಂತತಿಯ ಆಳ್ವಿಕೆಯ ಆಡಳಿತವನ್ನು ಮೈಗೂಡಿಸಿಕೊಂಡು ಆಡಳಿತ ನಡೆಸಿದವರಲ್ಲಿ ಕೆಂಪೇಗೌಡರು ಆಡಳಿತದಲ್ಲಿ ಸರ್ವ ಧರ್ಮಕ್ಕೂ ಸಮಪಾಲು ಎಂಬ ತತ್ವವನ್ನು ಅಳವಡಿಸಿಕೊಂಡು ಒಂದೇ ಜನಾಂಗಕ್ಕೆ ಸೀಮಿತವಾಗದೆ ಸಮಾನ ರನ್ನು ಕಾಣುತ್ತಿದ್ದ ರಲ್ಲಿ ನಾಡಪ್ರಭು ಅವರ ಕಾರ್ಯವೈಖರಿ ಪ್ರಸ್ತುತವಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿಗಳಾದಕುAuಟಿಜeಜಿiಟಿeಜ. ಅಹಮದ್ ಅಭಿಪ್ರಾಯಪಟ್ಟರು .

ಇದೇ ವೇಳೆ ಸಹಕಾರಿ ಮಂಡಲದ ನಿರ್ದೇಶಕರಾದ ರಾಜೇಗೌಡ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಸಿ ಎನ್ ಮಂಜುನಾಥ್ ಮಂಡ್ಯದ ನಿರ್ದೇಶಕರಾದ ನೆಲ್ಲಿಗೆರೆ ಬಾಲು ಶಿವಣ್ಣ ಕೆಂಪೇಗೌಡ್ರು ಪುರಸಭಾ ಸದಸ್ಯರಾದ ತಿಮ್ಮಪ್ಪ ರಾಮಸ್ವಾಮಿಗೌಡ ಅನೇಕರು ಉಪಸ್ಥಿತರಿದ್ದು ಹಾಗೂ ಇಲಾಖಾ ಸಿಬ್ಬಂದಿಗಳು ಅನೇಕ ಮುಖಂಡರು ಹಾಜರಿದ್ದು.
ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು…

ದೇವಲಾಪುರ ಜಗದೀಶ್ ನಾಗಮಂಗಲ

error: