May 3, 2024

Bhavana Tv

Its Your Channel

ನಾಗಮಂಗಲದಲ್ಲಿ ಗಬ್ಬೆದ್ದು ನಾರುತ್ತಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು

ನಾಗಮಂಗಲ: ನೋಡೋಕ್ಕೆ ದೊಡ್ಡ ಕಾಲೇಜು ಹೇಳೊಕೆ ಸಾವಿರ ಸಂಖ್ಯೆಯ ವಿದ್ಯಾರ್ಥಿಗಳಿರುವ ಕಾಲೇಜು ಎಂಬ ಹೆಗ್ಗಳಿಕೆಗೆ ಬೇರೆ, ಪದವಿ ಪೂರ್ವ ಮತ್ತು ಪ್ರೌಢ ಶಾಲೆ ವಿಭಾಗ ಇರುವ ಈ ಕಾಲೇಜಿಗೆ ಮೇಲೆಲ್ಲಾ ತಳುಕು ಒಳಗೆಲ್ಲಾ ಹುಳುಕು ಎಂಬ ಗಾದೆ ಮಾತು ಅಕ್ಷರಶಃ ಅನ್ವರ್ಥವಾಗುವಂತೆ ಕಾಣುತ್ತಿದೆ.

ಅರೆ..,.. ಅದ್ಯಾವ್ದಪ್ಪ ನಾಗಮಂಗಲದಲ್ಲಿ ಅಷ್ಟೊಂದು ಗಬ್ಬೆದ್ದು ನಾರುತ್ತಿರುವ ಕಾಲೇಜು ಅಂದ್ಕೊoಡ್ರಾ … ಇದೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು.

ಒಂದುವರೆ ವರ್ಷದಿಂದ ಕೊರೋನಾ ಕಾರಣಕ್ಕೆ ಮುಚ್ಚಿದ್ದ ಕಾಲೇಜಿಗೆ ಇಂದಿನಿoದ ಆರಂಭವಾಗಿರುವ ಪಿ.ಯು.ಸಿ ಪರೀಕ್ಷೆ ಮತ್ತು ೯ ತರಗತಿ ದಾಖಲಾತಿಗೆ ಆಗಮಿಸುವ ವಿದ್ಯಾರ್ಥಿಗಳು ಪೋಷಕರನ್ನು ಕಾಲೇಜಿನಲ್ಲಿ ಹುಕ್ಕಿ ಹರಿಯುತ್ತಿರುವ ಗಬ್ಬು ವಾಸನೆಯ
ಒಳಚರಂಡಿ ನೀರು ಸ್ವಾಗತ ಕೋರುತ್ತಿದ್ದು ಮೂಗು ಮುಚ್ಚಿಕೊಂಡು ಓಡಾಡುವ ದಯನೀಯ ಸ್ಥಿತಿ ಎದುರಾಗಿದೆ.

ನಾಗಮಂಗಲ ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕಾಲೇಜಿನ ಅಕ್ಷರ ದಾಸೋಹ ಅಡುಗೆ ಮನೆ ಹಿಂಭಾಗದಲ್ಲಿರುವ ಯುಜಿಡಿ ಹುಕ್ಕಿ ಕಾಲುವೆಯಂತೆ ಹರಿದು ಮೈದಾನದಲ್ಲಿ ಕೊಳಚೆ ನೀರು ಕಿರು ಕಟ್ಟೆಯಂತೆ ನಿಂತಿದ್ದು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಕಾಲೇಜಿನಲ್ಲಿ ತಾಂಡವಾಡುತ್ತಿರುವ ಅಶುಚಿತ್ವದ ಬಗ್ಗೆ ಶಾಸಕ ಸುರೇಶ್ ಗೌಡ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ.

ಕಾಲೇಜಿಗೆ ದಾಖಲಾತಿಯಾಗಲು ಆಗಮಿಸಿದ್ದ ವಿದ್ಯಾರ್ಥಿನಿ ನಾನು ವ್ಯಾಸಂಗ ಮಾಡುತ್ತಿರುವಾಗಿನಿಂದಲೂ ಇಲ್ಲಿಯ ಗಲೀಜು ತಪ್ಪಿಲ್ಲ ಇನ್ನಾದರೂ ಈ ಸಮಸ್ಯೆ ಸರಿಪಡಿಸಲಿ ಎಂದು ಮನವಿ ಮಾಡಿದ್ದಾಳೆ.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವಪ್ಪ ಈ ಬಗ್ಗೆ ಪ್ರತಿಕ್ರಿಯಿಸಿ ನಾವು ಪುರಸಭೆಗೆ ಪತ್ರಮುಖೇನ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು ಶಾಸಕರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.

ಇನ್ನಾದರೂ ಪುರಸಭೆ ಅಧಿಕಾರಿಗಳು ವಿದ್ಯಾರ್ಥಿಗಳ ಹಿತ ಕಾಪಾಡಲು ಹುಕ್ಕಿ ಹರಿಯುವ ಒಳಚರಂಡಿ ನೀರಿನ ಸಮಸ್ಯಗೆ ಕರ್ತವ್ಯ ಪ್ರಜ್ಞೆ ಮೆರೆಯಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವರದಿ:ಚಂದ್ರಮೌಳಿ ನಾಗಮಂಗಲ

error: