May 3, 2024

Bhavana Tv

Its Your Channel

ನಾಗಮಂಗಲದಲ್ಲಿ ಉಚಿತ ನೇತ್ರ ಮಸೂರ ಅಳವಡಿಕೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ.

ವರದಿ:ದೇವಲಾಪುರ ಜಗದೀಶ್ ನಾಗಮಂಗಲ

ನಾಗಮoಗಲ: ಆ.೨೫. ತಾಲೂಕಿನ ರೋಟರಿ ಕ್ಲಬ್ ಹಾಗೂ ಶ್ರೀ ಶಾರದಾ ರೋಟರಿ ಕಣ್ಣಿನ ಮತ್ತುದಂತ ಚಿಕಿತ್ಸಾಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಏರ್ಪಡಿಸಿದ್ದ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಒಟ್ಟು ೧೨೨ ಮಂದಿ ಭಾಗವಹಿಸಿದ್ದು ಅದರಲ್ಲಿ ೩೭ ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ.

ನಾಗಮಂಗಲ ರೋಟರಿ ಕ್ಲಬ್ ಅಧ್ಯಕ್ಷರಾದ ಎನ್.ಮಹೇಶ್ ಮಾತನಾಡಿ ನಾಗಮಂಗಲ ರೋಟರಿ ಕ್ಲಬ್ ಸುಮಾರು ೩೫ ವರ್ಷಗಳಿಂದ ಶಾರದಾ ರೋಟರಿ ಕಣ್ಣಿನ ಮತ್ತು ದಂತ ಚಿಕಿತ್ಸಾಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಚಿಕಿತ್ಸಾ ಶಿಬಿರವನ್ನು ಏರ್ಪಡಿಸುತ್ತಾ ಬಂದಿದ್ದು ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂದರ್ಭದಿAದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಈ ಸಮಯದಲ್ಲಿ ಕೋವಿಡ್ ನಿಯಂತ್ರಣದಲ್ಲಿ ಇರುವುದರಿಂದ ಮತ್ತೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಯನ್ನು ಪ್ರತಿ ತಿಂಗಳು ಮೂರನೇ ವಾರ ಏರ್ಪಡಿಸಿದ್ದೇವೆ ತಾಲೂಕಿನ ಸುತ್ತಮುತ್ತ ಸಾರ್ವಜನಿಕರು ಈ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಅವರ ಕಣ್ಣಿನ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು ಎಂದು ತಿಳಿಸಿದರು.

ಡಾ. ಧನಂಜಯ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳು,ಡಾ. ಅಶ್ವಥ್ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳು, ಡಾ. ಪ್ರಸನ್ನ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಡಾ. ವೆಂಕಟೇಶ್ ಮುಖ್ಯ ವೈದ್ಯಾಧಿಕಾರಿಗಳು,ಡಾ. ಪ್ರಕಾಶ್ ನಾಯಕ್ ನೇತ್ರ ವೈದ್ಯಾಧಿಕಾರಿಗಳು ಇವರ ಸಹಕಾರದೊಂದಿಗೆ ಇಂದು ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿಯಾಗಿದೆ ಹಾಗೂ ಆಯ್ಕೆಯಾದ ೩೭ ಜನರಿಗೆ ಬೆಂಗಳೂರಿನ ಶ್ರೀ ಶಾರದಾ ರೋಟರಿ ಕಣ್ಣಿನ ಆಸ್ಪತ್ರೆಯಲ್ಲಿ ನೇತ್ರ ಮಸೂರ ಅಳವಡಿಸಿ ನಂತರ ನಾಗಮಂಗಲಕ್ಕೆ ಕರೆತಂದು ಬಿಡುವ ವ್ಯವಸ್ಥೆಯನ್ನು ರೋಟರಿ ಸಂಸ್ಥೆ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಈ ಶಿಬಿರದಲ್ಲಿ ಕಾರ್ಯದರ್ಶಿ ರೊ. ಸೋಮೇಶಪ್ಪ, ಖಜಾಂಚಿ ರೊ. ಲಕ್ಷ್ಮೀನಾರಾಯಣ್, ರೋಟರಿ ಕ್ಲಬ್ ಚೇರ್ಮೆನ್ ರೊ. ಶೇಕ್ ಅಹಮದ್, ರೋಟರಿ ಟೆಸ್ಟ್ ಅಧ್ಯಕ್ಷ ನಾಗರಾಜ್ ಶೆಟ್ಟಿ, ಕಾರ್ಯದರ್ಶಿ ನಾಗರಾಜ್, ಗೋವಿಂದರಾಜು, ಮಾಜಿ ಕಾರ್ಯದರ್ಶಿ ಪ್ರಕಾಶ್ ಹಾಗೂ ಬೆಂಗಳೂರಿನ ಶಾರದ ರೋಟರಿ ಕಣ್ಣಿನ ವೈದ್ಯಾಧಿಕಾರಿಯಾಗಿ ಗಿರೀಶ್, ಮಹದೇವಪ್ಪ ಮುಂತಾದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

error: