May 2, 2024

Bhavana Tv

Its Your Channel

ಎನ್.ಆರ್.ಐ.ಜಿ ರಸ್ತೆ ಕಾಮಗಾರಿ ನಿರ್ಮಿಸಿ ಹುರಳಿ ಹುಚ್ಚೆಳ್ಳು ಬೆಳೆದ ಭ್ರಷ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು

ವರದಿ: ಚಂದ್ರಮೌಳಿ ಪಾಲಗ್ರಹಾರ

ನಾಗಮಂಗಲ. ಕೇಂದ್ರ ಸರ್ಕಾರದ ಮಹತ್ವವಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ಭೀಮನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೂರು ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಗಣಿಗ ಮುಖ್ಯ ರಸ್ತೆಯಿಂದ ಅರಣ್ಯ ಪ್ರದೇಶ ಮೂಲಕ ಬಸರಾಳು ಹೋಬಳಿಯ ಕದಬಹಳ್ಳಿಗೆ ಹಾದುಹೋಗುವ ಅರಣ್ಯ ರಸ್ತೆಯ ಪಕ್ಕದಲ್ಲೊಂದು ನಕಲಿ ರಸ್ತೆ ನಿರ್ಮಿಸಿ ಕಾಮಗಾರಿಯ ಬಿಲ್ ಪಾವತಿಸಿಕೊಂಡು ಕೇವಲ ಎರಡೇ ವರ್ಷದಲ್ಲಿ ಇದೆ ಎನ್.ಆರ್.ಐ.ಜಿ. ರಸ್ತೆಯಲ್ಲಿ ಹುರುಳಿ ಹುಚ್ಚೆಳ್ಳು ಬೆಳೆಗಳನ್ನು ಬೆಳೆದಿರುವ ಚಾಣಾಕ್ಷ ಅಧಿಕಾರಿಗಳು ಮಂಡ್ಯ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ನಾಗಮಂಗಲ ತಾಲೂಕು ಪ್ರಥಮಸ್ಥಾನ ಎನ್.ಆರ್.ಐ.ಜಿ. ಕಾಮಗಾರಿಗಳಲ್ಲಿ ಹೀಗೂ ಕೂಡ ಹಣ ಲೂಟಿ ಮಾಡಬಹುದೆಂದು ಭೀಮನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರು (ಉದ್ಯೋಗ ಖಾತ್ರಿ) ಹಾಗೂ ತಾಂತ್ರಿಕ ಸಹಾಯಕರು ರುಜುವಾತುಪಡಿಸಿದ್ದಾರೆ

ನಾಗಮಂಗಲ ತಾಲೂಕಿನ ಭೀಮನಹಳ್ಳಿ ಗ್ರಾಮ ಪಂಚಾಯತಿ ಮಂಡ್ಯ ಗಡಿಭಾಗಕ್ಕೆ ಬೆಸೆದುಕೊಂಡಿದ್ದು ಅಕ್ರಮ ಕಾಮಗಾರಿಗಳ ನಡೆಸಲು ಉತ್ತಮ ಜಾಗವಾಗಿದೆ ಇಲ್ಲಿ ನಡೆದಿರುವಂತಹ ಬಹುಪಾಲು ಕಾಮಗಾರಿಗಳು ಮಂಡ್ಯ ಗಡಿಭಾಗದಲ್ಲಿ ಸಾರ್ವಜನಿಕರು ಕೂಡ ವೀಕ್ಷಣೆ ಮಾಡದಂತಹ ಜಾಗದಲ್ಲಿ ಕಾಮಗಾರಿ ನಿರ್ವಹಿಸಿ ಜಾಣ್ಮೆ ತೋರಿದ್ದಾರೆ ಇಂತಹ ನೂರಾರು ಕಾಮಗಾರಿಗಳು ಈ ಸುತ್ತಮುತ್ತಲ ಗಡಿ ಪ್ರದೇಶದಲ್ಲಿ ನೂರಾರು ನಾಮಫಲಕ ನಿಲ್ಲಿಸಿ ಭೀಮನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ

ಭೀಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುನುಗನಹಳ್ಳಿ ಗಡಿಭಾಗದ ಗಣಿಗ ರಸ್ತೆಯ ಅರಣ್ಯ ಪ್ರದೇಶದ ಮೂಲಕ ಬಸರಾಳು ಹೋಬಳಿಯ ಕದಬಹಳ್ಳಿ ಗ್ರಾಮಕ್ಕೆ ಸೇರುವ ಒಂದು ರಸ್ತೆಯನ್ನು ಹತ್ತಾರು ವರ್ಷದ ಹಿಂದೆ ಮಂಡ್ಯ ಜಿಲ್ಲಾ ಪಂಚಾಯಿತಿ ವತಿಯಿಂದ ರಸ್ತೆ ನಿರ್ಮಿಸಲಾಗಿತ್ತು ಇಲ್ಲಿನ ಜನರು ಕೂಡ ಈ ರಸ್ತೆಯ ಮೂಲಕವೇ ಸಂಚರಿಸಲು ಉಪಯೋಗಿಸುತ್ತಿದ್ದಾರೆ ಆದರೆ ಭೀಮನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಣ ಲಪಟಾಯಿಸುವ ಉದ್ದೇಶದಿಂದ ಪ್ರಸ್ತುತ ಇರುವ ರಸ್ತೆಯ ಪಕ್ಕದಲ್ಲೊಂದು ನಕಲಿ ಎನ್.ಆರ್.ಐ.ಜಿ.(ಅಧಿಕೃತವಾಗಿ ನಾಮಫಲಕ ನಿಲ್ಲಿಸಿ) ರಸ್ತೆ ನಿರ್ಮಿಸಿ 2018.19 ನೇ ಸಾಲಿನಲ್ಲಿ ಎನ್.ಎಂ.ಅರ್.ಬಿಲ್ಲು ಎಂದು 1.45 ಲಕ್ಷ ರೂಪಾಯಿ ಡ್ರಾ ಮಾಡಲಾಗಿದೆ ನಂತರ ಸಾಮಗ್ರಿ ಬಿಲ್ 2019-.20 ಮತ್ತು 2020- 21.ನೇ ಎರಡು ವರ್ಷದಲ್ಲಿ ತಲಾ 20 ಸಾವಿರದಂತೆ 40 ಹಣ ಪಾವತಿಸಿ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಎಲ್ಲಿ ಕಾಮಗಾರಿಯನ್ನು ನಡೆಸಲು ಅದರದೇ ಆದ ನಿಯಮಾವಳಿಗಳು ಇರುತ್ತವೆ ಗ್ರಾಮ ಪಂಚಾಯತಿಯಲ್ಲಿ ಅನುಮೋದನೆ ಪಡೆದು ಜಾಬ್ ಕಾರ್ಡ್ ಮೂಲಕ ಕಾರ್ಯನಿರ್ವಹಿಸಬೇಕು ಸ್ಥಳೀಯರು ತಿಳಿಸುವಂತೆ ಇದೆಲ್ಲವನ್ನು ಗಾಳಿಗೆ ತೂರಿರುವ ಭ್ರಷ್ಟಾಚಾರಿ ಅಧಿಕಾರಿಗಳ ನಡೆಯನ್ನು ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳಾದ ಮಂಡ್ಯ ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಾದ ದಿವ್ಯ ಜೆ.ಪ್ರಭು ಹಾಗೂ ಜಿಲ್ಲಾಧಿಕಾರಿಗಳು ಅಶ್ವತಿ ರವರು ಗಡಿ ಭಾಗದ ಸ್ಥಳೀಯ ಕಾಮಗಾರಿಗಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಲು ಎಂಬುದು ಗ್ರಾಮಸ್ಥರ ಆಶಯವಾಗಿದೆ

error: