April 29, 2024

Bhavana Tv

Its Your Channel

ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಪ್ರಾದೇಶಿಕ ಸಭೆ

ನಾಗಮಂಗಲ: ನಾಗಮಂಗಲದಲ್ಲಿ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಪ್ರಾದೇಶಿಕ ಸಭೆಯಲ್ಲಿ ಮಂಡ್ಯ ಮನ್ ಮುಲ್ ವಿರುದ್ಧ ಸಮಸ್ಯೆಗಳ ಸುರಿಮಳೆ ಗೈದ ರೈತರಿಗೆ ಆಡಳಿತ ಮಂಡಳಿ ಹಾಲು ಖರೀದಿ ದರ ಏರಿಕೆಯ ಜೊತೆಗೆ ನಂದಿನಿ ಬ್ಯಾಂಕ್ ಸ್ಥಾಪನೆಯ ಸಿಹಿ ಸುದ್ದಿ ನೀಡಿದೆ.

ಮನ್ ಮುಲ್ ನಿರ್ದೇಶಕ ಕೋಟಿ ರವಿ ಮಾತನಾಡಿ ರೈತರನ್ನ ಆರ್ಥಿಕ ಸಬಲರನ್ನಾಗಿ ಮಾಡಲು ನಂದಿನಿ ಬ್ಯಾಂಕ್ ಸ್ಥಾಪನೆ ಮಾಡಿ, ಡೈರಿ ಷೇರುದಾರರ ಮಕ್ಕಳನ್ನೇ ಸಿಬ್ಬಂದಿಗೆ ನೇಮಕ ಮಾಡಿಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದರು

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಡೈರಿ ಅಧ್ಯಕ್ಷರು ಪಶು ವೈದ್ಯರು ಕನಿಷ್ಠ ಜಾನುವಾರು ಮುಟ್ಟಿಯೂ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದರು ಮತ್ತು ಹಾಲಿನ ಬೆಲೆ ಇಳಿಕೆ, ದುಬಾರಿ ಪಶು ಆಹಾರ, ಹಾಲು ಪರೀಕ್ಷೆ ಯಲ್ಲಿ ತಾರತಮ್ಯ ವಿರುದ್ಧ ಪ್ರಶ್ನೆಗಳು ಎದುರಾದವು, ರೈತರ ಪ್ರಶ್ನೆಗಳಿಗೆ ಉತ್ತರಿಸಿದ ಮನ್ ಮುಲ್ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ೨೦೨೨ರ ಏಪ್ರಿಲ್ ೧ ರಿಂದ ಯಾರು ಬೇಡ ಎಂದರೂ ಹಾಲು ಖರೀದಿಯಲ್ಲಿ ೩ ರೂ ಏರಿಕೆ ಮಾಡುತ್ತೇವೆ ಎಂದು ಸಿಹಿ ಸುದ್ದಿ ನೀಡಿದರು.

ಇದೆ ವೇಳೆ ಡೈರಿ ಕಾರ್ಯದರ್ಶಿಗಳಿಗೆ. ಜಾನುವಾರು ವಿಮೆ ಚೆಕ್ ವಿತರಣೆ ಮಾಡಿದರು, ಮತ್ತು ನಂದಿನಿ ಬ್ರಾಂಡ್ ಅಂಬಾಸಿಡರ್ ಆಗಿದ್ದ ಅಗಲಿದ ನಟ ಪುನಿತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ನಾಗಮಂಗಲ ತಾಲೂಕಿನ ಹಾಲು ಉತ್ಪಾದಕರ ಸಹಕಾರಸಂಘಗಳ ಒಕ್ಕೂಟದ ಪ್ರಾದೇಶಿಕ ಸಭೆಯಲ್ಲಿ ಪ್ರಧಾನ ವ್ಯವಸ್ಥಾಪಕ ರುದ್ರಯ್ಯ,ವ್ಯವಸ್ಥಾಪಕ ನಿರ್ದೇಶಕ ರವಿ, ಉದಯಕುಮಾರ್, ರೂಪ, ಇತರರು ಇದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: