April 26, 2024

Bhavana Tv

Its Your Channel

ಬಾಲಗಂಗಾಧರನಾಥ ಮಹಾಸ್ವಾಮಿಗಳ ಸಮಾಜಮುಖಿ ಮೌಲ್ಯಗಳು ನಮಗೆ ಆದರ್ಶವಾಗಲಿ -ಟಿ.ಕೃಷ್ಣಪ್ಪ

ನಾಗಮಂಗಲ. ಭೈರವೈಕ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ 77ನೇ ಜಯಂತೋತ್ಸವ ಹಾಗೂ 9.ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ತೊಳಲಿ ಗ್ರಾಮದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಕಾಲಭೈರವಸ್ವಾಮಿ ಕುಲಬಾಂಧವರು ಮತ್ತು ಗ್ರಾಮಸ್ಥರು ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ರವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ ಪೂಜೆ ಪುಷ್ಪಾರ್ಚನೆ ಮಾಡಿ ಸಿಹಿ ಹಂಚಿ ಭಕ್ತಿಪೂರ್ವಕವಾಗಿ ಆಚರಣೆ ಮಾಡಿದರು

ಕಾರ್ಯಕ್ರಮ ಉದ್ದೇಶಿಸಿ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಮಾತನಾಡಿ ಬಡ ಪ್ರದೇಶವಾದ ನಾಗಮಂಗಲ ತಾಲೂಕನ್ನು ವಿಶ್ವವೇ ಗುರುತಿಸುವಂತೆ ಮಾಡಿದ ಮಹಾನ್ ಪುರುಷ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ಬಡಜನತೆಯ ಶ್ರೇಯೋಭಿವೃದ್ಧಿಗಾಗಿ ಅನ್ನದಾನ. ಅಕ್ಷರದಾನ. ಮೂಲ ಉದ್ದೇಶವನ್ನಿಟ್ಟುಕೊಂಡು ನೂರಾರು ಸಮಾಜಮುಖಿ ಕೆಲಸವನ್ನು ಮಾಡಿದಂತಹ ಈ ಮಹಾನ್ ಪುರುಷರು ಬಡಜನತೆಗೆ ಸೇವಾ ಮನೋಭಾವನೆಯಿಂದ ಮಾಡಿದಂತಹ ಕೆಲಸಗಳು ಚಿರಸ್ಥಾಯಿಯಾಗಿ ಉಳಿದಿದೆ ಭೈರವೈಕ್ಯ ಆದರೂ ಕೂಡ ಅವರ ಕೆಲಸಗಳು ಅಜರಾಮರವಾಗಿವೆ ಎಂದರು

ನಾಗಮAಗಲ ಭಾರತೀಯ ಜನತಾ ಪಾರ್ಟಿ ಪ್ರಧಾನ ಕಾರ್ಯದರ್ಶಿ ತೊಳಲಿ ಕೃಷ್ಣಮೂರ್ತಿ ಮಾತನಾಡಿ ಪರಮಪೂಜ್ಯ ಮಹಾಸ್ವಾಮಿಗಳ ಸಮಾಜಕ್ಕೆ ನೀಡಿದ ಕೊಡುಗೆ ಎಲ್ಲಾ ಸಮುದಾಯಕ್ಕೂ ಕೂಡ ಸಂದಿದೆ ಮನುಷ್ಯ ರೂಪದಲ್ಲಿದ್ದ ವ್ಯಕ್ತಿ ದೇವರ ರೂಪದಲ್ಲಿ ಸಾವಿರಾರು ಸಮಾಜಮುಖಿ ಕೆಲಸಗಳು ಎಲ್ಲಾ ಸಮುದಾಯಕ್ಕೂ ಮಾಡಿ ಕೋಟಿ ಕೋಟಿ ಹೃದಯಗಳಲ್ಲಿ ಪೂಜ್ಯ ಭಾವನೆಯನ್ನು ಪಡೆದು ಪೂಜಿಸಲ್ಪಡುತ್ತಿರುವ ಮಹಾನ್ ವ್ಯಕ್ತಿ ಎಂದರು

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಮಂಜುನಾಥ್. ರಂಜಿತಾ. ಮೂರ್ತಿ. ಸಂತೋಷ್. ಈಶ್ವರ್. ಗಂಗೇಶ್. ರಾಮೇಗೌಡ. ಕೃಷ್ಣಪ್ಪ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: