ಉತ್ತರ – ಕನ್ನಡ ಜಿಲ್ಲೆ ಹಲವು ವೈಶಿಷ್ಟö್ಯಗಳ ತವರೂರು. ನದಿ, ಸಮುದ್ರ, ಬೆಟ್ಟ-ಗುಡ್ಡ, ಜಲಪಾತಗಳು ನಿಸರ್ಗದತ್ತ ಕೊಡುಗೆಗಳಾದರೆ, ಪ್ರೇಕ್ಷಣಿಯ, ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರಗಳು ಜಿಲ್ಲೆಗೆ ಇನ್ನಷ್ಟು ಮೆರಗನ್ನು ನೀಡಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊದಲ ಬೆಳ್ಳಿರಥೋತ್ಸವ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಹೊನ್ನಾವರ ತಾಲೂಕಿನಲ್ಲಿರುವ ಮಂಕಿ ಗ್ರಾಮದಲ್ಲಿ ನಡೆಯುವ ಬೆಳ್ಳಿ ರಥೋತ್ಸವ ಫೇಭ್ರವರಿ ೬ರÀಂದು ಶುಕ್ರವಾರ ನಡೆಯಲಿದೆ ಇ ಕುರಿತು ಒಂದು ವಿಶೇಷ ವರದಿ
ಹೊನ್ನಾವರ ತಾಲೂಕಿನ ಮಂಕಿ ರಾಷ್ಟಿçÃಯ ಹೆದ್ದಾರಿಯ ಪಕ್ಕದಲ್ಲಿರುವ ಶ್ರೀ ಸರ್ವೇಶ್ವರ ಆತ್ಮಾನಂದ ಸದ್ಗುರು ಸನ್ನಿಧಿಯು ರಾಜ್ಯದ ಹಾಗೂ ಗೋವಾ, ಮಹಾರಾಷ್ಟç ರಾಜ್ಯದ ಭಕ್ತರಿಗೆ ಶೃದ್ಧಾ ಕೇಂದ್ರ.
೧೯೧೭ರಲ್ಲಿ ಕುಮಟಾ ತಾಲೂಕಿನ ಧಾರೇಶ್ವರ ಪುಣ್ಯಕ್ಷೇತ್ರದಲ್ಲಿ ಜನಿಸಿದ ಮಹಾಪುರುಷರೇ ಶ್ರೀ ಸರ್ವೇಶ್ವರ ಆತ್ಮಾನಂದ ಸದ್ಗುರು ಮಹಾರಾಜರು… ….
ಈ ಕುರಿತು ಮಂಕಿಪುರ ಮಠದ ಅರ್ಚಕರಾದ ಶ್ರಿ ಶಿವಾ ರೇವಣಕರರವರು ಸದ್ಗುರುಗಳ ಕುರಿತು ತಮ್ಮಾ ಅಭಿಪ್ರಾಯವನ್ನು ಈ ರೀತಿಯಾಗಿ ವ್ಯಕ್ತಪಡಿಸುತ್ತಾರೆ.
ದೈವ ಭಕ್ತ ನಾರಾಯಣ ಹಾಗೂ ಲಕ್ಷಿö್ಮÃಬಾಯಿಯವರಿಗೆ ಅನೇಕ ಪೂಜೆ ಹರಕೆಗಳ ಫಲವಾಗಿ ಜನಿಸಿದ ಇವರಿಗೆ ‘ನರಸಿಂಹ’ ಎಂದು ನಾಮಕರಣ ಮಾಡಿದರು. ಬಾಲ್ಯದಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡ ಇವರು ಬಡತನದಲ್ಲಿಯೇ ಕಾಲ ಕಳೆಯಬೇಕಾಯಿತು. ಬಾಲ್ಯದಿಂದಲೇ ದೇವತಾರಾಧನೆಯಲ್ಲಿ ಲೀನರಾದ ಇವರಿಗೆ ಶಿಕ್ಷಣದಲ್ಲಿ ಆಸಕ್ತಿ ಇರಲಿಲ್ಲ.
ಸಾಧು ಸಂತರು, ಭಜನೆ, ಪೂಜನಾದಿಗಳು ಇವರ ನಿತ್ಯ ಸ್ಮರಣೆಗಳಾಗಿದ್ದವು. ಬಾಲ್ಯದಿಂದಲೇ ಕಣ್ಣ ಬೇನೆಯು ಹತ್ತಿಕೊಂಡು ಸೂರ್ಯ ಪ್ರಕಾಶವನ್ನೂ ಕೂಡ ನೋಡಲು ಸಾಧ್ಯವಾಗುತ್ತಿರಲಿಲ್ಲ. ಸುಮಾರು ೧೪ನೇ ವರ್ಷ ವಯಸ್ಸಿನಲ್ಲಿ ದೇವರು ತಪಸ್ಸಿಗೆ ಮೆಚ್ಚಿದನೊ ಎಂಬAತೆ ಸರ್ವವ್ಯಾಪಕ ಸರ್ವೇಶ್ವರನು ತದೇಕ ಧ್ಯಾನದಲ್ಲಿಯೇ ದರ್ಶನ ನೀಡಿದನು.
ಅಂದಿನಿAದ ಇವರ ಕಣ್ಣು ಬೇನೆ ಸಂಪೂರ್ಣ ವಾಸಿಗೊಂಡು ಸರಾಫಿ(ಬಂಗಾರ) ಉದ್ಯೋಗವನ್ನು ಆರಂಭಿಸಿದರು. ತಮ್ಮ ಜೀವನಕ್ಕೆ ಸಾಕಾದಷ್ಟು ಉಪಯೋಗಿಸಿ ಉಳಿದದ್ದನ್ನು ಧಾನ ಧರ್ಮ ಮಾಡಿ ಬಡವರಿಗೆ ಹಂಚುತ್ತಿದ್ದರು.
ತಮ್ಮ ಸಂಪಾದನೆಯಲ್ಲಿ ಧಾರ್ಮಿಕ ಕಾರ್ಯಗಳನ್ನೇ ಮಾಡುತ್ತಾ ಬಂದ ಇವರು ಧರ್ಮಪೀಠವನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಮಹಾರಾಷ್ಟçದ ನರಸಿಂಹ ವಾಡಿಯಲ್ಲಿ ಹೋಗಿ ಶ್ರೀ ನರಸಿಂಹ ಸರಸ್ವತಿ ಶ್ರೀ ಗುರುದತ್ತ ಮಹಾರಾಜರ ಉಪದೇಶ ಪಡೆದು ಅನೇಕ ವರ್ಷಗಳ ಕಾಲ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.
ಅನಂತರ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದಲ್ಲಿ ವಿಶಾಲವಾದ ಸ್ಥಳವನ್ನು ಖರೀದಿಸಿದರು. ದೇವರ ಪ್ರತಿಷ್ಠೆಯ ಸಲುವಾಗಿ ಚತುರ್ಧಾಯ ಮೃತ್ತಿಕಾ ಮತ್ತು ತೀರ್ಥವನ್ನು ತರುವದಕ್ಕಾಗಿ ಅಖಿಲ ಹಿಂದೂಸ್ಥಾನದ ಭೂ ಪ್ರದಕ್ಷಿಣೆ ಹಾಗೂ ತೀರ್ಥ ಯಾತ್ರೆಗಳನ್ನು ಮಾಡಿ ೨೧-೦೪-೧೯೫೦ರಲ್ಲಿ ಶ್ರೀ ಸರ್ವೇಶ್ವರ ಲಕ್ಷಿö್ಮÃ ನಾರಾಯಣ ಸದ್ಗುರು ಸಮರ್ಥರ ಪಾದುಕಾ ಸಹಿತ ಧರ್ಮಪೀಠ ಸ್ಥಾಪನೆ ಮಾಡಿದರು.
ಶ್ರೀ ಸದ್ಗುರು ಮಹಾರಾಜರ ತಪೋಬಲದಿಂದ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬಂದು ಸದ್ಗತಿ ಹೊಂದಿದ್ದಾರೆ. ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊAಡಿದ್ದಾರೆ. ಶ್ರೀ ಸದ್ಗುರುಗಳು ತಮ್ಮ ಕಷ್ಟ ಕಾರ್ಪಣ್ಯಗಳನ್ನೊತ್ತಿ ಬಂದ ಭಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಇಂದು ಪ್ರತಿನಿತ್ಯವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಬಂದ ಭಕ್ತರಿಗೆ ಅನ್ನದಾನ ಹಾಗೂ ವಾಸ್ತವ್ಯಕ್ಕೆ ವ್ಯವಸ್ಥೆ ಇದೆ. ಪ್ರತಿ ವರ್ಷ ಮುಖ್ಯವಾಗಿ ಬೆಳ್ಳಿ ರಥೋತ್ಸವ, ಅಕ್ಷಯ ತದಿಗೆಯಂದು ವರ್ಧಂತಿ ಉತ್ಸವ, ಗಣೇಶ ಚತುರ್ಥಿ, ನವರಾತ್ರಿ ಉತ್ಸವ, ದತ್ತ ಜಯಂತ ಹಾಗೂ ಸಹಸ್ರ ದೀಪೋತ್ಸವ ಕಾರ್ಯಕ್ರಮಗಳು ವಿಶೇಷವಾಗಿ ನಡೆಯುತ್ತವೆ. ಸದ್ಗುರು ಮಹಾರಾಜರು ದೈವೈಕ್ಯರಾಗಿದ್ದು ಆ ನಂತರವೂ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ.
ಫೆಬ್ರವರಿ ೭ ರಂದು ಶುಕ್ರವಾರ ಜಗನ್ಮಾತಾ ಸರ್ವೇಶ್ವರಿ ದೇವಿಯ ೫೮ನೇ ಬೆಳ್ಳಿ ಮಹಾರಥೋತ್ಸವ ನಡೆಯಲಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದು, ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇಲ್ಲಿ ಪ್ರತಿ ವರ್ಷ ಸೇರುವ ಜನಸ್ತೋಮ ಸದ್ಗುರು ಮಹಾರಾಜರ ತಪೋಬಲಕ್ಕೆ ಇಂದಿಗೂ ಸಾಕ್ಷಿಯಾಗಿದೆ.
ರಥೋತ್ಸವದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ವೃತ, ಮೃಗಬೇಟೆ ವಿವಿಧ ಕಾರ್ಯಕೃಮಗಳು ನಡೆಯಲಿವೆ. ಯಕ್ಷಗಾನ ಹಾಗೂ ವಿವಿಧ ಮನರಂಜನೆಗಳು ರಥೋತ್ಸವದ ಮೆರೆಗು ಹೆಚ್ಚಿಸಲಿದೆ.
More Stories
ನಿತ್ಯ ಅಪ್ಪನ ದಿನಾಚರಣೆ ಮತ್ತು ಮಕ್ಕಳು
ಪುನಃ ಕೊನೆಗೌಡರತ್ತ ಒಲವು ತೋರುತ್ತಿರುವ ಕೃಷಿಕರು
ಅಸ್ತಂಗತನಾದ ತಬಲಾಸೂರ್ಯ ಶ್ರೀ ಎನ್. ಎಸ್. ಹೆಗಡೆ ಹಿರೇಮಕ್ಕಿ.