April 20, 2024

Bhavana Tv

Its Your Channel

ಕೃಷ್ಣರಾಜಪೇಟೆ ಪುರಸಭೆಯ ವತಿಯಿಂದ ಪುರಸಭೆ ವ್ಯಾಪ್ತಿಯ ಐದು ಸ್ಮಂ ಕಾಲೋನಿಗಳಲ್ಲಿ ವಾಸವಾಗಿರುವ ಸಾರ್ವಜನಿಕರಿಗೆ ನಂದಿನಿ ಹಾಲೂ ವಿತರಣೆ

ಅಗ್ರಹಾರ ಬಡಾವಣೆ, ಚಕ್ಕೆಲವಂಗ ಬೀದಿ, ರಾಮಯ್ಯ ಕಾಲೋನಿ, ಹೊಸಹೊಳಲು ಸಿಂಗಮ್ಮ ದೇವಿ ದೇವಸ್ಥಾನ, ಮುಸ್ಲಿಂ ಬ್ಲಾಕ್, ಪೌರಕಾರ್ಮಿಕರ ಕಾಲೋನಿಗಳಿಗೆ ಮನೆಗೆ ಅರ್ಧ ಲೀಟರ್ ನಂತೆ ೭೫೦ ಲೀಟರ್ ಪರಿಶುದ್ಧ ನಂದಿನಿ ಟೋನ್ಡ್ ಹಾಲನ್ನು ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತು ಸಿಬ್ಬಂಧಿಗಳು ವಿತರಿಸಿದರು.

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ ೧೪ರವರೆಗೂ ಬೆಳಗಿನ ವೇಳೆಯಲ್ಲಿ ಪುರಸಭೆ ವ್ಯಾಪ್ತಿಯ ಐದು ಸ್ಮಂ ಕಾಲೋನಿಗಳಲ್ಲಿ ವಾಸವಾಗಿರುವ ಸುಮಾರು ಒಂದು ಸಾವಿರದ ನಾನೂರ ಐವತ್ತು ಕುಟುಂಬಗಳಿಗೆ ಮನೆಗೆ ಅರ್ಧ ಲೀಟರ್ ನಂದಿನಿ ಹಾಲನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ವಿತರಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ವಿವರಿಸಿದರು.

ತಾಲೂಕು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದೇವರಾಜು, ಮನ್ ಮುಲ್ ವೈದ್ಯರಾದ ಡಾ.ಮೋಹನ್, ಮಾರುಕಟ್ಟೆ ವ್ಯವಸ್ಥಾಪಕ ಹೆಮ್ಮನಹಳ್ಳಿ ರವಿ, ಪುರಸಭೆ ಸದಸ್ಯರಾದ ಕೆ.ಎಸ್. ಪ್ರಮೋದ್, ಡಿ.ಪ್ರೇಮಕುಮಾರ್, ಇಂದ್ರಾಣಿ ವಿಶ್ವನಾಥ್, ಶೋಭಾದಿನೇಶ್, ಕೆ.ಎಸ್.ಸಂತೋಷ್, ಹೆಚ್.ಆರ್.ಲೋಕೇಶ್, ಹೆಚ್.ಡಿ.ಅಶೋಕ್, ಪುರಸಭೆ ಪರಿಸರ ಎಂಜಿನಿಯರ್ ರಕ್ಷಿತ್, ನರಸಿಂಹಶೆಟ್ಟಿ ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು….

ವರದಿ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ .

error: