ಬೆಳಗಾವಿ ; ಕಠಿಣತರವಾದ ಕ್ರಮಗಳ ಅಗತ್ಯ ಇರುವುದಿಲ್ಲ. ಅತ್ಯಂತ ಅನಿವಾರ್ಯವಾಗಿರುವ ಸಂದರ್ಭದಲ್ಲಿ ರಸ್ತೆಗೆ ಬಂದಾಗ ಮಾಸ್ಟ್ ಬಳಸುವುದು ಕಡ್ಡಾಯ ಆಗಬೇಕು. ಯಾವುದೇ ವ್ಯಕ್ತಿ ಮಾಸ್ಕ್ ಧರಿಸುವುದರಿಂದ ಬೇರೆಯವರಿಗೆ ವೈರಾಣು ಹರಡದಂತೆ ಬೇರೆಯವರಿಂದ ತನಗೆ ಹರಡದಂತೆ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಸಾಮಾಜಿಕ ಅಂತರದ ಜೊತೆಯಲ್ಲಿ ಪ್ರತಿಯೊಬ್ಬರು ತಮ್ಮ ಹಾಗು ತಮ್ಮವರ ಪ್ರಾಣರಕ್ಷಣೆಗಾಗಿ ಗೃಹಬಂಧನದಲ್ಲಿದ್ದು, ರೋಗದ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಶ್ರೀಗಳು ಮನವಿ ಮಾಡಿದರು
ದೇಶಾದ್ಯಂತ ವ್ಯಾಪಿಸಿರುವ ಕೊರೊನಾ ೧೯ ವೈರಸ್ನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಎಲ್ಲ ಸಾಮಾಜಿಕ ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು, ರಥೋತ್ಸವಗಳು, ಜಾತ್ರೆಗಳು ನಡೆಸುವುದನ್ನು ರದ್ದುಗೊಳಿಸಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಆದೇಶಿಸಿರುವ ಪ್ರಯುಕ್ತ ಅಥಣಿ ಗಚ್ಚಿನಮಠದಲ್ಲಿ ಏಪ್ರಿಲ್ ೯ರಂದು ನಡೆಯಬೇಕಾಗಿದ್ದ ಈ ವರ್ಷದ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಇದೆ ವೇಳೆ ಮಾತನಾಡಿ ಈ ಸಾಂಕ್ರಾಮಿಕ ರೋಗದಿಂದ ಸಾಕಷ್ಟು ಜನರು ತೊಂದರೆಗೆ ಒಳಗಾಗುತ್ತಿದ್ದಾರೆ. ಇಂದಿನ ಅಗತ್ಯವೆಂದರೆ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರಾಥಮಿಕ ಹಂತವಾಗಿದೆ. ಯಾವುದೇ ಹಂತದಲ್ಲೂ ಜನರು ಗುಂಪು ಸೇರುವುದನ್ನು ತಡೆಯಬೇಕು. ಸರ್ಕಾರ ಅಥವಾ ಪೊಲೀಸ್ ಮುಖಾಂತರವಾಗಿ ಕ್ರಮಗಳನ್ನು ಜರುಗಿಸುವುದಕ್ಕಿಂತ ಜನರೆ ತಮ್ಮ ಸಂರಕ್ಷಣೆ ಮಾಡಿಕೊಳ್ಳುವಂತಾಗಬೇಕು ಎಂದರು.
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ