
ಸವದತ್ತಿ : ಸವದತ್ತಿ ಯಲ್ಲಮ್ಮ ಪುರಸಭೆಯ ವತಿಯಿಂದ ಲಿಂಗರಾಜ ಸರ್ಕಲ್ ಪುರಸಭೆಯ ಮುಂದೆ ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ದ್ರಾವಣ ಸಿಂಪಡಣಾ ಸುರಂಗ ಮಾರ್ಗಕ್ಕೆ ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಚಾಲನೆ ನೀಡಿದರು.
ಸವದತ್ತಿ ಶಹರದಲ್ಲಿ ಅಗತ್ಯ ವಸ್ತುಗಳ ಖರೀದಿಗೋಸ್ಕರ ಹೊರ ಬರುವವರು ಈ ಸುರಂಗ ಮಾರ್ಗ ಬಳಸಬಹುದಾಗಿದೆ. ಪುರಸಭೆಯವರು ನಿರ್ಮಾಣ ಮಾಡಿರುವ ಈ ಸುರಂಗ ಮಾರ್ಗದಿಂದ ಸೋಂಕು ತಡೆಗಟ್ಟಲು ಸಾದ್ಯವಿದೆ ಕಾರಣ ಶಹರದ ಪ್ರಮುಖ ಸ್ಥಳಗಳಲ್ಲಿ ೫ ಘಟಕಗಳನ್ನು ಸೋಮವಾರ ಒಳಗೆ ಸ್ಥಾಪನೆ ಮಾಡಿ ಎಂದು ಉಪ ಸಭಾಪತಿ ಆನಂದ ಮಾಮನಿ ಮುಖ್ಯಾಧಿಕಾರಿ ಕೆ.ಐ.ನಾಗನೂರ ಮತ್ತು ಹಿರಿಯ ಆರೋಗ್ಯ ಅಧಿಕಾರಿ ಪ್ರಕಾಶ ಮಠದ ಅವರಿಗೆ ಸೂಚಿಸಿದರು.
ಪುರಸಭೆ ಸದಸ್ಯರಾದ ದೀಪಕ ಜಾನ್ವೇಕರ.ಅರ್ಜುನ ಅಮೋಜಿ. ಮಾಜಿ ಪುರಸಭೆ ಅಧ್ಯಕ್ಷ ಶಿವಾನಂದ ಹೂಗಾರ.ತಹಶಿಲ್ದಾರ ಪ್ರಶಾಂತ ಪಾಟೀಲ.ಸಿಪಿಐ ಮಂಜುನಾಥ ನಡುವಿನಮನಿ. ಪಿಎಸ್‌ಆಯ್.ಕೆ.ನಾಗನಗೌಡ್ರ.ಇದ್ದರು.
More Stories
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಕಾಂಗ್ರೆಸ್ ಮುಖಂಡರಿoದ ಪಟಾಕಿ ಸಿಡಿಸಿ ಸಿಹಿ ವಿತರಣೆ
ಪ್ರಜ್ಞಾವಂತರ ವೇದಿಕೆ ಶ್ರೀರಂಗಪಟ್ಟಣ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ