May 15, 2024

Bhavana Tv

Its Your Channel

ಕರ್ನಾಟಕಕ್ಕೆ ಕೊರೋನಾಘಾತ: ಇಂದು ಹೊಸದಾಗಿ ೧೭೬ ಪ್ರಕರಣ ಪತ್ತೆ, ೫ ಬಲಿ, ಸೋಂಕಿತರ ಸಂಖ್ಯೆ ೭೦೦೦ಕ್ಕೆ ಏರಿಕೆ!

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-೧೯ ಸೋಂಕಿತರ ಸಂಖ್ಯೆಯಲ್ಲಿ ಇಂದು ಮತ್ತೆ ಹೆಚ್ಚಳ ಕಂಡಿದೆ. ಇಂದು ಹೊಸದಾಗಿ ೧೭೬ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ ೭೦೦೦ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ೫ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿ ೪೨ ಜನರಿಗೆ ಸೋಂಕು ದೃಢವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ೨೨ ಜನರಿಗೆ ಸೋಂಕು ದೃಢವಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ ೨೧ ಜನರಿಗೆ ಕೋವಿಡ್-೧೯ ಸೋಂಕು ಪತ್ತೆಯಾಗಿದೆ.

ಬೀದರ್ ನಲ್ಲಿ ೨೦ ಜನರಿಗೆ ಸೋಂಕು ತಾಗಿದ್ದರೆ, ಕಲಬುರಗಿಯಲ್ಲಿ ೧೩, ಧಾರವಾಡದಲ್ಲಿ ೧೦, ಬಳ್ಳಾರಿಯಲ್ಲಿ ೮, ಕೋಲಾರದಲ್ಲಿ ೭, ಉತ್ತರ ಕನ್ನಡ ಜಲ್ಲೆಯಲ್ಲಿ ೬, ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ ಐವರಿಗೆ ಸೋಂಕು ತಾಗಿರುವುದು ದೃಢವಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ೪ ಮಂದಿಗೆ ಸೋಂಕು ದೃಡಪಟ್ಟರೆ, ರಾಮನಗರದಲ್ಲಿ ೩, ರಾಯಚೂರು ಮತ್ತು ಶಿವಮೊಗ್ಗದಲ್ಲಿ ೨., ಬೆಳಗಾವಿ, ಹಾಸನ, ವಿಜಯಪುರ, ಬೆಂಗಳೂರು ಗ್ರಾಮಾಂತರ ಮತ್ತು ಹಾವೇರಿಯಲ್ಲಿ ತಲಾ ಒಂದು ಕೋವಿಡ್ ಪ್ರಕರಣಗಳು ದೃಢವಾಗಿದೆ.

ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ ೭೦೦೦ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ ೩೧೨ ಮಂದಿ ಗುಣಮಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ ಒಟ್ಟು ೩೯೫೫ ಮಂದಿ ಸೋಂಕಿತರು ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ. ಇಂದು ಸೋಂಕಿನ ಕಾರಣದಿಂದ ಒಟ್ಟು ಐದು ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ ೮೬ಕ್ಕೆ ಏರಿಕೆಯಾಗಿದೆ.

error: