May 14, 2024

Bhavana Tv

Its Your Channel

ಕೊರೊನಾ ವೈರಸ್ ಮಹಾಸ್ಫೋಟ, ೩೧೭ ಹೊಸ ಕರೊನಾ ಪ್ರಕರಣಗಳು; ೧೦೮ ಮಂದಿ ಅಂತಾರಾಜ್ಯ ಪ್ರಯಾಣಿಕರು

ಬೆಂಗಳೂರು : ಕರ್ನಾಟಕದಲ್ಲಿ ಮಂಗಳವಾರ ಕೊರೊನಾ ವೈರಸ್ ಮಹಾಸ್ಫೋಟ ಸಂಭವಿಸಿದೆ. ಒಂದೇ ದಿನ ಬರೋಬ್ಬರಿ ೩೧೭ ಮಂದಿಗೆ ಕೊವಿಡ್-೧೯ ಮಹಾಮಾರಿ ಅಂಟಿಕೊoಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೭೫೩೦ಕ್ಕೆ ಏರಿಕೆಯಾಗಿದೆ.

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಬೆಂಗಳೂರಿನ ಮಂದಿಗೆ ಬಿಗ್ ಶಾಕ್ ನೀಡಿದೆ. ಬೆಂಗಳೂರು ಮಹಾಮಾರಿಗೆ ಐವರು ಪ್ರಾಣ ಬಿಟ್ಟಿದ್ದು, ೪೭ ಜನರಿಗೆ ಸೋಂಕು ಪತ್ತೆಯಾಗಿದೆ.
ಮಂಗಳವಾರ ೩೧೭ ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ೩೨೨ ಸೋಂಕಿತರು ಗುಣಮುಖರಾಗಿದ್ದಾರೆ.
ಕರ್ನಾಟಕದಲ್ಲಿ ಒಟ್ಟು ೩೧೭ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ದಕ್ಷಿಣ ಕನ್ನಡ -೭೯, ಕಲಬುರಗಿ – ೬೩, ಬಳ್ಳಾರಿ – ೫೩, ಬೆಂಗಳೂರು ನಗರ – ೪೭, ಧಾರವಾಡ – ೮, ಉಡುಪಿ – ೭, ಶಿವಮೊಗ್ಗ – ೭, ಯಾದಗಿರಿ – ೬, ರಾಯಚೂರು -೬, ಉತ್ತರ ಕನ್ನಡ – ೬, ಹಾಸನ – ೫, ವಿಜಯಪುರ – ೪, ಮೈಸೂರು – ೪, ರಾಮನಗರ – ೪, ಚಿಕ್ಕಮಗಳೂರು – ೪, ಕೊಪ್ಪಳ – ೪, ಬೆಳಗಾವಿ – ೩, ಬೀದರ್ – ೨, ತುಮಕೂರು – ೧ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಕರ್ನಾಟಕದಲ್ಲಿ ಒಟ್ಟು ೩೧೭ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ ಒಂದೇ ದಿನ ೩೨೨ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಡುಪಿ -೮೧, ಯಾದಗಿರಿ -೫೦, ರಾಯಚೂರು -೪೬, ಬೆಂಗಳೂರು ನಗರ -೩೨, ಮಂಡ್ಯ -೨೧, ವಿಜಯಪುರ -೧೮, ಕಲಬುರಗಿ – ೧೫, ದಕ್ಷಿಣ ಕನ್ನಡ – ೧೧, ಮೈಸೂರು – ೧೦, ದಾವಣಗೆರೆ – ೧೦, ಬೆಳಗಾವಿ – ೯, ಚಿಕ್ಕಬಳ್ಳಾಪುರ -೮, ತುಮಕೂರು – ೩, ಬಾಗಲಕೋಟೆ – ೨, ಹಾಸನ – ೨, ಗದಗ – ೨, ಬೆಂಗಳೂರು ಗ್ರಾಮಾಂತರ – ೧, ಬೀದರ್ -೧ ಸೋಂಕಿತರು ಗುಣಮುಖರಾಗಿದ್ದಾರೆ.
ಇಂದು ಪತ್ತೆಯಾದ ಸೋಂಕಿತರಲ್ಲಿ ೭೮ ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು. ೧೦೮ ಜನರು ಅಂತಾರಾಜ್ಯ ಪ್ರಯಾಣಿಕರು ಎಂದು ಗುರುತಿಸಲಾಗಿದೆ.

error: