April 22, 2021

Bhavana Tv

Its Your Channel

ಅನುದಾನಿತ ಪ್ರೌಢ ಶಾಲೆಯ ಆಸಕ್ತ ವಿದ್ಯಾರ್ಥಿಗಳಿಗೆ ಎನ್. ಎಂ.ಎಂ.ಎಸ್ ಪರೀಕ್ಷೆಯ ತರಬೇತಿ.

ಕಾರ್ಕಳ(ಜ.೨): ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯಲ್ಲಿ ಸರಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಯ ಆಸಕ್ತ ವಿದ್ಯಾರ್ಥಿಗಳಿಗೆ ಎನ್ ಎಂ ಎಂ ಎಸ್ ಪರೀಕ್ಷೆಯ ತರಬೇತಿ ಕೇಂದ್ರವನ್ನು ಕಾರ್ಕಳ ಶಿಕ್ಷಣ ಇಲಾಖೆಯು ಪ್ರಾರಂಭಿಸಿದೆ. ೪೦ ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾರ್ಕಳ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳ ಮೂಲಕ ಮಾರ್ಗದರ್ಶನ ಮಾಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ವೃಂದಾ ಶೆಣೈ . ಈ ತರಬೇತಿಯ ಸಂಪನ್ಮೂಲ ಶಿಕ್ಷಕರಾದ ಶ್ರೀ ದಿವ್ಯಾಕುಮಾರ್ ಸಂಪನ್ಮೂಲ ಶಿಕ್ಷಕಿ ಶ್ರೀಮತಿ ಶಂಕರಿ ಶಿಕ್ಷಣ ಸಂಯೋಜಕ ಶಿಕ್ಷಕ ಬಾಲಕೃಷ್ಣ ಶಿಕ್ಷಕ ಗಣೇಶ್ ಜಾಲ್ಸೂರು ಉಪಸ್ಥಿತರಿದ್ದರು. ಈ ಕೇಂದ್ರದಲ್ಲಿ ೪೦ ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯುತ್ತಿದ್ದಾರೆ. ಹಾಗೆಯೇ ತಾಲೂಕಿನ ಒಟ್ಟು ಇತರ ೬ ಕೇಂದ್ರಗಳಲ್ಲಿ ತರಬೇತಿ ನಡೆಯುತ್ತಿದೆ.

error: