April 22, 2021

Bhavana Tv

Its Your Channel

ಮೀನುಗಾರರ ಮತ್ತು ಮೀನು ಕಾಮಿ೯ಕರ ಸಮಾವೇಶ.

ಉಡುಪಿ: ಅಖಿಲ ಭಾರತ ಮೀನುಗಾರರ ಮತ್ತು ಮೀನು ಕಾಮಿ೯ಕರ ಪೆಡರೇಷನ್ ನವದೆಹಲಿ ಸಂಯೋಜಿಸಲ್ಪಟ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾಮಿ೯ಕರ ಸಂಘದ ಉಡುಪಿ ತಾಲೂಕು ಸಮಾವೇಶವು ಬನ್ನಂಜೆ ನಾರಾಯಣ ಗುರು ಮಂದಿರದ ಶಿವಗಿರಿ ಸಭಾಂಗಣದಲ್ಲಿ ಯಶಸ್ವಿಯಾಗಿ ಜರಗಿತು. ಮಿನುಗಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಶಂಕರ್ ಸಮಾವೇಶ ಉದ್ಘಾಟಿಸಿ ಮಾತನಾಡಿ ದ್ವಿಚಕ್ರ ವಾಹನದಲ್ಲಿ ಮೀನು ಮಾರಾಟ ಮಾಡುವ ವ್ಯಾಪರಸ್ಥರಿಗೆ ಮೀನುಗಾರಿಕಾ ಇಲಾಖಾ ವತಿಯಿಂದ ಗುರುತಿನ ಚೀಟಿ ಕೊಡಬೇಕು ಹಾಗೂ ಮೀನು ವ್ಯಾಪಾರಸ್ಥರಿಗೆ ನಿಬಡ್ಡಿ ಸಾಲ ಸೌಲಭ್ಯ ಕೊಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಮೀನುಗಾರರ ಉಡುಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಕೋಣಿ ಮಾತನಾಡುತ್ತಾ,ಮೀನುಗಾರರವಿವಿಧ ಬೇಡಿಕೆಗಳನ್ನು ಈಡೇರಿಸಲು ಸಂಬAದಪಟ್ಟ ಇಲಾಖೆಯ ಜತೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಂಘದ ಮುಖಂಡರ ಜಂಟಿ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ,ಉಮೇಶ್ ಕುಂದರ್,ಕವಿರಾಜ್.ಎಸ್. ಶಶಿಧರ ಗೊಲ್ಲ,ನಳಿನಿ.ಎಸ್ ಶುಭ ಕೋರಿ ಮಾತನಾಡಿದರು. ಮೀನುಗಾರರ ಸಂಘದ ಮುಖಂಡರಾದ ಇಸ್ಮಾಯಿಲ್ ಕಾಪು,ಅನ್ವರ್,ವಸಂತ,ಅಬ್ದುಲ್ ಕಾದರ್,ನಜೀರ್ ಅಹ್ಮದ್,ಅಬ್ದುಲ್ ಲತೀಪ್,ಅನ್ವರ್ ಕಟಪಾಡಿ,ಅನ್ವರ್ ಉಪ್ಪೂರ್ ಪಸ್ಥಿತರಿದ್ದರು. ಮಹೇಶ್ ಪೂಜಾರಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು

error: