May 14, 2024

Bhavana Tv

Its Your Channel

ಕಾರ್ಕಳ ತಾಲೂಕಿನಲ್ಲಿ ವೀಕೆಂಡ್ ಕರ್ಫ್ಯೂಗೆ ನಗರ ಸಂಪೂರ್ಣ ಸ್ತಬ್ಧ.

ಕಾರ್ಕಳ ; ಆದಿತ್ಯವಾರದ ವೀಕೆಂಡ್ ಕರ್ಫ್ಯೂಗೆ ಕಾರ್ಕಳದ ಪೇಟೆ ಹಾಗೂ ತಾಲೂಕಿನಾದ್ಯಂತ ಸಂಪೂರ್ಣ ಸ್ತಬ್ದಗೊಂಡಿದೆ. ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು ಜನ ಹಾಗೂ ವಾಹನ ಸಂಚಾರವಿಲ್ಲದೆ ಇಡೀ ಪರಿಸರ ಬಿಕೋ ಎನ್ನುತ್ತಿತ್ತು, ಬೆರಳೆಣಿಕೆಯ ಸರಕು ಸಾಗಾಟದ ವಾಹನಗಳು ಮದುವೆಯ ವಾಹನಗಳು ಓಡಾಟ ನಡೆಸುತ್ತಿದ್ದು ವಾಹನ ಸಂಚಾರ ವಿರಳವಾಗಿತ್ತು. ರಿಕ್ಷಾ ಕಾರು ಟ್ಯಾಕ್ಸಿ ಬಸ್ಸು ಸಂಚಾರವಿಲ್ಲದೆ ರಸ್ತೆಗಳು ಖಾಲಿಯಾಗಿದ್ದವು. ಬೆಳಿಗ್ಗೆ ಹತ್ತು ಗಂಟೆಯ ತನಕ ಅಗತ್ಯ ವಸ್ತುಗಳ ಪೂರೈಕೆ ಅಂಗಡಿಗಳು ತೆರೆದಿದ್ದು ಅಂಗಡಿ-ಮುಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಒಟ್ಟಾರೆಯಾಗಿ ತಾಲೂಕಿನಲ್ಲಿ ಸರಕಾರದ ವೀಕೆಂಡ್ ಕರ್ಫ್ಯೂಗೆ ನಗರ ಸಂಪೂರ್ಣ ಸ್ತಬ್ಧಗೊಂಡಿತ್ತು.

error: