May 14, 2024

Bhavana Tv

Its Your Channel

ಕಾರ್ಕಳ ಪೇಟೆಯಲ್ಲಿ ಭಾಗಶಃ ಬಂದ್.ಮಾಸ್ಕ್ ಧರಿಸದವರ ವಿರುದ್ದ ಕ್ರಮ

ಕಾರ್ಕಳ: ಕಾರ್ಕಳ ಲಾಕ್‌ಡೌನ್‌ನಿಂದ ರಸ್ತೆಗಳೆಲ್ಲ ನಿರ್ಜನ ವಾಗಿದ್ದು ಕಾರ್ಕಳ ಪೇಟೆಯ ಭಾಗದಲ್ಲಿ ಇಂದು ಸೋಮವಾರ ವಾಹನ ಸಂಚಾರ ಹೆಚ್ಚಾಗಿ ಕಂಡು ಬಂದು ಜನರು ಅಗತ್ಯ ದಿನಬಳಕೆಯ ವಸ್ತುಗಳ ಖರೀದಿ ಯಲ್ಲಿ ತೊಡಗಿದ್ದು ಒಂದೆಡೆ ಪೊಲೀಸರು ಹಾಗು ಪುರಸಭೆ ಯ ಕಂದಾಯ ಅಧಿಕಾರಿ ಸಂತೋಷ್ ಹಾಗು ಕಚೇರಿಯ ಸಿಬ್ಬಂದಿಗಳಾದ ಜಗದೀಶ್ ಇನ್ನಿತರರು ಅಗತ್ಯ ವಸ್ತುಗಳ ಹಾಗು ದಿನಬಳಕೆಯ ವಸ್ತುಗಳಲ್ಲದೆ ಇನ್ನಿತರ ಅಂಗಡಿಗಳನ್ನೂ ಮುಚ್ಚಿಸ ಲಾಯಿತು. ವ್ಯಾಪಾರಸ್ತರಿಗೆ ಒಂದು ರೀತಿಯ ಗೊಂದಲದ ವಾತಾವರಣ .ಚಿನ್ನದ ಅಂಗಡಿ, ಬಟ್ಟೆ ಅಂಗಡಿ ಮುಚಿದ್ದರೂ ಇನ್ನಿತರ ಅಂಗಡಿ ಗಳು ತೆರೆದಿತ್ತು ಹೋಟೆಲ್ ನಲ್ಲಿ ಪಾರ್ಸಲ್ ವ್ಯವಸ್ಥೆ ಗೆ ಅವಕಾಶ ನೀಡಲಾಗಿತ್ತು.ಎಲ್ಲಾ ಹೋಟೆಲ್ ಅಂಗಡಿಗೆ ಪುರ ಸಭೆಯ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪುಸ್ತಕ ಸ್ಟೇಷನರಿ ಅಂಗಡಿಗೆ ಭೇಟಿ ನೀಡಿ ಅದನ್ನು ಮುಚ್ಚಿಸಿದರು. ಒಟ್ಟಾರೆ ಕಾರ್ಕಳ ಅಂಗಡಿ ಮಾಲೀಕರಿಗೆ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಅಂತೂ ಇಂತೂ ಕರೋನಾದ ಎರಡನೆಯ ಅಲೆ ಗೊಂದಲಮಯ ವಾತಾವರಣ ಸೃಷ್ಟಿ ಮಾಡಿತ್ತು.ರಸ್ತೆಯಲ್ಲಿ ಓಡಾಡುವ ಜನರು ಹೆಚ್ಚಾಗಿ ಮಾಸ್ಕ್ ನ್ನು ಧರಿಸಿದ್ದರು. ಮಾಸ್ಕ್ ಧರಿಸದಿದ್ದಲ್ಲಿ ಫೈನ್ ಕಟ್ಟಬೇಕೆಂಬ ಅರಿವು ಜನರಿಗೆ ಮೂಡಿತ್ತು.

.

error: